ಮೇಷ: ನಿಮ್ಮ ಯೋಚನೆಗಳನ್ನು ಸಕಾರಾತ್ಮಕ ದಿಕ್ಕಿನ ಕಡೆಗೆ ತಿರುಗಿಸಲು ಶ್ರಮಪಡುವುದು ಅಗತ್ಯ. ಸಫಲತೆ ಸಿಗಲಿದೆ. ಶುಭಸಂಖ್ಯೆ: 9
ವೃಷಭ: ಸಂಗೀತ, ನೃತ್ಯ, ನಟನೆ, ಚಿತ್ರಕಲೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡವರಾದರೆ ಜನರ ಮೆಚ್ಚುಗೆ ಲಭಿಸಲಿದೆ. ಶುಭಸಂಖ್ಯೆ: 1
ಮಿಥುನ: ನೀವು ಸಿದ್ಧಪಡಿಸಿಕೊಂಡ ಹಲವು ಯೋಜನೆಗಳನ್ನು ಮೆಚ್ಚಿ ಹೊಸ ಪಾಲುದಾರರ ಪರಿಚಯವಾಗಬಹುದು. ಶುಭಸಂಖ್ಯೆ: 8
ಕಟಕ: ಹೆಸರು ಹಾಗೂ ಸಾಧನೆಗಳನ್ನು ಮಾಡುವ ನಿಮ್ಮ ಬಯಕೆಗಳಿಗೆ ಸುಲಭದ ಒಂದು ದಾರಿ ಎದುರಾಗಲಿದೆ. ಶುಭಸಂಖ್ಯೆ: 5
ಸಿಂಹ: ಕುಟುಂಬದಲ್ಲಿ ನೆಮ್ಮದಿ ಹಾಗೂ ಸಮಾಧಾನಗಳೇ ತುಂಬಿರುವ ಕಾಲವಿದು. ಚಿಂತಿಸದೆ ನಿರಾಳರಾಗಿರಿ. ಶುಭಸಂಖ್ಯೆ: 7
ಕನ್ಯಾ: ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲ ಮೇಲೇರಬಹುದು. ಧೈರ್ಯದಿಂದಲೇ ನಿಭಾಯಿಸಿ. ಶುಭಸಂಖ್ಯೆ: 3
ಇದನ್ನೂ ಓದಿ: ಹಣವಿಲ್ಲದೆ ಕೊವಿಡ್-19 ಚಿಕಿತ್ಸೆಗಾಗಿ ಪರದಾಡಿದ್ದ 80ರ ವೃದ್ಧ: ಹೈಕೋರ್ಟ್ಗೆ ಮನವಿ ಸಲ್ಲಿಸಿದ ದಿನವೇ ಜೀವ ಬಿಟ್ಟರು
ತುಲಾ: ನಿಮ್ಮ ದೌರ್ಬಲ್ಯಗಳೇ ಹತ್ತು ಹಲವಾರು ಇರುವಾಗ ಇತರರನ್ನು ಟೀಕಿಸುವ ದುಸ್ಸಾಹಸ ಬೇಡ. ಕಷ್ಟವಾದೀತು. ಶುಭಸಂಖ್ಯೆ: 6
ವೃಶ್ಚಿಕ: ಶಿಕ್ಷಣಸಂಸ್ಥೆಗಳ ಸ್ಥಾಪಕರು ಕೆಲವು ಬಗೆಯ ಟೀಕೆಗಳಿಗೆ ಗುರಿಯಾಗಬೇಕಾಗುತ್ತದೆ. ಆರೋಗ್ಯದತ್ತ ಲಕ್ಷ್ಯವಿರಲಿ. ಶುಭಸಂಖ್ಯೆ: 4
ಧನಸ್ಸು: ಆಭರಣ ವ್ಯಾಪಾರಿಗಳು, ಉಡುಗೊರೆಗಳ ಮಾರಾಟಗಾರರಿಗೆ ಉತ್ತಮವಾದ ವ್ಯವಹಾರ ಜರುಗಲು ಸಾಧ್ಯ. ಶುಭಸಂಖ್ಯೆ: 2
ಮಕರ: ಅನೇಕ ದಿನಗಳಿಂದ ಕಾಡುತ್ತಿರುವ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ದೊರೆತು ನಿರಾಳತೆ ಅನುಭವಿಸುವಿರಿ. ಶುಭಸಂಖ್ಯೆ: 9
ಕುಂಭ: ಉನ್ನತ ವಿದ್ಯಾಭ್ಯಾಸದ ಬಗ್ಗೆ ಯೋಜನೆ ಹಾಕಿಕೊಂಡಿದ್ದರೆ ಹತ್ತಿರದ ಬಾಂಧವರ ಸಹಾಯ ಲಭ್ಯವಾಗಲಿದೆ. ಶುಭಸಂಖ್ಯೆ: 1
ಮೀನ: ಒಬ್ಬರೇ ಮಾನಸಿಕ ಒತ್ತಡ ಇಟ್ಟುಕೊಂಡು ಕೊರಗದಿರಿ. ಆ ಕುರಿತು ಬಾಳಸಂಗಾತಿ ಹಾಗೂ ಆಪ್ತರ ಜತೆ ರ್ಚಚಿಸಿ. ಶುಭಸಂಖ್ಯೆ: 8