ನ್ಯೂಸ್

ಅಧಿಕಾರದಲ್ಲಿದ್ದರೂ ಪ್ರತಿಭಟಿಸುತ್ತಿರುವ ಜಗತ್ತಿನ ಏಕೈಕ ಪಕ್ಷ ಕಾಂಗ್ರೆಸ್: ಸಿ.ಟಿ. ರವಿ ಟಾಂಗ್

ಮೋಹನ್​ ಶೆಟ್ಟಿ

ಬೆಂಗಳೂರು: ಅಧಿಕಾರದಲ್ಲಿದ್ದರೂ ಪ್ರತಿಭಟಿಸುತ್ತಿರುವ ಜಗತ್ತಿನ ಏಕೈಕ ಪಕ್ಷ ಕಾಂಗ್ರೆಸ್(Congress) ಆಗಿರಬೇಕು ಎಂದು ರಾಜ್ಯ ಸರ್ಕಾರದ(State Government) ವಿರುದ್ಧ ಶಾಸಕ ಸಿ.ಟಿ. ರವಿ ಟ್ವೀಟ್ ಮುಖೇನ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರ್ಕಾರ(Central Government) ಅಕ್ಕಿ ಕೊಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿ, ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿರುವ ಸಿ.ಟಿ. ರವಿ(CT Ravi), "ಪ್ರತಿ ಕನ್ನಡಿಗನಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಭರವಸೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಮನಗಂಡಿರುವ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

"ತಮ್ಮ ವೈಫಲ್ಯವನ್ನು ಮರೆಮಾಚಲು ಈ ಸೋತವರು ತಮ್ಮ ಪ್ರತಿಭಟನೆಯ ಮೂಲಕ ಕನ್ನಡಿಗರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಎಷ್ಟೇ ಪ್ರತಿಭಟಿಸಿದರೂ ಕನ್ನಡಿಗರು ಚುನಾವಣಾ ಸಂದರ್ಭದಲ್ಲಿ ಮಾಡಿದ ವಂಚನೆಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಹೇಳಿದ್ದಾರೆ.

"ಅಧಿಕಾರಕ್ಕೆ ಬರಲು ಏನು ಬೇಕಾದರೂ ಭರವಸೆ ನೀಡುವ ಮೋಸಗಾರರ ಮೇಲೆ ಜನರು ನಂಬಿಕೆ ಇಟ್ಟರೆ ಹೀಗಾಗುತ್ತದೆ" ಎಂದು ಟ್ವೀಟ್(Tweet) ಮಾಡುವ ಮುಖೇನ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.