ಮೇಷ: ಸಹೋದರಿಯ ಅಭ್ಯಾಸದಲ್ಲಿ ಪ್ರಗತಿ. ದವಸ ಧಾನ್ಯಗಳ ವ್ಯಾಪಾರಿಗಳಿಗೆ ಉತ್ತಮ ಕಾಲ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:2
ವೃಷಭ: ನೀರಿಗೆ ಸಂಬಂಧಿಸಿದ ಕೆಲಸದಲ್ಲಿ ಲಾಭ. ವಾಹನ ವ್ಯಾಪಾರದಲ್ಲಿ ನಷ್ಟ. ಹಾಲು ಉತ್ಪಾದಕರಿಗೆ ಆರ್ಥಿಕ ಸಹಾಯ ಸಿಗಲಿದೆ. ಶುಭಸಂಖ್ಯೆ: 6
ಮಿಥುನ: ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು ಸಿಗಲಿದೆ. ವಸ್ತ್ರ ವಿನ್ಯಾಸಕರಿಗೆ ಹೆಚ್ಚುವ ಬೇಡಿಕೆ. ಕಾನೂನು ವಿದ್ಯಾರ್ಥಿಗಳಿಗೆ ಹಿನ್ನಡೆ. ಶುಭಸಂಖ್ಯೆ: 8
ಕಟಕ: ತರಕಾರಿ ವ್ಯಾಪಾರದಲ್ಲಿ ನಷ್ಟವಾಗುವ ಸಂಭವವಿದೆ. ಹಣ್ಣಿನ ವ್ಯಾಪಾರದಲ್ಲಿ ಲಾಭವಾಗಲಿದೆ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ:1
ಸಿಂಹ: ಕಣ್ಣಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ವಿದೇಶ ಪ್ರವಾಸದ ಯೋಜನೆ. ಉದ್ಯೋಗ ಬದಲಿಸುವ ಸಾಧ್ಯತೆ ದಟ್ಟವಾಗಿದೆ. ಶುಭಸಂಖ್ಯೆ:9
ಕನ್ಯಾ: ದಿನಸಿ ವ್ಯಾಪಾರಸ್ಥರಿಗೆ ಹೆಚ್ಚು ಲಾಭ. ಮೂಳೆಗಳ ಸಮಸ್ಯೆ ಬಾಧಿಸುತ್ತದೆ. ಅಲಂಕಾರಿಕ ವಸ್ತುಗಳ ಖರೀದಿ. ಮಾನಸಿಕ ಕಿರಿಕಿರಿ. ಶುಭಸಂಖ್ಯೆ:2
ತುಲಾ: ರಕ್ತದೊತ್ತಡದ ಸಮಸ್ಯೆ ಕಾಣಿಸಬಹುದು. ನಿರ್ಧಾರಗಳ ಬದಲಾವಣೆಯಿಂದ ಕೆಲಸಗಳಲ್ಲಿ ಹಿನ್ನಡೆ. ಆತ್ಮವಿಶ್ವಾಸದ ಕೊರತೆ. ಶುಭಸಂಖ್ಯೆ: 4
ವೃಶ್ಚಿಕ: ಆದಾಯಕ್ಕೆ ತಕ್ಕಂತೆ ವೆಚ್ಚ ಮಾಡುವುದು ಜಾಣತನ. ದಾಂಪತ್ಯದಲ್ಲಿ ಸಾಮರಸ್ಯ. ಕಲಾವಿದರಿಗೆ ಪರಿಶ್ರಮದ ಅಗತ್ಯವಿದೆ. ಶುಭಸಂಖ್ಯೆ:3
ಧನಸ್ಸು: ಬಟ್ಟೆ ಮತ್ತು ಮಕ್ಕಳ ಆಟಿಕೆಗಳ ವ್ಯವಹಾರದಲ್ಲಿ ಲಾಭ. ಪತ್ರಕರ್ತರು, ಬರಹಗಾರರರಿಗೆ ಸೋಲು-ಗೆಲುವು ಸಮಾನವಾಗಿರುತ್ತದೆ. ಶುಭಸಂಖ್ಯೆ:2
ಮಕರ: ಕೃಷಿಕರಿಗೆ ಶುಭದಾಯಕ ದಿನ. ವಿದೇಶದಲ್ಲಿರುವ ಬಂಧುಗಳಿಂದ ಅಶುಭ ಸುದ್ದಿ ಬಂದು ಬೇಸರ. ಸಾಲದಿಂದ ಮುಕ್ತಿ ಸಿಗಲಿದೆ. ಶುಭಸಂಖ್ಯೆ:6
ಕುಂಭ: ದೇವತಾ ಕಾರ್ಯಗಳಲ್ಲಿ ಭಾಗಿ. ವಸ್ತ್ರ ವ್ಯಾಪಾರದಲ್ಲಿ ಶುಭ. ಲೇವಾದೇವಿ ವ್ಯವಹಾರದಲ್ಲಿ ಆದಾಯದಷ್ಟೇ ಖರ್ಚು ಇರುತ್ತದೆ. ಶುಭಸಂಖ್ಯೆ:1
ಮೀನ: ಮಕ್ಕಳಿಗೆ ನೌಕರಿಯಲ್ಲಿ ಬಡ್ತಿ. ಶಿಕ್ಷಕರಿಗೆ ಶುಭ. ಸಂಬಂಧಗಳಲ್ಲಿ ಬಿರುಕು. ಸಿಮೆಂಟ್, ಮರಳು ವ್ಯಾಪಾರದಲ್ಲಿ ಹೆಚ್ಚು ಲಾಭ. ಶುಭಸಂಖ್ಯೆ: 2