ಆಗ್ರಾ: ಮಾಜಿ ಮಿಸ್ ಇಂಡಿಯಾ ವಿಜೇತೆಯೊಬ್ಬರಿಗೆ ಸಿಬಿಐ ಅಧಿಕಾರಿಗಳಂತೆ ವರ್ತಿಸಿ ಎರಡು ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡುವ ಮೂಲಕ 99,000 ರೂ.ಗಳನ್ನು ಸೈಬರ್ ಖದೀಮರು ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಂಕಿತಾ ದೀಕ್ಷಿತ್ ವಂಚನೆಗೆ ಒಳಗಾದ ಆಗ್ರಾ ಮೂಲದ ಮಾಜಿ ಮಿಸ್ ಇಂಡಿಯಾ(2017). ಶಿವಂಕಿತಾ ದೀಕ್ಷಿತ್ಗೆ ಕರೆ ಮಾಡಿದ ಸೈಬರ್ ವಂಚಕರು, '' ಮಾನವ ಕಳ್ಳಸಾಗಣಿಕೆ ಮತ್ತು ಮಾದಕವಸ್ತು ಕಳ್ಳಸಾಗಣಿಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನೀವು (ಶಿವಂಕಿತಾ ದೀಕ್ಷಿತ್) ಭಾಗಿಯಾಗಿ ಆಕ್ರಮ ಹಣ ಪಡೆದಿದ್ದಿರಿ ಎಂದು ಆರೋಪಿಸಿದ್ದಾರೆ. ಬಳಿಕ ಸಿಬಿಐ ಅಧಿಕಾರಿಗಳಂತೆ ಬಟ್ಟೆ ಧರಿಸಿ ವಾಟ್ಸಪ್ ಕಾಲ್ ಮಾಡಿದ್ದಾರೆ. ನಿಮ್ಮನ್ನೂ ಯಾವಾಗ ಬೇಕಾದರೂ ಬಂಧಿಸಬಹದು. ಈ ಬಂಧನದಿಂದ ತಪ್ಪಿಸಲು 2.5 ಲಕ್ಷ ರೂ. ಪಾವತಿಸುವಂತೆ ಒತ್ತಾಯಿಸಿದ್ದಾರೆ. ವಂಚಕರ ಬೆದರಿಕೆಯನ್ನು ನಂಬಿದ ದೀಕ್ಷಿತ್ 2.5 ಲಕ್ಷ ರೂ. ಪಾವತಿಸಲು ಮುಂದಾಗಿದ್ದಾರೆ. ಆದರೆ, 99,000 ರೂ. ಮಾತ್ರ ಪೇ ಮಾಡಲು ಲಿಮಿಟ್ ಇದೆ. ಹೀಗಾಗಿ, ಇದನ್ನು ಪೇ ಮಾಡುವೆ ಎಂದು ವಂಚರಕ ಖಾತೆಗೆ 99,000 ರೂ ಹಾಕಿದ್ದಾರೆ'' ಎಂದು ಸಹಾಯಕ ಪೊಲೀಸ್ ಆಯುಕ್ತ ಮಯಾಂಕ್ ತಿವಾರಿ ಹೇಳಿದರು.
ಇದನ್ನೂ ಓದಿ: 10 ವರ್ಷದಿಂದ ಆತನೊಟ್ಟಿಗೆ ಮಾತನಾಡಿಲ್ಲ; ಹೇಳಿಕೆ ವೈರಲ್ ಆದ ಬೆನ್ನಲ್ಲೇ ಮಾರ್ಮಿಕವಾಗಿ ಟ್ವೀಟ್ ಮಾಡಿದ Harbhajan Singh
ಬಳಿಕ ಈ ವಿಷಯವನ್ನು ತಮ್ಮ ತಂದೆ ತಾಯಿಗೆ ತಿಳಿಸಿದಾಗ ವಂಚನೆ ಒಳಗಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆ ದೀಕ್ಷಿತ್ ತಂದೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಡಿಜಿಟಲ್ ಬಂಧನ ಎಂದರೇನು?
ಸೈಬರ್ ಕೈಮ್ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇತ್ತೊಂದು ಹೊಸ ಪದವನ್ನು ಬಳಸುತ್ತಿದ್ದಾರೆ. ಕೆಲ ವಂಚಕರು ಸರ್ಕಾರಿ ಅಧಿಕಾರಿಗಳಂತೆ ನಟಿಸಿ, ಬಂಧನದ ಬೆದರಿಕೆ ಹಾಕುವ ಹೊಸ ವಿಧಾನವೆ ಡಿಜಿಟಲ್ ಬಂಧನ(ಏಜೆನ್ಸಿಸ್).