ಮೇಷ: ಕೆಲಸಗಳಲ್ಲಿ ಆತುರದಿಂದ ನಷ್ಟ. ಮಹಿಳೆಯರಿಗೆ ಹಣಕ್ಕೆ ತೊಂದರೆ ಇರದು. ವಕೀಲರು ಉತ್ಸಾಹದಿಂದ ಕಾರ್ಯನಿರ್ವಹಿಸುವಿರಿ. ಶುಭಸಂಖ್ಯೆ: 5
ವೃಷಭ: ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ. ಅನಗತ್ಯ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತೀರಿ. ದುಬಾರಿ ವಸ್ತುಗಳ ಕಳವಾಗುವ ಸಾಧ್ಯತೆ. ಶುಭಸಂಖ್ಯೆ: 9
ಮಿಥುನ: ಅನಿರೀಕ್ಷಿತ ಧನ ಲಾಭವಾಗಲಿದೆ. ನಟರು ಕೈತಪ್ಪಿದ್ದ ಅವಕಾಶವನ್ನು ಮರು ಪಡೆಯುವಿರಿ. ವಿವಾದಗಳಲ್ಲಿ ಜಯ ನಿಮ್ಮದೇ. ಶುಭಸಂಖ್ಯೆ: 9
ಕಟಕ: ಗೃಹಿಣಿಯರಿಗೆ ವಿಶ್ರಾಂತಿ ಅಗತ್ಯ. ತರಕಾರಿ ವ್ಯಾಪಾರಸ್ಥರಿಗೆ ಆದಾಯದಲ್ಲಿ ಏರುಪೇರು ಆದೀತು. ದುಡುಕುತನದ ಮಾತು ಬೇಡ. ಶುಭಸಂಖ್ಯೆ: 2
ಸಿಂಹ: ಶೀತದ ತೊಂದರೆ ಅನುಭವಿಸುವಿರಿ. ಅಲಂಕಾರಿಕ ವಸ್ತುಗಳ ಖರೀದಿಗೆ ಅಧಿಕ ಖರ್ಚು. ವೈದ್ಯರ ಸಲಹೆಗಳನ್ನು ತಪ್ಪದೆ ಪಾಲಿಸಿ. ಶುಭಸಂಖ್ಯೆ:1
ಕನ್ಯಾ: ಕಲಾವಿದರಿಗೆ ಅವಕಾಶಗಳು ಲಭಿಸುವವು. ಬೇಕರಿ ವ್ಯಾಪಾರದಲ್ಲಿ ಸಾಧಾರಣ ಮಟ್ಟದ ಪ್ರಗತಿ. ಹಿರಿಯರೊಂದಿಗೆ ಮನಸ್ತಾಪ. ಶುಭಸಂಖ್ಯೆ: 6
ತುಲಾ: ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ಬೇಡ. ಸಂಗಾತಿ ಯೊಂದಿಗೆ ಕೋಪ ಬೇಡ. ಉದ್ಯೋಗಾಕಾಂಕ್ಷಿಗಳು ವಿನಯದಿಂದ ವರ್ತಿಸಿ. ಶುಭಸಂಖ್ಯೆ: 3
ವೃಶ್ಚಿಕ: ವಿವಾಹ ಪ್ರಯತ್ನದಲ್ಲಿ ಅನುಕೂಲ. ಮಗನಿಗೆ ಅನಾರೋಗ್ಯ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ದುರ್ಬಲ ಮನಸ್ಸು. ಶುಭಸಂಖ್ಯೆ: 9
ಧನಸ್ಸು: ಸ್ನೇಹಿತರೊಂದಿಗೆ ಧಾರ್ವಿುಕ ಪ್ರವಾಸ. ಮಕ್ಕಳಿಂದ ಸಂತೋಷದ ಸುದ್ದಿ. ಹಲವು ವರ್ಷಗಳ ನಂತರ ಸಂತಾನ ಪ್ರಾಪ್ತಿ ಯೋಗ.ಶುಭಸಂಖ್ಯೆ:1
ಮಕರ: ಗಣ್ಯರ ಭೇಟಿಯಿಂದ ಕಾರ್ಯ ಸಾಧನೆ. ವಿವಾಹಾಕಾಂಕ್ಷಿಗಳಿಗೆ ಶುಭ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸಮಾಚಾರ ಕೇಳುವಿರಿ. ಶುಭಸಂಖ್ಯೆ: 5
ಕುಂಭ: ಕಚೇರಿಯ ಒತ್ತಡದಿಂದಾಗಿ ಮಾನಸಿಕವಾಗಿ ಬಳಲಿಕೆ. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ವಾಹನ ಚಾಲನೆಯಲ್ಲಿ ಪೆಟ್ಟಾದೀತು. ಶುಭಸಂಖ್ಯೆ: 3
ಮೀನ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ. ಆಯುರ್ವೆದ ಔಷಧಿ ವ್ಯಾಪಾರಿಗಳಿಗೆ ಲಾಭ. ಹಿರಿಯ ಅಧಿಕಾರಿಗಳಿಗೆ ಸ್ಥಾನಪಲ್ಲಟ. ಶುಭಸಂಖ್ಯೆ: 7