ನ್ಯೂಸ್

ಸಂಕ್ರಾಂತಿಯೊಳಗೇ ಸಿಗಲಿದೆ ಕರೊನಾ ಲಸಿಕೆ! ಲಸಿಕೆ ವಿತರಣೆಗೆ ಮುಹೂರ್ತವಿಟ್ಟ ಕೇಂದ್ರ ಸರ್ಕಾರ

ನವದೆಹಲಿ: ಕೊವ್ಯಾಕ್ಸಿನ್​ ಮತ್ತು ಕೋವಿಶೀಲ್ಡ್​ ಲಸಿಕೆಗಳನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಡಿಸಿಜಿಐ ಅನುಮತಿ ನೀಡಿದ್ದು, ಇನ್ನು 10 ದಿನಗಳೊಳಗೆ ಲಸಿಕೆ ವಿತರಣೆ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರದಂದು ತಿಳಿಸಿದೆ.

ಸಂಕ್ರಾಂತಿ ಹಬ್ಬಕ್ಕಿಂತ ಮೊದಲು ಅಂದರೆ ಜನವರಿ 13ರಿಂದಲೇ ಲಸಿಕೆ ವಿತರಣೆ ಮಾಡುವ ಸಾಧ್ಯತೆಯಿದೆ. ಕರೊನಾ ರೂಪಾಂತರಿ ಸೊಂಕಿನ ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿರುವ ಬೆನ್ನಲ್ಲೆಯೇ ಸರ್ಕಾರ ಈ ಪ್ರಕಟಣೆ ಹೊರಡಿಸಿದೆ. ಇಲ್ಲಿಯವರೆಗೆ ದೇಶದಲ್ಲಿ 58 ಜನರಲ್ಲಿ ಕರೊನಾ ರೂಪಾಂತರಿ ಕಾಣಿಸಿಕೊಂಡಿದೆ.

ಆಕ್ಸ್​ಫರ್ಡ್​ನ ಕೋವಿಶೀಲ್ಡ್​ ಮತ್ತು ಭಾರತ್​ ಬಯೋಟೆಕ್​ ಸಂಸ್ಥೆಯ ಕೊವ್ಯಾಕ್ಸಿನ್​ ಲಸಿಕೆಯನ್ನು ತುರ್ತು ಬಳಕೆ ಮಾಡಲಾಗುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)