ನ್ಯೂಸ್

ಈ ರಾಶಿಯವರಿಗಿಂದು ಆರ್ಥಿಕ ಪರಿಸ್ಥಿತಿ ಚೇತರಿಕೆ: ನಿತ್ಯಭವಿಷ್ಯ

ಮೇಷ: ಕೆಲಸ ಕಾರ್ಯಗಳಲ್ಲಿ ವಿಘ್ನ ಉಂಟಾದೀತು. ಪರಸ್ಥಳ ವಾಸ. ಅತಿಯಾದ ನಿದ್ರೆ. ವಾದ- ವಿವಾದಗಳಲ್ಲಿ ಜಯ ನಿಮ್ಮದೇ. ಶುಭಸಂಖ್ಯೆ: 6

ವೃಷಭ: ಅಲ್ಪ ಆದಾಯ, ಅಧಿಕ ಖರ್ಚು. ಮನಸ್ಸಿಗೆ ಚಿಂತೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಶೀತ ಸಂಬಂಧೀ ರೋಗಗಳು. ಶುಭಸಂಖ್ಯೆ: 9

ಮಿಥುನ: ಬಟ್ಟೆ ಅಂಗಡಿಯವರಿಗೆ ದ್ರವ್ಯಲಾಭ. ಪ್ರಿಯ ಜನರ ಭೇಟಿ. ಯತ್ನ ಕಾರ್ಯಗಳಲ್ಲಿ ಹಿನ್ನಡೆ ಸಾಧ್ಯತೆ. ಸ್ನೇಹಿತನಿಂದ ಸಹಾಯ. ಶುಭಸಂಖ್ಯೆ: 5

ಕಟಕ: ಭೂಲಾಭ. ಮಿತ್ರರಲ್ಲಿ ದ್ವೇಷ. ಅಕಾಲ ಭೋಜನ. ಕಲಾವಿದರಿಗೆ ವಿಶೇಷ ದಿನ. ಋಣವಿಮೋಚನೆ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 9

ಸಿಂಹ: ಸರ್ಕಾರಿ ಕಾರ್ಯದಲ್ಲಿ ಪ್ರಗತಿ. ಅಧಿಕಾರದ ಹಾದಿಯಲ್ಲಿ ಹಿತಶತ್ರುಗಳಿಂದ ತೊಂದರೆ. ಕೃಷಿಯಲ್ಲಿ ಅಭಿವೃದ್ಧಿ. ತೀರ್ಥಯಾತ್ರೆ. ಶುಭಸಂಖ್ಯೆ: 1

ಕನ್ಯಾ: ಗೃಹ ನಿರ್ಮಾಣಕ್ಕೆ ಚಾಲನೆ. ದುಷ್ಟ ಜನರಿಂದ ದೂರವಿರಿ. ಶತ್ರು ಬಾಧೆ ಕಾಡೀತು. ಪರಸ್ಥಳ ವಾಸ. ಮನಸ್ಸಿಗೆ ನಾನಾ ಚಿಂತೆ. ಶುಭಸಂಖ್ಯೆ: 7

ತುಲಾ: ಅವಿವಾಹಿತರಿಗೆ ವಿವಾಹ ಯೋಗ. ವ್ಯಾಪಾರದಲ್ಲಿ ಲಾಭ. ಚಾಲಕರಿಗೆ ಆಘಾತ. ದಂಡ ಕಟ್ಟುವಿರಿ. ಸ್ತ್ರೀಯರಿಗೆ ಆಭರಣ ಲಭ್ಯ. ಶುಭಸಂಖ್ಯೆ: 4

ವೃಶ್ಚಿಕ: ಮಿತ್ರರಲ್ಲಿ ಸಾಲ ಕೇಳುವಿರಿ. ಸಾರ್ವಜನಿಕವಾಗಿ ಮಾತಿನ ಚಕಮಕಿ. ಸಮಾರಂಭಕ್ಕೆ ಅಧಿಕ ಧನವ್ಯಯ. ನೆಮ್ಮದಿ ಇಲ್ಲದ ಪ್ರಯಾಣ. ಶುಭಸಂಖ್ಯೆ: 7

ಧನುಸ್ಸು: ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಹಣದ ಅಡಚಣೆ. ಸ್ಥಳ ಬದಲಾವಣೆ. ಮಕ್ಕಳಿಂದ ಆಪತ್ಕಾಲದಲ್ಲಿ ಸಹಾಯ. ಮನಃಶಾಂತಿ. ಶುಭಸಂಖ್ಯೆ: 1

ಮಕರ: ಉದ್ದಿಮೆದಾರರಿಗೆ ಕೆಲಸಗಾರರ ಸಮಸ್ಯೆ. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಸ್ನೇಹಿತರ ಭೇಟಿ. ಶುಭಸಂಖ್ಯೆ: 3

ಕುಂಭ: ಗುರುಹಿರಿಯರ ಭೇಟಿ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಶುಭಸಂಖ್ಯೆ: 9

ಮೀನ: ಪರರಿಗೆ ಸಹಾಯ ಮಾಡುವಿರಿ. ಅನಾಹುತ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಕೃಷಿ ಭೂಮಿ ಖರೀದಿ. ಕೆಲಸದಲ್ಲಿ ಯಶಸ್ಸು. ಶುಭಸಂಖ್ಯೆ: 3