ಮೇಷ: ಕುಟುಂಬದಲ್ಲಿ ಸಂಭ್ರಮ. ವಾಹನ ಅಪಘಾತವಾಗುವ ಸಾಧ್ಯತೆ. ಸಹೋದರರೊಂದಿಗೆ ಪಾಲುದಾರಿಕೆ ವ್ಯವಹಾರಕ್ಕೆ ನಿರ್ಧಾರ. ಶುಭಸಂಖ್ಯೆ: 9
ವೃಷಭ: ಹಿರಿಯರ ಮಾರ್ಗದರ್ಶನ ಪಡೆಯಿರಿ. ಕಾರ್ಯನಿಮಿತ್ತ ವಿದೇಶಕ್ಕೆ ಪ್ರಯಾಣ. ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಶುಭಸಂಖ್ಯೆ:3
ಮಿಥುನ: ವೃತ್ತಿಯಲ್ಲಿ ಹಿತಶತ್ರುಗಳ ಕಾಟ. ಹಣಕಾಸಿನ ವಿಷಯದಲ್ಲಿ ಎಚ್ಚರ. ಋಣ ವಿಮೋಚನೆ. ಕುಲದೇವರನ್ನು ಭಕ್ತಿಯಿಂದ ಭಜಿಸಿ. ಶುಭಸಂಖ್ಯೆ: 7
ಕಟಕ: ತೈಲ ಮಾರಾಟಗಾರರಿಗೆ ಲಾಭವಿದೆ. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕುಟುಂಬದ ಭಿನ್ನಾಭಿಪ್ರಾಯ ಶಮನ. ಶುಭಸಂಖ್ಯೆ:1
ಸಿಂಹ: ಸಹೋದ್ಯೋಗಿಗಳಿಂದ ಮೇಲಧಿಕಾರಿಗಳಿಗೆ ದೂರು. ಮಿತ್ರರ ಸಹಕಾರದಿಂದ ಜಟಿಲ ಸಮಸ್ಯೆಗೆ ಪರಿಹಾರ ದೊರೆಯುವುದು. ಶುಭಸಂಖ್ಯೆ: 3
ಕನ್ಯಾ: ಸ್ನಾಯು ಸಮಸ್ಯೆ ಕಾಡಬಹುದು. ಹಣ ಹೂಡಿಕೆಗೆ ಸುಸಮಯ. ಸ್ಥಿರಾಸ್ತಿ ಖರೀದಿ ಮಾಡುವ ಕುರಿತು ಸಮಾಲೋಚನೆ ನಡೆಸುವಿರಿ. ಶುಭಸಂಖ್ಯೆ: 3
ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಿ ಮಾನಸಿಕವಾಗಿ ಬೇಸರ. ಮನೆ ಬದಲಾವಣೆಯ ಮಾತುಕತೆ. ದಾಂಪತ್ಯದಲ್ಲಿ ಕಲಹವಾದೀತು. ಶುಭಸಂಖ್ಯೆ: 2
ವೃಶ್ಚಿಕ: ಹಣದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯ ದಲ್ಲಿ ಸುಧಾರಣೆಯಾಗಲಿದೆ. ಅನಿವಾರ್ಯವಾಗಿ ಅಧಿಕ ಖರ್ಚು ಮಾಡುವಿರಿ. ಶುಭಸಂಖ್ಯೆ:7
ಧನುಸ್ಸು: ಆದಾಯಕ್ಕಿಂತ ಖರ್ಚು ಹೆಚ್ಚು. ಮನಸ್ಸಿನಲ್ಲಿ ಕಾತರ. ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚು ಶ್ರಮ. ಕಿರುತೆರೆ ನಟರಿಗೆ ವಿಶೇಷ ಅವಕಾಶ. ಶುಭಸಂಖ್ಯೆ: 2
ಮಕರ: ಮಾನಸಿಕ ಭಯದಿಂದ ಖಿನ್ನತೆ. ಆಸ್ತಿ ವಿಚಾರವಾಗಿ ಘರ್ಷಣೆ ಸಾಧ್ಯತೆ. ಸ್ತ್ರೀಯರಿಗೆ ಪುರುಷ ಸಹೋದ್ಯೋಗಿಗಳಿಂದ ತೊಂದರೆ. ಶುಭಸಂಖ್ಯೆ:3
ಕುಂಭ: ಉದ್ಯೋಗದಲ್ಲಿ ಪ್ರಗತಿ. ಪ್ರಯಾಣದಿಂದ ಅನಾರೋಗ್ಯ. ಆಸ್ತಿ ಮಾರಾಟದಲ್ಲಿ ಹಿನ್ನಡೆ. ಸಿಹಿ ತಿಂಡಿ ವ್ಯಾಪಾರಸ್ಥರಿಗೆ ಅಧಿಕಾರ. ಶುಭಸಂಖ್ಯೆ:9
ಮೀನ: ಪಾಲುದಾರಿಕೆಯಲ್ಲಿ ಮೋಸ ಸಾಧ್ಯತೆ. ಕರಕುಶಲಕರ್ವಿುಗಳಿಗೆ ವಿಶೇಷ ಲಾಭ. ಅನಿರೀಕ್ಷಿತ ಘಟನೆ. ಮಕ್ಕಳಿಂದ ಅನುಕೂಲ. ಶುಭಸಂಖ್ಯೆ:4