ಮೇಷ: ಆಹಾರ ವ್ಯಾಪಾರಸ್ಥರಿಗೆ ಉತ್ತಮ ಲಾಭ ಬರಲಿದೆ. ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಸಂಕಷ್ಟಹರ ವಿನಾಯಕನನ್ನು ಭಜಿಸಿ. ಶುಭಸಂಖ್ಯೆ: 8
ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ ತೀರ ಅಗತ್ಯ. ಬಂಧುಗಳೊಂದಿಗೆ ವೈಮನಸ್ಸು ಉಂಟಾದೀತು. ಒಳ್ಳೆಯ ಫಲಿತಾಂಶ ನೋಡಬಹುದು. ಶುಭಸಂಖ್ಯೆ: 1
ಮಿಥುನ: ಕುಟುಂಬದಲ್ಲಿ ಸಂತೋಷದ ವಾತಾವರಣ. ವ್ಯವಹಾರದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ. ಅಧಿಕ ಹಣ ಖರ್ಚಾಗುತ್ತದೆ. ಶುಭಸಂಖ್ಯೆ: 5
ಕಟಕ: ದೂರ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಜಲ ಸಂಬಂಧಿ ವಿಚಾರದಲ್ಲಿ ಜಾಗ್ರತರಾಗಿರಿ. ಕೃಷಿ ಚಟುವಟಿಕೆಯಲ್ಲಿ ತೊಂದರೆ. ಶುಭಸಂಖ್ಯೆ: 9
ಸಿಂಹ: ವಸ್ತ್ರವಿನ್ಯಾಸಕರಿಗೆ ಬೇಡಿಕೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ಶುಭಸಂಖ್ಯೆ: 7
ಕನ್ಯಾ: ಆಹಾರ ಸೇವಿಸುವಾಗ ಹುಷಾರಾಗಿರಿ. ವಿದ್ಯಾರ್ಥಿಗಳಿಗೆ ಅಶುಭ. ಹಣಕಾಸಿನ ವಿಷಯದಲ್ಲಿ ತೊಂದರೆ ಉಂಟಾಗಬಹುದು. ಶುಭಸಂಖ್ಯೆ: 4
ತುಲಾ: ವ್ಯಾಪಾರದಲ್ಲಿ ಹಾನಿಯ ಸಾಧ್ಯತೆ ಇದೆ. ಅನವಶ್ಯಕ ಚಿಂತೆ ಕಾಡಬಹುದು. ಕೌಟುಂಬಿಕ ಕಲಹ ಉಂಟಾಗದಂತೆ ಜಾಗ್ರತೆ ವಹಿಸಿ. ಶುಭಸಂಖ್ಯೆ: 3
ವೃಶ್ಚಿಕ: ಕಾಲಿನ ಸಮಸ್ಯೆ ಸ್ವಲ್ಪ ಜಾಸ್ತಿಯೇ ಕಾಡಬಹುದು. ವೃತ್ತಿಯಲ್ಲಿ ಏರುಪೇರು ಉಂಟಾಗಲಿದೆ. ಸಮಾಧಾನದಿಂದಿರಿ. ಓದಿನಲ್ಲಿ ಆಸಕ್ತಿ. ಶುಭಸಂಖ್ಯೆ: 3
ಧನುಸ್ಸು: ಭೂ ವ್ಯವಹಾರದಲ್ಲಿ ವಿವಾದ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆ ಎದುರಾಗಲಿದೆ. ಸ್ನೇಹಿತರಿಂದ ಸಹಕಾರ ದೊರೆಯುವುದು. ಶುಭಸಂಖ್ಯೆ: 6
ಮಕರ: ಅಧಿಕ ಧೈರ್ಯ, ನಂಬಿಕೆಗಳು ನಿಮ್ಮನ್ನು ಕಾಪಾಡಲಿವೆ. ವೃತ್ತಿಯಲ್ಲಿ ಅಧಿಕ ಶ್ರಮ. ಕೆಲಸಗಳಲ್ಲಿ ವಿಘ್ನ. ಗಣೇಶನ ಪ್ರಾರ್ಥನೆ ಮಾಡಿ. ಶುಭಸಂಖ್ಯೆ: 2
ಕುಂಭ: ಪರಿಶ್ರಮಗಳು ವಿಫಲವಾಗುವವು. ಕುಟುಂಬದಲ್ಲಿ ಏರುಪೇರು ಉಂಟಾಗಲಿದೆ, ಕೆಲಸಗಳಲ್ಲಿ ಅನುಕೂಲ ಒದಗಿಬರಲಿದೆ. ಶುಭಸಂಖ್ಯೆ: 9
ಮೀನ: ಪ್ರವಾಸ ಮಾಡಬೇಕಾದೀತು. ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ. ಕೌಟುಂಬಿಕವಾಗಿ ಕೆಲ ವಿಷಯಗಳಲ್ಲಿ ಗೊಂದಲ ಸಾಧ್ಯತೆ. ಶುಭಸಂಖ್ಯೆ: 3