ಮೇಷ: ಭೂಮಿ ಮತ್ತು ವಾಹನಗಳಿಂದ ಅಧಿಕ ಲಾಭ. ಆರ್ಥಿಕ ಸಮಸ್ಯೆಯಿಂದ ಮುಕ್ತಿ. ಅಧಿಕಾರಿಗಳಿಂದ ಅನಿರೀಕ್ಷಿತವಾಗಿ ಕಷ್ಟ. ಶುಭಸಂಖ್ಯೆ: 1
ವೃಷಭ: ಭೂಮಿಯ ಪತ್ರ ವ್ಯವಹಾರದಿಂದ ಅನುಕೂಲ. ಕೆಲಸ ಕಾರ್ಯಗಳಿಗೆ ಅಡೆತಡೆ. ಉದ್ಯೋಗ ವ್ಯಾಪಾರದ ಒತ್ತಡ. ಅಧಿಕ ಖರ್ಚು. ಶುಭಸಂಖ್ಯೆ: 9
ಮಿಥುನ: ತಂದೆಯಿಂದ ಧನಾಗಮನ. ಉದ್ಯೋಗ ನಿಮಿತ್ತ ಪ್ರಯಾಣ ಸಂಭವ. ಆರೋಗ್ಯದಲ್ಲಿ ಏರುಪೇರು. ವೈದ್ಯರ ಸಲಹೆ ಅಗತ್ಯ. ಶುಭಸಂಖ್ಯೆ: 5
ಕಟಕ: ಸ್ವಯಂಕೃತ ಅಪರಾಧ. ಬಂಧು ಬಾಂಧವರಿಂದ ತೊಂದರೆ. ಮೆಚ್ಚುಗೆಯ ಮಾತುಗಳಿಂದ ಕಾರ್ಯಜಯವಾಗಿ ಸಂತಸ. ಶುಭಸಂಖ್ಯೆ: 7
ಸಿಂಹ: ಸಂಗಾತಿಗೋಸ್ಕರ ಅಧಿಕ ಖರ್ಚು ಮಾಡಬೇಕಾಗು ವುದು. ಸ್ತ್ರೀಯರೊಂದಿಗೆ ಕಲಹ ಉಂಟಾಗಬಹುದು. ಮಾನಸಿಕವಾಗಿ ನೋವು. ಶುಭಸಂಖ್ಯೆ: 2
ಕನ್ಯಾ: ಆಸ್ಪತ್ರೆಗೆ ದಾಖಲಾಗುವ ಸಂದರ್ಭ. ಸಾಲದ ಸಹಾಯ ಲಭಿಸುವುದು. ದಾಯಾದಿಗಳಿಂದ ಕಿರಿಕಿರಿ. ನಿದ್ರಾಭಂಗ ಆಗಬಹುದು. ಶುಭಸಂಖ್ಯೆ: 9
ತುಲಾ: ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು. ದೂರ ಪ್ರದೇಶಗಳಿಗೆ ತೆರಳುವ ಆಲೋಚನೆ. ಸಹೋದರ ನೊಂದಿಗೆ ವಾಗ್ವಾದ ಮಾಡುವಿರಿ. ಶುಭಸಂಖ್ಯೆ: 3
ವೃಶ್ಚಿಕ: ರೋಗ ಬಾಧೆಗಳಿಂದ ಮುಕ್ತಿ ದೊರೆತು ಸಮಾಧಾನ. ಉದ್ಯೋಗ ಸ್ಥಳದಲ್ಲಿ ಕಲಹ ಆಗಬಹುದು. ಶತ್ರುಗಳು ಅಧಿಕ. ಸಾಲದ ಚಿಂತೆ. ಶುಭಸಂಖ್ಯೆ: 6
ಧನುಸ್ಸು: ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ. ಅಧಿಕಾರಿಗಳ ಕಿರಿಕಿರಿಯಿಂದ ನಿದ್ರಾಭಂಗ. ಆತ್ಮೀಯರು ಮತ್ತು ನೆರೆಹೊರೆಯವರು ದೂರ. ಶುಭಸಂಖ್ಯೆ: 4
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಧನಾಗಮನ. ಕೋರ್ಟ್ ಕೇಸುಗಳಲ್ಲಿ ಜಯ. ಮಿತ್ರರಿಂದ ಅನುಕೂಲ ಒದಗಿಬರಲಿದೆ. ಶುಭಸಂಖ್ಯೆ: 6
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದೆ. ಜೀವನದಲ್ಲಿ ಗೆಲ್ಲಬೇಕೆಂಬ ಛಲ. ಗೃಹ, ಉದ್ಯೋಗ ಬದಲಾವಣೆಯಿಂದ ತೊಂದರೆ. ಶುಭಸಂಖ್ಯೆ: 8
ಮೀನ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ. ಸಾಲ ಮಾಡುವ ಪರಿಸ್ಥಿತಿ ಬರುವುದು. ಮಕ್ಕಳು ಕೆಲ ವಿಷಯದಲ್ಲಿ ದೂರವಾಗುವರು. ಶುಭಸಂಖ್ಯೆ: 5