ನ್ಯೂಸ್

ಈ ರಾಶಿಯವರಿಗಿಂದು ಆರ್ಥಿಕ ಸ್ಥಿತಿ ಉತ್ತಮವಾಗಿ ಮಾನಸಿಕ ನೆಮ್ಮದಿ: ನಿತ್ಯಭವಿಷ್ಯ

ಮೇಷ: ಮಾನಸಿಕ ದುಃಖ ಅನುಭವಿಸುವಿರಿ. ಅಧಿಕ ಖರ್ಚು ವೆಚ್ಚ ಉಂಟಾಗಬಹುದು. ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆ ಕಾಣುವುದು. ಶುಭಸಂಖ್ಯೆ: 3

ವೃಷಭ: ಒತ್ತಡದಿಂದ ಹೊರಬರಲು ಧ್ಯಾನದ ಮೊರೆಹೋಗಿ. ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ. ಸ್ಥಿರಾಸ್ತಿಯನ್ನು ಗಳಿಸುವಿರಿ. ಶುಭಸಂಖ್ಯೆ: 4

ಮಿಥುನ: ನಿಮ್ಮ ನಿರ್ಧಾರಗಳಲ್ಲಿ ಆತ್ಮವಿಶ್ವಾಸವಿರಲಿ. ದುಡುಕುತನ ಬೇಡ. ಪರಿಹಾರಕ್ಕಾಗಿ ದಕ್ಷಿಣಾ ಮೂರ್ತಿ ಮಂತ್ರವನ್ನು ಜಪಿಸಿ. ಶುಭಸಂಖ್ಯೆ: 2

ಕಟಕ: ಮನಸ್ಸಿಗೆ ಚಿಂತೆ. ಸ್ಥಗಿತವಾದ ಕಾರ್ಯಗಳನ್ನು ಕೈಗೆತ್ತಿಕೊಂಡು ಪೂರೈಸಿ. ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ. ಏಕಾಗ್ರತೆ ಸಾಧಿಸಿ. ಶುಭಸಂಖ್ಯೆ: 3

ಸಿಂಹ: ಉದ್ಯೋಗದಲ್ಲಿ ಒತ್ತಡ ಎದುರಿಸುವಿರಿ. ದೃಢವಾದ ತೀರ್ವನವನ್ನು ತೆಗೆದುಕೊಳ್ಳಿ. ಉತ್ತಮ ಆದಾಯವಿರುತ್ತದೆ. ಶುಭಸಂಖ್ಯೆ: 7

ಕನ್ಯಾ: ಒಳ್ಳೆಯತನದ ದುರುಪಯೋಗವಾಗಬಹುದು ಎಚ್ಚರಿಕೆ. ವಿರಕ್ತ ಭಾವನೆ ಕಾಡುತ್ತದೆ. ಅನಿರೀಕ್ಷಿತ ಧನಾಗಮನವಾಗಲಿದೆ. ಶುಭಸಂಖ್ಯೆ: 2

ತುಲಾ: ತಂದೆಯ ಆರೋಗ್ಯದ ವಿಚಾರದಲ್ಲಿ ಎಚ್ಚರ ವಹಿಸಿ. ವೈದ್ಯರ ಸಲಹೆ ಪಾಲಿಸಿ. ಪ್ರವಾಸ ಕೈಗೊಳ್ಳುವಿರಿ. ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 5

ವೃಶ್ಚಿಕ: ಆತ್ಮಶಕ್ತಿಯ ಕೊರತೆ ಕಾಡಬಹುದು. ಕುಟುಂಬದಲ್ಲಿ ಸಾಮರಸ್ಯ ಕಾಪಾಡಲು ಯತ್ನಿಸಿ. ಕೆಲಸಗಳಲ್ಲಿ ಆತ್ಮೀಯರ ಸಹಕಾರ. ಶುಭಸಂಖ್ಯೆ: 4

ಧನುಸ್ಸು: ಹಣಕಾಸಿನ ವಿಚಾರದಲ್ಲಿ ಉತ್ತಮ ದಿನ. ವಿದ್ಯಾರ್ಥಿ ಗಳಿಗೆ ಜಯ. ಕಟ್ಟಡ ನಿರ್ಮಾಣ ವ್ಯಾಪಾರಸ್ಥರಿಗೆ ನಿರೀಕ್ಷೆಗಿಂತ ಹೆಚ್ಚು ಲಾಭ. ಶುಭಸಂಖ್ಯೆ: 2

ಮಕರ: ಉದರ ಬಾಧೆ. ವೈದ್ಯರನ್ನು ಭೇಟಿ ಮಾಡಿ. ಸೇವಾ ವೃತ್ತಿಯಲ್ಲಿ ಇರುವವರಿಗೆ ಆದಾಯ. ನಿಮ್ಮ ನಿರ್ಧಾರಗಳಿಗೆ ಬದ್ಧರಾಗಿ. ಶುಭಸಂಖ್ಯೆ: 2

ಕುಂಭ: ಕೋಪ ಖಂಡಿತಕ್ಕೂ ಒಳ್ಳೆಯದಲ್ಲ. ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮವಾಗಿ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 1

ಮೀನ: ಭೂ ವ್ಯವಹಾರದಲ್ಲಿ ಲಾಭ. ಹೈನುಗಾರಿಕೆಯಲ್ಲಿ ಆದಾಯ. ಪೂಜಾ ಸಾಮಗ್ರಿ ವ್ಯಾಪಾರಸ್ಥರಿಗೆ ಉತ್ತಮ ವ್ಯಾಪಾರದಿಂದ ಲಾಭ. ಶುಭಸಂಖ್ಯೆ: 9