ನ್ಯೂಸ್

ಕುರಿಗಾಹಿ, ಕೃಷಿಯಲ್ಲಿ ಕೋಟ್ಯಧಿಪತಿ!

Webdesk - Ravikanth
ಕೃಷಿಯಲ್ಲೂ ಕೋಟಿ ರೂ. ದುಡಿಯಲು ಅವಕಾಶವಿದೆ. ಕಷ್ಟಪಟ್ಟರೆ ಕೋಟಿ ರೂ. ಎಣಿಸಲು ಖಂಡಿತಾ ಸಾಧ್ಯವಿದೆ ಎಂದು ಸಾರುತ್ತೆ ಈ ರೈತನ ಸಾಧನೆ. ಕೃಷಿ ಹಿನ್ನೆಲೆಯೂ ಇರಲಿಲ್ಲ, ಕೃಷಿ ಕುಟುಂಬದಲ್ಲೂ ಹುಟ್ಟಿರಲಿಲ್ಲ. ಆದರೂ ಕೃಷಿಯಲ್ಲಿ ಕೋಟ್ಯಧಿಪತಿ. ಹೌದು, ಕನರಿದ ಕೃಷಿ ಕನಸಿನ ಬೆನ್ನತ್ತಿ, ಶ್ರದ್ಧೆ, ಪ್ರಾಮಾಣಿಕತೆ, ಭರವಸೆಯೊಂದಿಗೆ ಶ್ರಮಿಸಿದ ಪರಿಣಾಮ ವರ್ಷಕ್ಕೆ ಕೋಟಿ ರೂ. ಸಂಪಾದನೆ ಮಾಡುವಂತಾಗಿದೆ. ಅದಕ್ಕೆ ಅಲ್ವಾ ಕೃಷಿತೋ ನಾಸ್ತಿ ದುರ್ಭಿಕ್ಷಂ ಅನ್ನೋದು. ಇಂಥದ್ದೊಂದು ಯಶೋಗಾಥೆ ಬರೆದ ರೈತನೇ ಮುತ್ತಣ್ಣ ಪೂಜಾರ. ನೂರೆಂಟು ನಿಂದನೆಗಳು ಹಿಂಡಿ ಹಿಪ್ಪೆ ಮಾಡುವಂತಿದ್ದರು ಅಚ್ಚೊತ್ತಿದ್ದ ಕೃಷಿ ಸಂಕಲ್ಪ ನಾಡೇ ಮೆಚ್ಚುಗೆಯ ಸುರಿಮಳೆ ಸುರಿಸುವಂತೆ ಮಾಡಿದೆ. ಗೆಲುವಿನ ಪರ್ವ ಇಂದು ಬಹುಬೆಳೆ ಜತೆ ಹೈನು, ಜೇನು, ಮೀನುಗಳನ್ನೊಳಗೊಂಡ ಜೀವನಾಧಾರ ಕೃಷಿಯಲ್ಲಿ 70 ಲಕ್ಷ ರೂ. ದುಡಿಯುವಂತೆ ಮಾಡಿದ್ರೆ ನರ್ಸರಿ 30 ಲಕ್ಷ ರೂ. ಆದಾಯ ತಂದುಕೊಡುತ್ತಿದೆ. ಇವತ್ತು ಮುತ್ತಣ್ಣ ಮಾದರಿ ರೈತನೇ ಆಗಿದ್ದರೂ ಮುತ್ತಣ್ಣನ ಜೀವನ ಪಯಣ ಯಾವ ಸಿನಿಮಾಗೂ ಕಡಿಮೆಯಿಲ್ಲ. ಅಲೆಮಾರಿ ಕುರಿಗಾಹಿ ಕುಟುಂಬದಲ್ಲಿ ಹುಟ್ಟಿದ ಹಿರಿಮಗ ಮುತ್ತಣ್ಣ ತನ್ನ 8ನೇ ವಯಸ್ಸಿನಲ್ಲೇ 25 ಕುರಿ ಮಂದೆಯೊಂದಿಗೆ ಊರುಬಿಟ್ಟು ಅಲೆಮಾರಿ ಬದುಕು ಶುರುಮಾಡಿದ್ದರು. ಸಾಗುವ ದಾರಿಯಲ್ಲಿ ಕೇಳಿ, ನೋಡಿ ಅಕ್ಷರ ಕಲಿತರು. ಮದುವೆಯೂ ಆಯಿತು, ಮಕ್ಕಳು ಆದವು. ಸಂಸಾರ ಸಮೇತ ಹತ್ತೂರ ಅಲೆದಾಟದಲ್ಲಿದ್ದಾಗ 2000 ಕುರಿ ಹಿಂಡು ಕೂಡ ಜೊತೆಯಲಿ ಹೆಜ್ಜೆ ಹಾಕ್ತಿದ್ದವು. ಆಗ ದಿಢೀರನೇ ಅಪ್ಪಳಿಸಿದ ಅವಘಡದಲ್ಲಿ ಬಹುತೇಕ ಕುರಿ ಸತ್ತು 400 ಕುರಿ ಅಳುದುಳಿದಿದ್ದವು. ಆ ಸಂದರ್ಭ ಮುತ್ತಣ್ಣನ ಬದುಕಿನ ಮಹತ್ತರ ಬದಲಾವಣೆ ಪರ್ವ. ನೊಂದ ಮುತ್ತಣ್ಣ ಅಲ್ಲೇ ಅಲೆಮಾರಿ ಜೀವನ ಅಂತಿಮ ಮಾಡಿ ಒಂದು ಕಡೆ ನೆಲೆನಿಲ್ಲುವ ಕೃಷಿ ಕ್ಷೇತ್ರ ಆಯ್ಕೆ ಮಾಡಿಕೊಂಡರು. ಬರದ ನಡುವೆ ಆರಂಭವಾದ ಕೃಷಿ, ಆರಂಭದಲ್ಲಿ ಸೋಲು ನೀಡಿದರು ಕ್ರಮೇಣ ಸಂಚಾರ ಜೀವನದಲ್ಲಿ ಕಂಡ ಕೃಷಿ ಪದ್ಧತಿ ಅಳವಡಿಕೆ ಮೂಲಕ ಯಶೋಗಾಥೆ ಬರೆದೇಬಿಡುವಂತೆ ಮಾಡಿದೆ. ದಿನದ ಆದಾಯ, ವಾರದ ಆದಾಯ, ತಿಂಗಳು, 3 ತಿಂಗಳು, ವರ್ಷದ ಆದಾಯ ಕೂಡ ಬರಲಾರಂಭಿಸಿ ಜೀವನಕ್ಕೆ ಆಧಾರವಾಗುತ್ತಾ ಬಂದಿದೆ. ಒಲಿದ ಕೃಷಿ ಭೂಮಿ ಕುರಿಗಾಹಿಯನ್ನ ಕೋಟ್ಯಧಿಪತಿ ಕೃಷಿಕನನ್ನಾಗಿ ಮಾಡಿದೆ.

ಜೀವನಾಧಾರ ಕೃಷಿ ಪದ್ಧತಿ: ಜೀವನಕ್ಕೆ ಬೇಕಿರುವುದು ಆಹಾರ, ಆಶ್ರಯ, ಆದಾಯ ಈ ಮೂರು. ನಿಲ್ಲೋದಕ್ಕೊಂದು ನೆಲೆ, ಉಂಡು- ಉಪಚರಿಸುವುದಕ್ಕೆ ಬೆಳೆ, ಓಡಾಡೋದಕ್ಕೆ ಹಣ, ಇವನ್ನ ಇದ್ದ ಭೂಮಿಯಲ್ಲೇ ಸಂಪಾದಿಸುವುದು ಜೀವನಾಧಾರ ಕೃಷಿಯ ಧ್ಯೇಯ. ಇದೇ ಅಂಶವನ್ನು ಅಳವಡಿಸಿಕೊಂಡು ದಿನದ ಭತ್ಯೆ, ವಾರದ ಬಟಾವಾಡಿ, ತಿಂಗಳ ವೇತನ, 6 ತಿಂಗಳ ಸಂಭಾವನೆ, ವರ್ಷದ ಆದಾಯ, ಬಹುವರ್ಷದ ವಿಮೆ ರೂಪದ ಹಣ ಬರುವ ದಾರಿಯನ್ನು ಸೃಷ್ಟಿಸಿಕೊಳ್ಳಬೇಕು. ದಿನದ ದುಡಿಮೆಗೆ ಮೊಟ್ಟೆ, ವಾರದ ಸಂತೆಗೆ ಕೋಳಿ/ತರಕಾರಿ, ತಿಂಗಳ ಸಂಬಳಕ್ಕೆ ಹಾಲು, 3 ತಿಂಗಳ ದುಡ್ಡಿಗೆ ಭತ್ತ, ವರ್ಷಕ್ಕೆ ಅಡಕೆ, ವಿಮೆಗೆ ಅರಣ್ಯ ಕೃಷಿ ಇವುಗಳ ಅಳವಡಿಕೆ ಪರಿಣಾಮವೇ ಮುತ್ತಣ್ಣ ಬಹುಮೂಲದಿಂದ 1 ವರ್ಷಕ್ಕೆ ಕೋಟಿ ರೂ. ದುಡಿಯುತ್ತಿದ್ದಾರೆ.

ನಂಟು ಗಂಟಿನ ನಿಗಂಟು: ಕೃಷಿ ಭೂಮಿಯಲ್ಲಿ ಒಂದಕ್ಕೊಂದು ನಂಟಿದ್ದರೆ ಅರ್ಧ ಗೆಲುವು ಪಡೆದಂತೆಯೇ ಸರಿ. ಮೇವು ಬೆಳೆದರೆ ಹಸು, ಕುರಿಗಳಿಗೆ ಆಹಾರವಾಗುತ್ತೆ. ಹಸು, ಕುರಿಗಳ ಸೆಗಣಿ, ಹಿಕ್ಕೆ ಬೆಳೆಗಳಿಗೆ ಗೊಬ್ಬರವಾಗುತ್ತೆ. ಗೊಬ್ಬರದಿಂದ ಬೆಳೆಗಳಲ್ಲಿ ಹೆಚ್ಚು ಫಲ ಸಿಗತ್ತೆ. ಫಲಗಳಿಂದ ರೈತನಿಗೆ ಉತ್ತಮ ಆದಾಯ ಬರುತ್ತೆ ಇದೇ ನಂಟು ಗಂಟಿನ ನಿಗಂಟು.

ಸೋಲನ್ನೇ ಸೋಲಿಸಿತ್ತು ಸಾವಯವ ಕೃಷಿ: ರೈತ ಮುತ್ತಣ್ಣನ ಎಲ್ಲ ಸೋಲನ್ನು ಸರಿಪಡಿಸಿದ್ದು ಸಾವಯವ ಕೃಷಿ. ಆಧುನಿಕತೆಗೂ ಪೂರ್ವದಲ್ಲಿ ನಮ್ಮ ಪೂರ್ವಜರು ಕೂಡ ಕೃಷಿ ಬದುಕು ನಡೆಸಿದ್ದು ಸಾವಯವದಲ್ಲೇ. ಅಂದಾಗೆ ಈ ಸಾವಯವ ಕೃಷಿ ಮತ್ತೆ ಮರುಚೇತನ ಪಡೆದುಕೊಂಡಿದ್ದು 1900ರ ಸಮಯದಲ್ಲಿ. ಆಗ ಆಲ್ಬರ್ಟ್ ಹೊವಾರ್ಡ್, ರುಡಾಲ್ಪ್ ಸ್ಟೈನರ್, ಎಫ್.ಎಚ್. ಕಿಂಗ್ ಮತ್ತಿತರರು ಸಾವಯವ ಕೃಷಿ ಮಹತ್ವ ಸಾರಿದ್ದರು. ಅದೇ ರೀತಿ 1940ರ ಸಮಯದಲ್ಲಿ ಭಾರತದ ರೈತರು ಕೂಡ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳೋಕೆ ಎಚ್ಚೆತ್ತುಕೊಳ್ಳತೊಡಗಿದರು. ಎಸ್ಟೋನಿಯ ಜಗತ್ತಿನ ಮೊದಲ ಸಾವಯವ ಕೃಷಿ ರಾಷ್ಟ್ರವೆಂದು ಗುರುತಿಸಿಕೊಂಡಿತು. ಆಸ್ಟ್ರೇಲಿಯ ಅತಿ ಹೆಚ್ಚು ಸಾವಯವ ಕೃಷಿ ಭೂಮಿ ಹೊಂದಿರುವ ರಾಷ್ಟ್ರವೆಂಬ ಮನ್ನಣೆ ಪಡೆಯಿತು. ಹಾಗೆಯೇ ಈ ಸಾವಯವ ಕೃಷಿ ಜತೆಯಲ್ಲೇ ಇನ್ನೆರಡು ಕೃಷಿ ಪದ್ಧತಿಗಳು ಈ ಜಗತ್ತಿನಲ್ಲಿ ಅನಾವರಣಗೊಂಡಿದೆ. ಅದರಲ್ಲಿ ಒಂದು ಜಪಾನ್ ಕೃಷಿ ಸಂತ ಮಸನಬು ಫುಕುವೋಕಾರ ಸಹಜ ಕೃಷಿ, ಮತ್ತು ನಮ್ಮ ದೇಶದ ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ಕೃಷಿ ಪದ್ಧತಿ ಕೂಡ ಕೃಷಿ ಮಹತ್ವ ಸಾರಿ ಸಾಕಷ್ಟು ಜನ ಕೃಷಿಗೆ ಪದಾರ್ಪಣೆ ಮಾಡುವಂತೆ ಮಾಡಿದೆ. ಅದೇ ರೀತಿ ಬರದ ಸಮಯದಲ್ಲಿ ಕೆಮಿಕಲ್ ಕೃಷಿಲಿ ಸೋಲು ಕಂಡ ಮುತ್ತಣ್ಣನನ್ನ ಸಾವಯವ ಕೃಷಿ ಮತ್ತೆ ಭರ್ಜರಿ ಯಶಸ್ಸು ಕಾಣುವಂತೆ ಮಾಡಿದೆ.

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಏನಿದು ಜೀವನಾಧಾರ ಕೃಷಿ?
  • ಜೀವನಾಧಾರ ಕೃಷಿ ಪ್ಲಾ್ಯನ್
  • ಬಂಡವಾಳ ಮತ್ತು ಸರ್ಕಾರದ ಸೌಲಭ್ಯ
  • ನೀರು ಮತ್ತು ಗೊಬ್ಬರದ ವ್ಯವಸ್ಥೆ
  • ಅಲ್ಪಾವಧಿ ಮತ್ತು ದೀರ್ಘಾವಧಿ ಬೆಳೆ ಸ್ಟ್ರಾಟಜಿ
  • ಜೇನು, ಮೀನು, ಕೋಳಿ, ಕುರಿ ಮತ್ತು ಹಸು
  • ಮಾರುಕಟ್ಟೆ ಮತ್ತು ಗಳಿಕೆ ಲೆಕ್ಕಾಚಾರ
  • ಸವಾಲು ಮತ್ತು ಕಿವಿಮಾತು

ಫ್ರೀಡಂ ಆಪ್​ನಲ್ಲಿ ಜೀವನಾಧಾರ ಕೃಷಿ ಕೋರ್ಸ್: ಫ್ರೀಡಂ ಆಪ್​ನಲ್ಲಿ ಜಿಕೃಷಿಯಲ್ಲೇ ಜೀವನ ನಿರ್ವಹಿಸಬಯಸುವವರಿಗಾಗಿ ಜೀವನಕ್ಕೇ ಆಧಾರವಾಗಲಿ ಅನ್ನೋ ನಿಟ್ಟಿನಲ್ಲಿ ಇಂಡಿಯನ್ ಮನಿ ಡಾಟ್ ಕಾಂನ ಫ್ರೀಡಂ ಆಪ್ ಜೀವನಾಧಾರ ಕೃಷಿ ಕೋರ್ಸ್​ನ ಅನಾವರಣ ಮಾಡಿದೆ. ಸಂಚಾರ ಜೀವನ ತೊರೆದು ಜೀವನಕ್ಕೆ ನೆಲೆ ಮಾಡಿಕೊಂಡು ಜೀವನಾಧಾರ ಕೃಷಿ ಮಾಡಿ ಗೆದ್ದ ಯಶಸ್ವಿ ಕೃಷಿಕ ಹಾವೇರಿ ಜಿಲ್ಲೆಯ ಮುತ್ತಣ್ಣ ಪೂಜಾರ ಈ ಕೋರ್ಸ್ ಮಾರ್ಗದರ್ಶಕರು.

ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿ!: ಕನ್ನಡ ನಟಿ ಮತ್ತು ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರು ಇಂಡಿಯನ್ ಮನಿ ಡಾಟ್ ಕಾಂನ ಫ್ರೀಡಂ ಆಪ್ ಸಹಯೋಗದಲ್ಲಿ ನಡೆಸುತ್ತಿರುವ ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಂರ್ಪಸಿ- 9632742525