ನವದೆಹಲಿ: ಕೋವಿಡ್ 19 ಕೇಸ್ಗಳ ಪ್ರಮಾಣ ದಿನೇದಿನದೆ ಹೆಚ್ಚಿತ್ತಿರುವ ಕಾರಣ ಭಾರತ ಜಾಗತಿಕ ಮಟ್ಟದಲ್ಲೂ ಟಾಪ್ 10 ಪಟ್ಟಿಯಲ್ಲಿ ಮೇಲೇರುತ್ತಿದೆ. ನಿನ್ನೆ 8 ಸ್ಥಾನದಲ್ಲಿದ್ದ ಭಾರತ ಇಂದು ಏಳನೇ ಸ್ಥಾನಕ್ಕೆ ಏರಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕರೊನಾ ವೈರಸ್ ಟ್ರ್ಯಾಕರ್ನ ಪ್ರಕಾರ ಭಾರತದಲ್ಲಿ 1,82,143 ಕೋವಿಡ್ ಪ್ರಕರಣ ದೃಢಪಟ್ಟಿದೆ. ಭಾನುವಾರ ರಾತ್ರಿ 10.30ರ ಡೇಟಾ ಪ್ರಕಾರ ಜಾಗತಿಕವಾಗಿ ಒಟ್ಟು 59,34,936 ಕೋವಿಡ್ ಪ್ರಕರಣ ಪತ್ತೆಯಾಗಿದೆ.
ಭಾರತದಲ್ಲಿ ಇದುವರೆಗಿನ ಗರಿಷ್ಠ ಏಕದಿನ ಏರಿಕೆ ಸಂಭವಿಸಿದ್ದು ಭಾನುವಾರ 8,380 ಹೊಸ ಕೇಸ್ಗಳು 24 ಗಂಟೆ ಅವಧಿಯಲ್ಲಿ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತ ಸಂಖ್ಯೆ 1,82,143ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 5,164 ಆಗಿದೆ. 89,995 ಸಕ್ರಿಯ ಕೇಸ್ಗಳಿದ್ದು, 86,983 ಕೇಸ್ಗಳಲ್ಲಿ ರೋಗಿಗಳು ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ. ಒಬ್ಬ ರೋಗಿ ಮಾತ್ರ ಹೊರದೇಶದ ವಲಸಿಗ. ಇದರೊಂದಿಗೆ ರಿಕವರಿ ರೇಟ್ ಶೇಕಡ 47.76 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಡೇಟಾ ಹೇಳುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಕರೊನಾ ಟ್ರ್ಯಾಕರ್ ಪ್ರಕಾರ ಭಾರತ ಅತಿಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದೆ. ಅಮೆರಿಕ, ಬ್ರೆಜಿಲ್, ರಷ್ಯಾ, ಬ್ರಿಟನ್, ಸ್ಪೇನ್, ಇಟಲಿಗಳು ಆರಂಭದ ಸ್ಥಾನಗಳಲ್ಲಿವೆ. ಅಮೆರಿಕ ಗರಿಷ್ಠ ಸಂಕಷ್ಟಕ್ಕೆ ಒಳಗಾಗಿದ್ದು 17,16,078 ಕೇಸ್ಗಳು ಪತ್ತೆಯಾಗಿದೆ. ಜರ್ಮನಿಯಲ್ಲಿ 1,81,482 ಕೇಸ್ಗಳು, ಟರ್ಕಿಯಲ್ಲಿ 1,63,103 ಕೇಸ್ಗಳು, ಇರಾನ್ನಲ್ಲಿ 1,48,950 ಕೇಸ್ಗಳು ಪತ್ತೆಯಾಗಿವೆ. (ಏಜೆನ್ಸೀಸ್)