ನ್ಯೂಸ್

ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕರೊನಾ ಪಾಸಿಟಿವ್​

ಬೆಂಗಳೂರು: ಸ್ಯಾಂಡಲ್​ವುಡ್​ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೂ ಕರೊನಾ ಪಾಸಿಟಿವ್​ ದೃಢಪಟ್ಟಿದೆ.

ಕರೊನಾ ಪರೀಕ್ಷೆಗೆ ಒಳಪಟ್ಟಿದ್ದ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಇಬ್ಬರಿಗೂ ಸೋಂಕು ಇರುವುದು ವರದಿಯಲ್ಲಿ ಗೊತ್ತಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಸೋಂಕಿನ ಗುಣಲಕ್ಷಣ ಕಂಡುಬಂದಿದೆ.

ಸೋಂಕು ತಗುಲಿರುವ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಧ್ರುವ ಸರ್ಜಾ, 'ನನ್ನ ಹೆಂಡತಿ ಮತ್ತು ನಾನು ಕೋವಿಡ್​19 ಪರೀಕ್ಷೆ ಮಾಡಿಸಿಕೊಂಡಿದ್ದೇವೆ. ವರದಿ ಪಾಸಿಟಿವ್​ ಬಂದಿದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆ ದಾಖಲಾಗಿದ್ದೇವೆ. ಶೀಘ್ರವೇ ಗುಣಮುಖರಾಗಿ ಬರುವ ವಿಶ್ವಾಸವಿದೆ' ಎಂದು ಹೇಳಿಕೊಂಡಿದ್ದಾರೆ.

'ನಮ್ಮ ಸಂಪರ್ಕಕ್ಕೆ ಬಂದವರೆಲ್ಲರೂ ದಯವಿಟ್ಟು ಕೋವಿಡ್​ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು' ಎಂದು ಅವರು ಕೋರಿದ್ದಾರೆ.

ಧ್ರುವ ಸರ್ಜಾ ಅವರ ಅಣ್ಣ ಚಿರಂಜೀವಿ ಸರ್ಜಾ ಇತ್ತೀಚೆಗೆ ಮೃತಪಟ್ಟಿದ್ದರು. ಈ ವೇಳೆ ಎಲ್ಲ ಕಾರ್ಯವನ್ನೂ ಸ್ವತಃ ಧ್ರುವ ಸರ್ಜಾ ಅವರೇ ಮುಂದೆ ನಿಂತು ಮಾಡಿದ್ದರು. ಇವರ ಕುಟುಂಬಕ್ಕೆ ಸಾಂತ್ವನ ಹೇಳಲೆಂದು ಹಲವು ಗಣ್ಯರು ಮನೆಗೂ ಭೇಟಿ ನೀಡಿದ್ದನ್ನು ಇದೇ ವೇಳೆ ಸ್ಮರಿಸಬಹದು.