ನ್ಯೂಸ್

ಗಂಡಿಲ್ಲದೇ ಗರ್ಭ ಧರಿಸಿದ ಮೊಸಳೆ-ಸ್ವಯಂ ಸಂತಾನೋತ್ಪತ್ತಿ ಸಿದ್ಧಾಂತಕ್ಕೆ ಪುರಾವೆ ಎಂದ ಸಂಶೋಧಕರು

ಕ್ಯಾಲಿಫೋರ್ನಿಯಾ: ಕೊಸ್ಟಾರಿಕಾದ ಮೊಸಳೆಯೊಂದು ಗಂಡು ಸಂಗಾತಿ ಇಲ್ಲದೇ ಗರ್ಭವತಿಯಾಗಿದೆಯಂತೆ. ಇದು ಡೈನೋಸಾರ್‌ ಜಾತಿಯ ಪ್ರಾಣಿಗಳು ಸ್ವಯಂ ಸಂತಾನೋತ್ಪತಿ ಮಾಡಬಹುದು ಎಂಬ ಸಿದ್ಧಾಂತವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

18 ವರ್ಷದ ಈ ಹೆಣ್ಣು ಮೊಸಳೆ 16 ವರ್ಷಗಳ ಕಾಲ ಸಂಗಾತಿ ಇಲ್ಲದೇ ಒಂಟಿಯಾಗಿ ಸರೀಸೃಪಗಳಿಗೆ ಇರುವ ಪಾರ್ಕೊಂದರಲ್ಲಿ ಕಳೆದಿತ್ತು. ಆದರೆ ಅಚ್ಚರಿ ಎಂಬಂತೆ 2018ರಲ್ಲಿ ಪಾರ್ಕ್‌ನಲ್ಲಿ ಇದರ ಮೊಟ್ಟೆಯೊಂದು ಪತ್ತೆಯಾಗಿತ್ತು.

ವರ್ಜಿನ್ ಬರ್ತ್ಸ್ ಎಂದು ಕರೆಯಲಾಗುವ ಈ ವಿದ್ಯಮಾನಕ್ಕೆ ವೈಜ್ಞಾನಿಕವಾಗಿ 'ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿಸ್' ಎಂದು ಕೂಡ ಕರೆಯಲಾಗುತ್ತದೆ. ಇದರ ಪ್ರಕಾರ ಕೆಲವು ಪಕ್ಷಿಗಳು ಹಾಗೂ ಸರೀಸೃಪಗಳು ಗಂಡಿನ ಸಂಪರ್ಕವಿಲ್ಲದೇ ಸಂತಾನೋತ್ಪತಿ ನಡೆಸುತ್ತವೆಯಂತೆ. ಇದರ ಪ್ರಕಾರ, ಹೆಣ್ಣು ಮೊಟ್ಟೆಯ ಕೋಶವು ಫಲವತ್ತಾಗದೆ ಭ್ರೂಣವಾಗಿ ಬೆಳೆದಾಗ ಈ ರೀತಿಯ ಪ್ರಕ್ರಿಯೆ ಸಂಭವಿಸುತ್ತದೆ.

ಮೊಟ್ಟೆಯೂ ರೂಪುಗೊಂಡು ಜೊತೆಗೆ ಉಳಿದಿರುವ ಆನುವಂಶಿಕ ವಸ್ತುಗಳೊಂದಿಗೆ ಬೆಸೆಯುವಿಕೆಯಿಂದ ಉಂಟಾಗುತ್ತದೆ ಎಂದು ಭಾವಿಸಲಾಗಿದೆ. ವರ್ಜೀನಿಯಾದ ಪಾಲಿಟೆಕ್ನಿಕ್‌ನ ಸಂಶೋಧಕರ ವಿಶ್ಲೇಷಣೆಯ ಪ್ರಕಾರ ಭ್ರೂಣವು 99.9% ಕ್ಕಿಂತ ಹೆಚ್ಚು ತಳೀಯವಾಗಿ ತಾಯಿಯನ್ನು ಹೋಲುತ್ತದೆ ಆದರೆ ಇಬ್ಬರು ಪೋಷಕರಿದ್ದ ಸಂದರ್ಭದಲ್ಲಿ ಈ ರೀತಿ ಆಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ರಾಯಲ್ ಸೊಸೈಟಿ ಜರ್ನಲ್ ಬಯಾಲಜಿ ಲೆಟರ್ಸ್‌ನಲ್ಲಿ ಸಂಶೋಧಕರ ತಂಡ ಬರೆದಿರುವಂತೆ, ಬಂಧನದಲ್ಲಿರುವ ಸರೀಸೃಪಗಳು ಗಂಡಿಲ್ಲದೇ ಮೊಟ್ಟೆಗಳನ್ನು ಇಡುವುದು ಅಸಾಮಾನ್ಯವೇನಲ್ಲ, ಅವುಗಳಿಗೆ ಧೀರ್ಘಕಾಲ ಸಂಗಾತಿಯ ಸಂಪರ್ಕವನ್ನೇ ನೀಡದಿದ್ದರೆ ಇವುಗಳು ಸಾಮಾನ್ಯವಾಗಿ ಗಂಡನ್ನು ತಿರಸ್ಕರಿಸುತ್ತವೆಯಂತೆ. ಆದ್ದರಿಂದ ಗಂಡಿನ ಸಂಪರ್ಕವಿಲ್ಲದೇ ಸೃಷ್ಟಿಯಾದ ಮೊಟ್ಟೆಗಳನ್ನು ಸಂಭಾವ್ಯ ಕಾರ್ಯಸಾಧ್ಯತೆಗಾಗಿ ಮೌಲ್ಯಮಾಪನ ಮಾಡಬೇಕು ಎಂದು ಈ ಸಂಶೋಧನೆಗಳು ಸೂಚಿಸಿವೆ. ಅಲ್ಲದೇ ಗಮನಕ್ಕೆ ಬಾರದೇ ಹೋದ ಇಂತಹ ಇನ್ನೂ ಹಲವು ಪ್ರಕರಣಗಳು ಸಂಭವಿಸಿರಬಹುದು ಎಂದು ಈ ಸಂಶೋಧರಕರ ತಂಡ ಹೇಳಿದೆ.