ಮೇಷ: ವಿಚ್ಚೇದನ ವಿಷಯದಲ್ಲಿ ಮಾನಸಿಕ ಕಿರಿಕಿರಿ. ಪತ್ನಿಗೆ ಆರೋಗ್ಯದಲ್ಲಿ ತೊಂದರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಸಿಗಲಿದೆ. ಶುಭಸಂಖ್ಯೆ: 9 (Daily Astrology)
ವೃಷಭ: ವಿದ್ಯಾರ್ಥಿಗಳಿಗೆ ಯಶಸ್ಸು. ಸಹೋದರನೊಂದಿಗೆ ಜಗಳವಾಗಬಹುದು. ಚಿಕ್ಕ ವ್ಯಾಪಾರಿಗಳಿಗೆ ಉತ್ತಮ ಲಾಭ ಬರಲಿದೆ. ಶುಭಸಂಖ್ಯೆ: 7
ಮಿಥುನ: ಶಸ್ತ್ರ ಚಿಕಿತ್ಸೆಯಿಂದ ವಿಮುಕ್ತಿ. ಸಂತೋಷ ಕೂಟಕ್ಕೆ ಅಧಿಕ ಖರ್ಚು. ದಾಂಪತ್ಯದಲ್ಲಿ ಸಂತಸದ ದಿನಗಳು ಆರಂಭವಾಗಲಿವೆ. ಶುಭಸಂಖ್ಯೆ: 6
ಕಟಕ: ಹಣಕಾಸಿನ ವಿಚಾರದಲ್ಲಿ ಪ್ರಗತಿ. ಕೆಲಸದಲ್ಲಿ ಹೆಚ್ಚಿನ ಶ್ರಮದ ಅಗತ್ಯವಿದೆ. ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 4
ಸಿಂಹ: ಕೆಲಸಗಳಲ್ಲಿ ವಿರೋಧ ಎದುರಿಸಬೇಕಾಗುವುದು. ಕುಟುಂಬದಲ್ಲಿ ಸಾಮರಸ್ಯವಿರುತ್ತದೆ. ಮಕ್ಕಳ ಬಗ್ಗೆ ವಿಶೇಷ ಎಚ್ಚರ ವಹಿಸಿ. ಶುಭಸಂಖ್ಯೆ: 3
ಕನ್ಯಾ: ರಾಜಕೀಯ ಪ್ರವೇಶಿಸಲು ಇದು ಸಕಾಲ. ವಾಹನಕೊಳ್ಳುವ ಯೋಜನೆ ಹಾಕಿಕೊಳ್ಳುವಿರಿ, ವಿವಾಹ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ: 7
ತುಲಾ: ಆರ್ಥಿಕ ಸ್ಥಿತಿಯಲ್ಲಿ್ಲ ಹಿನ್ನಡೆ. ದಾಂಪತ್ಯದಲ್ಲಿ ಜಗಳ. ಮಕ್ಕಳ ವಿಷಯವಾಗಿ ತೊಂದರೆ. ಇಷ್ಟದೇವರನ್ನು ಸ್ಮರಿಸಿ ಮುನ್ನಡೆಯಿರಿ. ಶುಭಸಂಖ್ಯೆ: 4
ವೃಶ್ಚಿಕ: ಕಸ್ಮಿಕ ಘಟನೆ ಸಂಭವಿಸಲಿದೆ. ಕೃಷಿ ವ್ಯಾಪಾರದಲ್ಲಿ ಶುಭದಾಯಕ ದಿನ. ಸಾಲ ಬಾಧೆಯಿಂದ ಮುಕ್ತಿ ದೊರೆತು ನಿರಾಳಭಾವ. ಶುಭಸಂಖ್ಯೆ:9
ಧನಸ್ಸು: ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಪುಸ್ತಕ ಪ್ರಕಾಶಕರಿಗೆ ನಿರೀಕ್ಷಿತ ಆದಾಯ. ಕಾರ್ವಿುಕ ವರ್ಗದವರಿಗೆ ಶುಭದಿನ. ಶುಭಸಂಖ್ಯೆ:1
ಮಕರ: ಕಣ್ಣಿನ ಸಮಸ್ಯೆ ಉಂಟಾಗುವ ಸಾಧ್ಯತೆ. ವಿದೇಶ ಪ್ರಯಾಣ ರದ್ದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವುದು. ಶುಭಸಂಖ್ಯೆ: 8
ಕುಂಭ: ಮಾನಸಿಕ ಚಿಂತೆ, ಅಧಿಕ ಭಯ ಕಾಡಲಿದೆ. ಪ್ರಯತ್ನದಿಂದ ಕೆಲಸದಲ್ಲಿ ಯಶಸ್ಸು. ಸೌಂದರ್ಯ ವರ್ಧಕಗಳ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 4
ಮೀನ: ದಾಂಪತ್ಯದಲ್ಲಿ ನಿರಾಸಕ್ತಿ. ಸ್ವಂತ ಉದ್ಯಮದಲ್ಲಿ ಮಂದಗತಿ. ಮಕ್ಕಳ ವೈವಾಹಿಕ ಜೀವನದ ಚಿಂತೆ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 7