ಹೋಟೆಲ್​ನಲ್ಲಿ ಅಧಿಕಾರಿಗಳಿಂದ ಪರಿಶೀಲನೆ  
ನ್ಯೂಸ್

ಫುಡ್ ತಿಂದವನಿಗೆ ವಾಂತಿ, ಎರಡೇ ದಿನಗಳಲ್ಲಿ ಹೋಟೆಲ್​ಗೆ ಬಿತ್ತು ಬೀಗ!

ಸಿಕಂದರಾಬಾದ್: ಫುಡ್ ತಿಂದವನ ಆರೋಗ್ಯ ಕೆಟ್ಟ ಪ್ರಕರಣ ಎರಡೇ ದಿನಗಳಲ್ಲಿ ಆ ಹೋಟೆಲ್ ಮಾಲೀಕನ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ. ಇಂಥದ್ದೊಂದು ಪ್ರಕರಣ ಸಿಕಂದರಾಬಾದ್​ನಲ್ಲಿ ನಡೆದಿದೆ.

ಇಲ್ಲಿನ ಹೋಟೆಲೊಂದರಲ್ಲಿ ಜಮಾಲುದ್ದೀನ್ ಎಂಬ 40 ವರ್ಷದ ವ್ಯಕ್ತಿ ಹಾಗೂ ಆತನ ಸ್ನೇಹಿತ ಮೆಹಮೂದ್​ ಎರಡು ದಿನಗಳ ಹಿಂದೆ ಮಟನ್ ಖೀಮಾ ರೋಟಿ ತಿಂದಿದ್ದರು. ಆದರೆ ಇಬ್ಬರಿಗೂ ಆ ಆಹಾರ ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿತ್ತು.

ನಂತರ ಮೆಹಮೂದ್ ಅಸ್ವಸ್ಥಗೊಂಡು ವಾಂತಿ ಮಾಡಿದ್ದ. ಅಲ್ಲಿನ ಶುಚಿತ್ವ ಇರದ ಆಹಾರ ಸೇವನೆಯಿಂದ ಹೀಗಾಗಿದೆ ಎಂದು ಜಮಾಲುದ್ದೀನ್​ ಸ್ಥಳೀಯ ಆಡಳಿತಕ್ಕೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಅಲ್ಲಿನ ಪಾಲಿಕೆ ಅಧಿಕಾರಿಗಳು ಹೋಟೆಲ್​ಗೆ ತೆರಳಿ ಪರಿಶೀಲನೆ ನಡೆಸಿ ಬೀಗ ಜಡಿದಿದ್ದಾರೆ. ಹೋಟೆಲ್ ವಿರುದ್ಧ ಕಠಿಣ ಕ್ರಮ ಕಾನೂನು ಕೈಗೊಳ್ಳುವಂತೆ ದೂರುದಾರರು ಆಗ್ರಹಿಸಿದ್ದಾರೆ.