ನ್ಯೂಸ್

ಈ ರಾಶಿಯವರು ಸಾಹಸ ಕಾರ್ಯ ಮಾಡುತ್ತೀರಿ...

ಮೇಷ: ಏನಾದರೂ ಸಾಹಸಮಯವಾದ ಕಾರ್ಯಗಳನ್ನು ಮಾಡಬೇಕು ಎಂದು ಮನಸ್ಸು ಬಹಳ ಹಂಬಲಿಸುತ್ತದೆ. ಅದೃಷ್ಟಸಂಖ್ಯೆ: 9

ವೃಷಭ: ನಿಮ್ಮ ಮಾತುಗಳಿಗೆ ನೀವು ಯೋಚಿಸಿಯೇ ಇರದ ಅರ್ಥವನ್ನು ಪರರು ಕಲ್ಪಿಸಿ ದೂಷಿಸಲು ತೊಡಗುತ್ತಾರೆ. ಅದೃಷ್ಟಸಂಖ್ಯೆ: 4

ಮಿಥುನ: ದಿನದ ಕೆಲಸಕಾರ್ಯಗಳನ್ನು ಸ್ವಲ್ಪ ನಿಧಾನವಾಗಿಯೇ ಮಾಡಿ. ಯಾವುದೇ ಬಗೆಯ ಗಡಿಬಿಡಿ ಬೇಡ. ಅದೃಷ್ಟಸಂಖ್ಯೆ: 5

ಕಟಕ: ಮಾಡಿದ ಸಾಲವನ್ನು ಮರುಪಾವತಿ ಮಾಡುವುದು ಹೇಗೆ ಎಂಬುದರ ಬಗ್ಗೆ ಬಹಳ ಯೋಚನೆ ಮಾಡುತ್ತೀರಿ. ಅದೃಷ್ಟಸಂಖ್ಯೆ: 6

ಸಿಂಹ: ಆತ್ಮೀಯರೊಬ್ಬರಿಗೆ ಹಿಂದೆ ಯಾವತ್ತೋ ಕೊಟ್ಟಂತಹ ಮಾತು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತೀರಿ. ಅದೃಷ್ಟಸಂಖ್ಯೆ: 2

ಕನ್ಯಾ: ಯಾವುದೇ ಕೆಲಸಕಾರ್ಯಗಳನ್ನು ಮಾಡಲು ಹಿಂಜರಿಯುತ್ತೀರಿ. ಕುಲದೇವರನ್ನು ಪ್ರಾರ್ಥಿಸಿ ಮುಂದುವರಿಯಿರಿ. ಅದೃಷ್ಟಸಂಖ್ಯೆ: 3

ತುಲಾ: ಹಾಸ್ಯ ಮಾಡಿ ಎಲ್ಲರನ್ನೂ ರಂಜಿಸುತ್ತೀರಿ. ಮನೆಯಲ್ಲಿ ಬಹುಕಾಲದ ನಂತರ ಆತ್ಮೀಯ ವಾತಾವರಣ ಇರಲಿದೆ. ಅದೃಷ್ಟಸಂಖ್ಯೆ: 9

ವೃಶ್ಚಿಕ: ಎಲ್ಲರೂ ನಿಮಗೆ ವಿಶೇಷವಾದ ಗೌರವ ಮರ್ಯಾದೆಗಳನ್ನು ನೀಡಿ ಮಾತನಾಡಿಸುತ್ತಾರೆ. ಮನಸ್ಸಿಗೆ ಸಂತಸವಿದೆ. ಅದೃಷ್ಟಸಂಖ್ಯೆ: 5

ಧನಸ್ಸು: ಹೊಸ ಬಟ್ಟೆ ಅಥವಾ ಏನಾದರೂ ಹೊಸದನ್ನು ಖರೀದಿಸುವ ಆಲೋಚನೆ ಬರುತ್ತದೆ. ಸದ್ಯಕ್ಕೆ ಖರೀದಿ ಬೇಡ. ಅದೃಷ್ಟಸಂಖ್ಯೆ: 1

ಮಕರ: ಅನಿವಾರ್ಯ ಕಾರಣಗಳಿಂದಾಗಿಮಾಡಿಯೇ ಇರದ ತಪ್ಪಿಗೆ ಕ್ಷಮಾಪಣೆಯನ್ನು ಕೇಳಿ ಸುಮ್ಮನಾಗುತ್ತೀರಿ. ಅದೃಷ್ಟಸಂಖ್ಯೆ: 3

ಕುಂಭ: ನಿಮಗೆ ದೂರಪ್ರಯಾಣ ಮಾಡುವಂತಹ ಆಸೆ ಇದ್ದರೂ, ಕಾರಣಾಂತರಗಳಿಂದ ಅದು ರದ್ದಾಗಬಹುದು. ಅದೃಷ್ಟಸಂಖ್ಯೆ: 7

ಮೀನ: ಯಾರು ಎಷ್ಟೇ ಚೆನ್ನಾಗಿ ಅಡುಗೆ ಮಾಡಿದರೂ ನಿಮಗೆ ಅದು ರುಚಿಸದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಅದೃಷ್ಟಸಂಖ್ಯೆ: 4