Abortion: 15 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾದ ಹಿನ್ನಲೆ, ಇದು ಆಕೆಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಸಲ್ಲಿಸಿದ ವರದಿಯನ್ನು ವಿಚಾರಣೆ ನಡೆಸಿ ಬಾಲಕಿಗೆ ವೈದ್ಯಕೀಯ ಗರ್ಭಾಧಾರಣೆ ಮುಕ್ತಾಯಕ್ಕೆ (MTP) ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.
ಬಾಲಕಿಯ ಪರವಾಗಿ ಹಾಜರಾದ ವಕೀಲೆ ಮನಿಷಾ ಜಗ್ತಾಪ್, 10 ನೇ ತರಗತಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದು, ತನ್ನ ಅಧ್ಯಯನವನ್ನು ಮುಂದುವರೆಸಲು ಉದ್ದೇಶಿಸಿದ್ದಾಳೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ: ಅಂಗೈ ಸುಟ್ಟು, ಹಣೆಯ ಮೇಲೆ ಬಿಸಿ ನಾಣ್ಯ ಅಂಟಿಸಿ, ಕಬ್ಬಿಣದ ಸರಪಳಿಗಳಿಂದ ಹೊಡೆತ! ದೆವ್ವ ಬಿಡಿಸುವ ನೆಪದಲ್ಲಿ ಚಿತ್ರ ಹಿಂಸೆ…Devil
ಮುಂಬೈನಲ್ಲಿ ವಾಸಿಸುವ ಬಾಲಕಿಯು ಆರಂಭದಲ್ಲಿ ತಾನು ಗರ್ಭಿಣಿಯಾಗಿರುವುದನ್ನು ತನ್ನ ತಂದೆ- ತಾಯಿಗೆ ಹೇಳಿರಲಿಲ್ಲ. ಆಕೆಯ ಆರೋಗ್ಯದಲ್ಲಿ ನಿಯಮಿತ ಮುಟ್ಟಿನ ಚಕ್ರದ ಬಗ್ಗೆ ಕಳವಳಗೊಂಡ ಆಕೆಯ ತಾಯಿಯು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಬಾಲಕಿ ಗರ್ಭಿಣಿ ಎಂದು ತಿಳಿದುಬಂದಿದೆ.
ಘಟನೆ ನಡೆದ ನಂತರ ತನ್ನ ಸಹೋದರನ ಸ್ನೇಹಿತನೊಂದಿಗೆ ನಾನು ದೈಹಿಕ ಸಂಬಂಧವನ್ನು ಹೊಂದಿದ್ದೆ. ಹಾಗಾಗಿ ನಾನು ಗರ್ಭೀಣಿಯಾಗಿದ್ದೇನೆ ಎಂದು ತಾಯಿಗೆ ಹೇಳಿದ್ದಾಳೆ. ಈ ವೇಳೆಗೆ ಬಾಲಕಿಯು ಸರಿಸುಮಾರು 6 ತಿಂಗಳ ಗರ್ಭಿಣಿಯಾಗಿದ್ದು, ಈ ಗರ್ಭದಾರಣೆಯನ್ನು ಅಂತ್ಯಗೊಳಿಸಲು ಹೈಕೋರ್ಟ್ನ ಅನುಮತಿ ಅಗತ್ಯವಿತ್ತು.
ಈ ವಿಚಾರಣೆ ನಡೆಸಿದ ಕೋರ್ಟ್ ಬಾಲಕಿಯನ್ನು ಪರೀಕ್ಷೆ ಮಾಡಲು ವೈದ್ಯಕೀಯ ತಂಡವನ್ನು ರಚಿಸಲಾಯಿತು. ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ಸಂದೇಶ್ ಪಾಟೀಲ್ ಅವರನ್ನೊಳಗೊಂಡ ಪೀಠವು, ಆಕೆಯ ಸಣ್ಣ ದೇಹದ ಗಾತ್ರ ಮತ್ತು ಮಾನಸಿಕ ಸ್ಥಿತಿಯಿಂದಾಗಿ, ಮೂರನೇ ತ್ರೈಮಾಸಿಕದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಮಾನಸಿಕ ಆರೋಗ್ಯ ಪರಿಣಾಮಗಳನ್ನು ತಡೆಗಟ್ಟುವ ಸಲುವಾಗಿ MTP ಶಿಫಾರಸ್ಸು ಮಾಡಿದ್ದಾರೆ.
ಆರೋಪಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾದ ಹಿನ್ನಲೆ, ನ್ಯಾಯಾಲಯವು ಜನನದ ನಂತರ ಭ್ರೂಣದ ಡಿಎನ್ಎ ಮಾದರಿಯನ್ನು ಸಂಗ್ರಹಿಸಿ, ಕ್ರಿಮಿನಲ್ ವಿಚಾರಣೆಗೆ ಸಹಾಯ ಮಾಡಲು ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಸೂಚನೆ ನೀಡಿದೆ. ಇನ್ನು ಮನೋಧೈರ್ಯ ಯೋಜನೆ ಅಡಿಯಲ್ಲಿ ಬಾಲಕಿಗೆ ಬೇಗ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ. (ಏಜೆನ್ಸೀಸ್)