ಕೇರಳ: 'ಡಿಜಿಟಲ್ ಅರೆಸ್ಟ್' ವಂಚನೆ(Cybercriminal)ಪ್ರಕರಣದಲ್ಲಿ ಇಲ್ಲಿನ ಕೊಚ್ಚಿಯ ಮಹಿಳೆಯೊಬ್ಬರಿಗೆ ಬರೊಬ್ಬರಿ 4.12 ಕೋಟಿ ರೂ. ವಂಚನೆ ಮಾಡಿದರ ಆರೋಪದ ಮೇಲೆ ಇಬ್ಬರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಮಣಪುರಂ ಜಿಲ್ಲೆಯ ಅರೀಕೋಡ್ನ ನಿವಾಸಿಗಳಾದ ಮೊಹಮ್ಮದ್ ಮುಹಾಸಿಲ್(22) ಮತ್ತು ಮಿಶಾಬ್ ಕೆಪಿ (21) ಬಂಧಿತ ವ್ಯಕ್ತಿಗಳು. ದೆಹಲಿ ಪೊಲೀಸ್ ಅಧಿಕಾರಿಗಳು ಎಂಬಂತೆ ನಟಿಸಿ ಮಹಿಳೆಯಿಂದ ಕೋಟ್ಯಾಂತರ ರೂ. ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ಸಂಪರ್ಕಿಸಿದ ಖದೀಮರು, ''ನಿಮ್ಮ ಆಧಾರ್ ಕಾರ್ಡ್ ಬಳಸಿ ವಂಚನೆ ಮೂಲಕ ಬ್ಯಾಂಕ್ ಖಾತೆ ತೆರೆದಿದ್ದಾರೆ. ಹೀಗಾಗಿ, ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ ಎಂದು ಮಹಿಳೆಯನ್ನು ನಂಬಿಸಿದ ಖದೀಮರು, ದೆಹಲಿ ಪೊಲೀಸ್ ಅಧಿಕಾರಿಗಳಂತೆ ಪೋನ್ ಮತ್ತು ವಿಡಿಯೋ ಕಾಲ್ ಮಾಡಿ ''ಡಿಜಿಟಲ್ ಬಂಧನ''ಕ್ಕೆ ಒಳಪಡಿಸಿದ್ದಾರೆ. ನಿಮ್ಮ(ಮಹಿಳೆ) ಖಾತೆಯಲ್ಲಿರುವ ಒಟ್ಟು ಹಣ ಈ ಹೊಸ ಖಾತೆಗೆ ವರ್ಗಾವಣೆ ಮಾಡಿ ಎಂದ ಖದೀಮರು ತಮ್ಮ ಹೊಸ ಖಾತೆಗೆ ಎಲ್ಲಾ ಹಣ ಟ್ರಾನ್ಸಫರ್ ಮಾಡಿಸಿಕೊಂಡಿದ್ದಾರೆ'' ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ತೃಕ್ಕಾಕರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಕೊಚ್ಚಿ ನಗರ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ಅವರ ಸೂಚನೆ ಮೇರೆಗೆ ಪ್ರಕರಣವನ್ನು ಸಹಾಯಕ ಪೊಲೀಸ್ ಆಯುಕ್ತ(ಸೈಬರ್) ಎಂ.ಕೆ. ಮುರಳಿಗೆ ವರ್ಗಾಹಿಸಲಾಗಿತು. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಿಲಾಗಿತ್ತು.
ಇನ್ನು ವಂಚಿಸಿದ ಹಣವನ್ನು ತಮ್ಮ ನಂಬಿಕಸ್ಥರ ಖಾತೆಗಳಿಗೆ ವಂಚಕರು ವರ್ಗಾಹಿಸಿದ್ದಾರೆ. ವಂಚನೆಯ ಹಣದಲ್ಲಿ ಅಧಿಕ ಭಾಗವನ್ನು ಮಣಪುರಂನಲ್ಲಿ ವಿತ್ ಡ್ರಾ ಮಾಡಲಾಗಿದೆ ಎಂಬ ಮಾಹಿತಿ ಆಧರಿಸಿದ ಪೊಲೀಸರು, ಮಣಪುರಂನಲ್ಲಿರು ಎಲ್ಲಾ ಎಟಿಟಂ ಸ್ಥಳಗಳ ಮೇಲೆ ನಿಗಾ ಇಟ್ಟಿದ್ದಾರೆ. ಇವರ ದೂರವಾಣಿ ಕರೆಗಳ ಮೇಲೆ ಕೂಡ ಕಣ್ಣೀಟ್ಟಿದ್ದ ಪೊಲೀಸರು ಕೊನೆಗೆ ನಿಖರ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಿದ್ದಾರೆ, (ಏಜೆನ್ಸೀಸ್).