ಹಾವೇರಿ: ಪಿಜಿಯಲ್ಲಿ ಉಳಿದುಕೊಂಡಿರುವ ಯುವತಿ ಹಿಂದೆ ಬಿದ್ದ ಪಾಗಲ್ ಪ್ರೇಮಿಯೊಬ್ಬ, ಆಕೆಯ ಪಿಜಿಗೆ ತೆರಳಿ ಪ್ರೀತ್ಸೆ ಪ್ರೀತ್ಸೆ ಅಂತಾ ಕೈಮುಗಿದು ಗೋಗರೆಯುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರದ ಲೇಡಿಸ್ ಪಿಜಿಗೆ ಪ್ರವೇಶಿಸಿದ ಈತ, ಯುವತಿಗೆ ತನ್ನನ್ನು ಪ್ರೀತಿಸುವಂತೆ ಬೇಡಿಕೊಂಡಿದ್ದಾನೆ. ಇಷ್ಟವಿಲ್ಲ ಎಂದರೂ ಪದೇ ಪದೇ ಗೋಗರೆಯುವ ಪಾಗಲ್ ಪ್ರೇಮಿ ಪ್ರಮೋದ, ಹಾಡಹಗಲೇ ಪಿಜಿಯೊಳಗೆ ನುಗ್ಗಿ, ಯುವತಿಗೆ ಪ್ರೀತ್ಸೆ, ಪ್ರೀತ್ಸೆ ಎಂದು ಹಿಂಸೆ ಕೊಟ್ಟಿದ್ದಾನೆ.
ಈತನ ಕಾಟದಿಂದ ಬೇಸತ್ತ ಪಿಜಿ ಯುವತಿಯರು, ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಮೋದ್ ಎಂಬಾತ ಯುವತಿ ನಿರಾಕರಿಸಿದರೂ ಬೆನ್ನು ಬಿದ್ದು ಪ್ರೀತ್ಸೆ ಅಂತ ಕಾಟ ಕೊಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಯುವಕನ ಕಾಟಕ್ಕೆ ಯುವತಿಯರು ಹಾವೇರಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.