ಮೇಷ: ದಾಯಾದಿಗಳಲ್ಲಿ ಕಲಹವಾದೀತು. ಶತ್ರು ಬಾಧೆ. ತಾಯಿಯ ಆರೋಗ್ಯದಲ್ಲಿ ಏರುಪೇರು. ಸಂಗಾತಿಯಿಂದ ಅಧಿಕ ಖರ್ಚು. ಶುಭಸಂಖ್ಯೆ: 5
ವೃಷಭ: ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ. ವಸ್ತ್ರಾಭರಣ ಖರೀದಿ. ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 9
ಮಿಥುನ: ಉದ್ಯೋಗದ ಸ್ಥಳ ಬದಲಾವಣೆಯಾದೀತು. ತಂದೆಗೆ ಅನಾರೋಗ್ಯ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ. ಇಲ್ಲಸಲ್ಲದ ತಕರಾರು. ಶುಭಸಂಖ್ಯೆ: 3
ಕಟಕ: ಹಳೆಯ ಮಿತ್ರರ ಭೇಟಿ. ಕಾರ್ಯಸಾಧನೆಗಾಗಿ ತಿರುಗಾಟ. ಕೃಷಿಯಲ್ಲಿ ಲಾಭ. ಸಾರ್ವಜನಿಕ ರಂಗದಲ್ಲಿ ಹೊಸ ಅನುಭವ. ಶುಭಸಂಖ್ಯೆ: 7
ಸಿಂಹ: ಸ್ತ್ರೀಯರಿಗೆ ಉನ್ನತ ಸ್ಥಾನಮಾನ ಲಭ್ಯ. ಕೃಷಿಕರಿಗೆ ಆದಾಯಕ್ಕಿಂತ ಖರ್ಚು ಜಾಸ್ತಿ ಆಗಬಹುದು. ಕುಟುಂಬದಲ್ಲಿ ಮನಶಾಂತಿ. ಶುಭಸಂಖ್ಯೆ: 3
ಕನ್ಯಾ: ಕಚೇರಿಯ ಕೆಲಸ ಕಾರ್ಯಗಳಲ್ಲಿ ವಿಳಂಬವಾದೀತು. ಶರೀರದಲ್ಲಿ ಆತಂಕ, ಮನಸ್ಸಿಗೆ ವ್ಯಥೆ. ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 8
ತುಲಾ: ಖಾಸಗಿ ಕೆಲಸಕ್ಕೆ ದೂರ ಪ್ರಯಾಣ. ಹೃದಯ ಸಂಬಂಧಿ ರೋಗ ಉಲ್ಬಣ. ಪರಸ್ತ್ರೀಯಿಂದ ತೊಂದರೆ. ಚಂಚಲ ಮನಸ್ಸು. ಶುಭಸಂಖ್ಯೆ: 3
ವೃಶ್ಚಿಕ: ನಂಬಿದ ಜನರಿಂದ ಮೋಸವಾದೀತು. ನಟರಿಗೆ ಅವಮಾನ. ಕುಟುಂಬದಲ್ಲಿ ಕಲಹ. ಆತ್ಮೀಯ ಸ್ನೇಹಿತರಿಂದ ಸಮಾಧಾನ. ಶುಭಸಂಖ್ಯೆ: 4
ಧನುಸ್ಸು: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ವಿರೋಧಿಗಳಿಂದ ಪ್ರತಿರೋಧ. ಅನ್ಯರಲ್ಲಿ ಸಹಾಯ. ಚಿನ್ನಾಭರಣ ವ್ಯಾಪಾರಿಗಳಿಗೆ ಮೋಸ. ಶುಭಸಂಖ್ಯೆ: 7
ಮಕರ: ಉನ್ನತ ವಿದ್ಯಾಭ್ಯಾಸದ ಹಾದಿಯಲ್ಲಿ ಜಯ. ಗಣ್ಯ ವ್ಯಕ್ತಿಗಳ ಭೇಟಿ. ಸಾಲಬಾಧೆ. ವಾಹನ ಹಾನಿ. ಋಣಬಾಧೆ ಕಾಡುವುದು. ಶುಭಸಂಖ್ಯೆ: 2
ಕುಂಭ: ಹಿತಶತ್ರುಗಳ ಕಾಟ ವಿಪರೀತ ಜಾಸ್ತಿಯಾಗಬಹುದು. ಇತರರ ಭಾವನೆಗೆ ಸ್ಪಂದಿಸುವಿರಿ. ಸಂತಾನ ಅಪೇಕ್ಷಿತರಿಗೆ ಸಿಹಿ ಸುದ್ದಿ. ಶುಭಸಂಖ್ಯೆ: 3
ಮೀನ: ಕುಲದೇವರ ದರ್ಶನದಿಂದ ಸಮಾಧಾನ. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ. ಖರೀದಿಯಲ್ಲಿ ಮೋಸ. ನ್ಯಾಯಾಲಯದಲ್ಲಿ ಹಿನ್ನಡೆ. ಶುಭಸಂಖ್ಯೆ: 5