ನ್ಯೂಸ್

ಯೂಟ್ಯೂಬ್​ನಲ್ಲೂ ದಾಖಲೆ ಬರೆದ ಲೆಜೆಂಡರಿ ಫುಟ್ಬಾಲ್ ಆಟಗಾರ! 90 ನಿಮಿಷದಲ್ಲಿ 1 ಮಿಲಿಯನ್ ಚಂದಾದಾರರು!

ಲಿಸ್ಬನ್: ಲೆಜೆಂಡರಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಬುಧವಾರ(ಆಗಸ್ಟ್ 21)ರಂದು ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಅವರು ಕೇವಲ 90 ನಿಮಿಷಗಳಲ್ಲಿ 1ಮಿಲಿಯನ್ (10 ಲಕ್ಷ) ಚಂದಾದಾರರನ್ನು ಸಾಧಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.

ಪೋರ್ಚುಗಲ್ ನ ಈ ಸ್ಟಾರ್ ಫುಟ್ಬಾಲ್ ಆಟಗಾರ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳಿಗೆ ಲಭ್ಯರಾದರು. ಇದರೊಂದಿಗೆ ಅವರು ತಮ್ಮ ಹೆಸರಿಗೆ ದಾಖಲೆಯನ್ನು ಸೇರಿಸಿಕೊಂಡರು. ಅವರ ಯೂ ಟ್ಯೂಬ್​ ಚಾನೆಲ್​ ಬಿಡುಗಡೆಯಾದ ಅರ್ಧ ದಿನದೊಳಗೆ ಒಂದು ಕೋಟಿ (13 ಮಿಲಿಯನ್) ಚಂದಾದಾರರನ್ನು ದಾಟಿದೆ. ಇದರಲ್ಲಿ 19 ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.

ರೊನಾಲ್ಡೊ ಅವರ 'ಎಕ್ಸ್' ಪ್ಲಾಟ್‌ಫಾರ್ಮ್ ಖಾತೆಯು 112.5 ಮಿಲಿಯನ್ (11 ಕೋಟಿಗೂ ಹೆಚ್ಚು), ಫೇಸ್‌ಬುಕ್ 170 ಮಿಲಿಯನ್ (17 ಕೋಟಿ), ಇನ್‌ಸ್ಟಾಗ್ರಾಮ್ 636 ಮಿಲಿಯನ್ (63.6 ಕೋಟಿ) ಅನುಯಾಯಿಗಳನ್ನು ಹೊಂದಿದೆ. ಈಗ ಅವರು ಯೂಟ್ಯೂಬ್‌ನಲ್ಲಿಯೂ ದಾಖಲೆ ಸಾಧಿಸುತ್ತಿದ್ದಾರೆ. ತನ್ನ ಹೊಸ ಯೂಟ್ಯೂಬ್ ಚಾನೆಲ್ ಬಿಡುಗಡೆಗೆ ಪ್ರತಿಕ್ರಿಯಿಸಿದ ರೊನಾಲ್ಡೊ, "ಕಾಯುವುದು ಮುಗಿದಿದೆ. ಇಲ್ಲಿ ನನ್ನ ಯೂಟ್ಯೂಬ್ ಚಾನೆಲ್ ಇದೆ. ಎಲ್ಲರೂ ಸಬ್‌ಸ್ಕ್ರೈಬ್ ಮಾಡಿ. ಹೊಸ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿ" ಎಂದು ಶೀರ್ಷಿಕೆ ನೀಡಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ 39ವರ್ಷದ ರೊನಾಲ್ಡೊ ಪ್ರಸ್ತುತ ಸೌದಿ ಪ್ರೊ ಲೀಗ್‌ನಲ್ಲಿ ಅಲ್ ನಾಸ್ರ್ ಪರ ಆಡುತ್ತಿದ್ದಾರೆ.

ttps://www.vijayavani.net/husband-struggling-with-death-court-permission-to-preserve-sperm