ನ್ಯೂಸ್

ಗೋಹತ್ಯೆ ಮಾಡುವವರನ್ನು ಸರ್ಕಲ್​​ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕು; ಸಚಿವ ಮಂಕಾಳು ವೈದ್ಯ ಹೇಳಿಕೆಗೆ DR G Parameshwar ಹೇಳಿದ್ದಿಷ್ಟು

ಬೆಂಗಳೂರು: ನಾವು ಪ್ರೀತಿಯಿಂದ ಪೂಜೆ ಮಾಡುವ ಗೋವುಗಳನ್ನು ಕಳ್ಳತನ, ಹತ್ಯೆ ಮಾಡುವವರನ್ನು ಸರ್ಕಲ್​ನಲ್ಲಿ ನಿಲ್ಲಿಸಿ ಸೃಆ್ವಜನಿಕವಾಗಿ ಗುಂಡು ಹಾರಿಬೇಕು ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಇದೀಗ ಇವರ ಹೇಳಿಕೆ ವಿವಾದದ ಸ್ವರೂಪ ಪಡೆದಿದ್ದು, ಗೃಹಸಚಿವ ಪರಮೇಶ್ವರ್​ (DR G Parameshwar) ಪ್ರತಿಕ್ರಿಯಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಸು ಕಳ್ಳತನ ಹಲವು ವರ್ಷಗಳಿಂದ ನಡೆದುಬಂದಿದೆ. ಇಂತಹ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಈಗಾಗಲೇ ಹಲವು ಪ್ರಕರಣದಲ್ಲಿ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ. ಇನ್ನೂ ಮೇಲೆಯೂ ಇಂತಹ ಘಟನೆಗಳು ಮರುಕಳಿಸಿದರೇ ನಾವು ಸಹಿಸಲು ಸಾಧ್ಯವಿಲ್ಲ.

ಹಸುವಿನ ಹಾಲನ್ನು ಕುಡಿದು ನಾವು ಬದುಕುತ್ತೇವೆ.ಆದರೆ ಇಂದು ಗೋವು ಕಡಿಯುವ ದುಷ್ಕೃತ್ಯ ನಡೆದಿದೆ.ಪೊಲೀಸರಿಗೆ ಈಗಾಗಲೇ ನಾನು ಹೇಳಿದ್ದೇನೆ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದು ಇಷ್ಟಾಗ್ಯೂ ಕ್ರೌರ್ಯ ಮುಂದುವರೆದಿದೆ. ಇದು ಮರುಕಳಿಸಿದರೆ ನಾನು ಹೀಗೆ ಹೇಳುವುದು ತಪ್ಪಾಗಬಹುದು ಆದರೆ ಆರೋಪಿಗಳನ್ನು ಸರ್ಕಲ್​​ನಲ್ಲಿ ನಿಲ್ಲಿಸಿ ಗುಂಡುಹೊಡೆಯಬೇಕು.ಇನ್ಮೇಲೆ ಇಂತಹ ಕೃತ್ಯ ನಡೆದರೆ ಸರ್ಕಲ್​ನಲ್ಲಿ ನಿಲ್ಲಿಸಿ ಗುಂಡುಹೊಡೆಬೇಕು ಎಂದು ಹೇಳಿದ್ದಾರೆ.

ಗೃಹಸಚಿವರು ಹೇಳಿದ್ದಿಷ್ಟು? 

ಇನ್ನೂ ಸಚಿವ ಮಂಕಾಳು ವೈದ್ಯ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಗೃಹಸಚಿವ ಪರಮೇಶ್ವರ್ (DR G Parameshwar)​, ಅವರು ವೈಯಕ್ತಿಕವಾಗಿ ಹೇಳಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್​ ಪ್ರತಿಕ್ರಿಯಿಸಿದ್ದಾರೆ. ಇದೀಗ ಸಚಿವ ಮಂಕಾಳು ವೈದ್ಯ ಹೇಳಿಕೆ ವಿವಾದದ ಸ್ವರೂಪ ಪಡೆದಿದ್ದು, ಯಾವ ಹಂತ ತಲುಪಲಿದೆ ಎಂದು ಕಾದುನೋಡಬೇಕಿದೆ.