ನ್ಯೂಸ್

15ರಂದು ಇಂಡಿಯಾ ಕ್ವಿಝ್ ಫೈನಲ್ಸ್: ಕರ್ನಾಟಕದ ನಾಲ್ವರು ಸೇರಿ 12 ಸ್ಪರ್ಧಿಗಳು

ಬೆಂಗಳೂರು: ಮುಂಬಯಿಯ ಸಕ್ಸಸ್ ಫಿಲಂಸ್​ ನಡೆಸುತ್ತಿರುವ, ಡಿ.ಕೆ. ಫ್ಲ್ಯಾಗ್ ಫ಼ೌಂಡೇಷನ್ ಪ್ರಾಯೋಜಿಸಿರುವ ರಾಷ್ಟ್ರಮಟ್ಟದ ಇಂಡಿಯಾ ಕ್ವಿಝ್ ಫೈನಲ್ಸ್​ಗೆ ಕರ್ನಾಟಕದ ನಾಲ್ವರು ಸೇರಿ ಒಟ್ಟು 12 ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ.

ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ನ್ಯಾಫ್ರೋಲೋಜಿ ವಿಭಾಗದ ಮುಖ್ಯಸ್ಥ ಡಾ ಸುಶಾಂತ್, ವಿಪ್ರೋ ಸಾಫ್ಟ್​ವೇರ್ಸ್​ನ ಹಿರಿಯ ಕ್ವಾಲಿಟಿ ಮ್ಯಾನೇಜರ್ ಗಿರೀಶ್ ನಾಯ್ಕ್, ಚಿತ್ರ ನಟ ರಾಕೇಶ್ ಅಡಿಗ ಮತ್ತು ಬೆಂಗಳೂರಿನ ಜೈನ್ ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿ ಮಿತ್ರ ಹೆಗಡೆ ಫೈನಲ್ಸ್ ಪ್ರವೇಶಿಸಿದವರು.

ಇನ್ನುಳಿದಂತೆ, ವೈಟ್ ಕ್ರೋವ್ ಮತ್ತು ಕೋಲ್ ವಿಲ್ ಬ್ಯಾಂಕ್ ನ ಸಂಸ್ಥಾಪಕ ಪ್ರೇಮ್ಸ್ ಸ್ಕ್ರೇಂಪಿಕಲ್ಸ್ , ಜಪಾನ್ ಮೂಲದ ಅತಿದೊಡ್ದ ಇನ್ ವೆಸ್ಟ್ ಮೆಂಟ್ ಕಂಪೆನಿ್ "ನೊಮುರಾ"ದ ಎಕ್ಸಿಕ್ಯುಟಿವ್ ಡೈರೆಕ್ಟರ್ ದೀಪಕ್ ತೋಮರ್, ಬಹುರಾಷ್ಟ್ರೀಯ ಕಂಪೆನಿ ಕೆ ಪಿ ಎಮ್ ಜಿ( ಕ್ಲಿನ್ ವೆಲ್ಡ್ ಪೀಟ್ ಮಾರ್ವಿ ಕ್ ಗೋಎರ್ಡೆಲೆರ್ ) ಹಿರಿಯ ಪಾರ್ಟ್ನರ್ ನವೀನ್ ಅಗರ್​ವಾಲ್, ಹಿಂದಿ ಟಿವಿ ಸೀರಿಯಲ್ ನಟಿ ಮತ್ತು ಎನ್ ಎಸ್ ಡಿ ಪದವೀಧರೆ ನೀಲಂ ಲೂಂಕರ್, , ಪತಂಜಲಿ ಮತ್ತಿ ಐ ಟಿ ಸಿ ಕಂಪೆನಿಗಳ ಆಹಾರ ತಜ್ನ ಅಮಿತ್ ತ್ರಿಪಾಠಿ ( ಕಾನ್ಪುರ), ತಿರುವನಂತಪುರದ ಖ್ಯಾತ ವೈದ್ಯೆ ಡಾ ದೀಪ್ತಿ ಸ್ಯಾಮ್ಯುಯಲ್, ಹೆಚ್ ಸಿ ಸಿ ಮತ್ತು "ಲಾವಾಸ" ಇದರ ವಿ ಪಿ ಮತ್ತು ಸಿ ಎಕ್ಸ್ ಒ ಪ್ರವೀಣ್ ಸೂದ್ , ಬಹುರಾಷ್ಟ್ರೀಯ ಕಂಪೆನಿ ಕೆಮ್ ಟ್ರೀಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ಥಾಪಕ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಮುಕುಲ್ ಗುಪ್ತಾ, ಗುಜರಾತಿ ಚಿತ್ರನಟಿ ಹಿಮಾಂಗಿನಿ, ಏರ್ ಇಂಡಿಯಾದ ಹಿರಿಯ ಕ್ಯಾಬಿನ್ ಕ್ರೂ , ರಾಹುಲ್ ಶರ್ಮಾ ( ಮೀರತ್) ಫೈನಲ್​ ತಲುಪಿದ ಇತರೆ ಸ್ಪರ್ಧಿಗಳು.

ಏನಿದು ಕ್ವಿಝ್: ದೇಶದ ಇತಿಹಾಸ ಮತ್ತು ಸ್ವಾತಂತ್ರ್ಯ ಸಂಗ್ರಾಮದ ವಿಷಯಗಳ ಕುರಿತ ಈ ಕ್ವಿಜ್ ಕಾರ್ಯಕ್ರಮವು ಕಳೆದ ಜುಲೈ 4ರಿಂದ ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 5ರಿಂದ ಆನ್ ಲೈನ್ ನಲ್ಲಿ ನಡೆಯುತ್ತಿತ್ತು. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರ ತನಕ ಮುಕ್ತವಾಗಿ ಪ್ರಪ್ರಥಮ ಬಾರಿಗೆ ಆನ್ ಲೈನ್ ನಲ್ಲಿ ನಡೆಯುತ್ತಿರುವ ಈ ಕ್ವಿಝ್ ಕಾರ್ಯಕ್ರಮವನ್ನು ಕನ್ನಡಿಗ ಸುಧೀರ್ ಅತ್ತಾವರ್ ಅತ್ಯಂತ ವಿಶಿಷ್ಟವಾಗಿ ವಿನ್ಯಾಸಗೊಳಿಸಿ ಪ್ರಸ್ತುತ ಪಡಿಸುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ವಿವಿಧ ಸ್ತರಗಳಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ "ವಾಷೀ" ಎಲೆಕ್ಟ್ರಿಕಲ್ಸ್​ನ ಮದನ್ ಡೊಡೇಜಾ, ಹಿರಾನಂದಾನಿ ಕಂಪೆನಿ ನಿರ್ದೇಶಕ ಪ್ರಕಾಶ್ ಮೆಹ್ತಾ, ಅಲಹಾಬಾದ್ ಹೈಕೋರ್ಟಿನ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಸುಧೀರ್ ಅಗರ್​ವಾಲ್​, ಸಿಂಥೆಟಿಕ್ ಟೆಕ್ಸ್​ಟೈಲ್ಸ್ ಉತ್ಪಾದಕ ಮತ್ತು ರಫ್ತುದಾರ ಮುಕೇಶ್ ಭಾರ್ಗವ್, ಮಾಸ್ಕೋ ಒಲಿಂಪಿಕ್ಸ್​​ನ ಹಾಕಿ ಚಿನ್ನದ ಪದಕ ವಿಜೇತ ಮೆಲ್ವಿನ್ ಫ಼ೆರ್ನಾಂಡಿಸ್, ಸೌತ್ ಏಷಿಯಾ ಹ್ಯಬಾಸಿಟ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಅಶೋಕ್ ಮಲ್ಹೋತ್ರ, ಮುಂಬಾಯಿ ಯೂನಿವರ್ಸಿಟಿಯ ನಿಕಟಪೂರ್ವ ಕುಲಪತಿ ಪ್ರೊ ಸಂಜಯ್ ದೇಶಮುಖ್, ಯುರೋಪಿನ ರಾಯಲ್ ಲಂಡನ್ ಆಸ್ಪತ್ರೆಯ ಖ್ಯಾತ ಶಸ್ತ್ರಚಿಕಿತ್ಸಕ ಡಾ ಶೈಲೇಶ್ ಮೋಹನ್ ದಾಸ್, ಮಧ್ಯಪ್ರದೇಶದ ಡಾ ಹರ್ಮಿತ್ ಸಿಂಗ್ ಸಲೂಜ, ಡಾ ಶಂಕಿ ಗೋಯಲ್, ಕಥಕ್ ಕಲಾವಿದೆ ನಂದಿನಿ ಮೆಹ್ತಾ, ಕರ್ನಾಟಕದ ಮಾಜಿ ಪೋಲಿಸ್ ಕಮಿಷನರ್ ಡಾ.ಗುರುಪ್ರಸಾದ್ ಸೇರಿ ಎಪ್ಪತೈದರಷ್ಟು ಸ್ಪರ್ಧಿಗಳು ವಿವಿಧ ಹಂತಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ದೇಶದ 73ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ಈ ಸ್ಪರ್ಧೆಯನ್ನು ಸುಧೀರ್ ಅತ್ತಾವರ್ ವಿನ್ಯಾಸಗೊಳಿಸಿದ್ದಾರೆ. ಆಗಸ್ಟ್ 15ರಂದು ಸಾಗುವ ಫೈನಲ್ಸ್, ಸಂಜೆ ಏಳರಿಂದ ಫೇಸ್​ಬುಕ್​, ಇನ್​ಸ್ಟಾಗ್ರಾಂ ಮತ್ತು ಯೂ ಟ್ಯೂಬ್ ಗಳಲ್ಲಿ ಪ್ರಸಾರವಾಗಲಿದೆ. ಕಾರ್ಯಕ್ರಮವನ್ನು ಖ್ಯಾತ ನಟಿ, ಗಾಯಕಿ ಶರೋನ್ ಪ್ರಭಾಕರ್ ಮತ್ತು ಡಿ ಕೆ ಫ್ಲಾಗ್ ಫ಼ೌಂಡೇಷನ್ ನ ಡಾ.ರಾಕೇಶ್ ಭಕ್ಷಿ ನಡೆಸಿಕೊಡಲಿದ್ದಾರೆ. ಈ ವಿನೂತನ ಆನ್ ಲೈನ್ ಕಾರ್ಯಕ್ರಮವನ್ನು ಕನ್ನಡಿಗ ಸಕ್ಸಸ್ ಫಿಲಂಸ್​ನ ವಿದ್ಯಾಧರ್ ಶೆಟ್ಟಿ ಆಕರ್ಷವಾಗಿ ಡಿಜಿಟಲ್ ವಿನ್ಯಾಸಗೊಳಿಸಿದ್ದಾರೆ.