ನ್ಯೂಸ್

ನಟನ ವಿರುದ್ಧ ಅರೆಸ್ಟ್​ ವಾರಂಟ್​ ಜಾರಿ ಮಾಡಿದ ಕೋರ್ಟ್​: ಬಂಧನ ಭೀತಿಯಲ್ಲಿ ಸೋನುಸೂದ್: ಏನಿದು ಪ್ರಕರಣ? | Sonu Sood

Sonu Sood:ಬಾಲಿವುಡ್​ ನಟ ಸೋನುಸುದ್​ ವಿರುದ್ಧ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಲೂಧಿಯಾನ ಕೋರ್ಟ್​ ಬಂಧನದ ವಾರಂಟ್​ ಹೊರಡಿಸಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಮೋಹಿತ್ ಶುಕ್ಲಾ ಎಂಬ ವ್ಯಕ್ತಿಗೆ ನಕಲಿ ಕ್ರಿಪ್ಟೋ (ರಿಜಿಕಾ) ಕರೆನ್ಸಿ ಹೂಡಿಕೆ ಮಾಡುವಂತೆ ನಟ ಸೋನುಸೂದ್​ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಪ್ರಕರಣ ದಾಖಲಿಸಿದ್ದಾರೆ. ಸೋನು ಸೂದ್ ಅವರನ್ನು (ಸಾಕ್ಷ್ಯನುಡಿಯಲು) ನ್ಯಾಯಾಲಯಕ್ಕೆ ಕರೆಯಲಾಯಿತು. ಆದರೆ, ಅವರು ನ್ಯಾಯಾಲಯಕ್ಕೆ ಹಾಜರಾಗದಿದ್ದ ಹಿನ್ನೆಲೆ, ಬಂಧನದ ವಾರಂಟ್​ ಹೊರಡಿಸಲಾಗಿದೆ.

ಇಲ್ಲಿಯವರೆಗೆ ನಟನಾಗಲಿ ಅಥವಾ ಅವರ ತಂಡವಾಗಲಿ ಪ್ರಕರಣ ಅಥವಾ ಬಂಧನ ವಾರಂಟ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.(ಏಜೆನ್ಸೀಸ್​)