ನ್ಯೂಸ್

ವಯಸ್ಸಾಗಿದೆ ಯಾರಾದರೂ ಬೇಕೇ ಬೇಕೆಂದು 49ರ ಮಹಿಳೆಗೆ ತಾಳಿ ಕಟ್ಟಿದ 103 ವರ್ಷದ ಅಜ್ಜ

ನವದೆಹಲಿ: ಅನೇಕ ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ಮದುವೆಗೆ ತರಾತುರಿ ನಡೆಸುತ್ತಿವೆ. ಹೀಗಾಗಿ ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು ಕಾನೂನಾತ್ಮಕವಾಗಿ ಕನಿಷ್ಠ 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಆದರೆ ಈ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿರುವ ಸುದ್ದಿ ಕೊಂಚ ವಿಭಿನ್ನವಾಗಿದೆ. 103 ವರ್ಷದ ವ್ಯಕ್ತಿ 49 ವರ್ಷದ ಮಹಿಳೆಯನ್ನು ಮದುವೆಯಾಗಿರುವ ಘಟನೆ ಭೋಪಾಲ್​ನಲ್ಲಿ ನಡೆದಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಭೋಪಾಲ್‌ನ ಇಟ್ವಾರದ ಸ್ವಾತಂತ್ರ್ಯ ಹೋರಾಟಗಾರ ಹಬೀಬ್ ನಜರ್, ಕಳೆದ ವರ್ಷ 49 ವರ್ಷದ ಫಿರೋಜ್ ಜಹಾನ್ ಅವರೊಂದಿಗೆ ವಿವಾಹವಾಗಿದ್ದಾರೆ. ಸಾಕಷ್ಟು ಮಂದಿ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.ವಧುವಿನೊಂದಿಗೆ ಆಟೋ ರಿಕ್ಷಾದಲ್ಲಿ ಬರುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಾಜರ್ ಮುಖದಲ್ಲಿ ನಗು, ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡು ಬರುತ್ತಿದೆ.

ನಾಜರ್ ಅವರು ಮೂರನೇ ಮದುವೆಯಾಗಿದ್ದಾರೆ, ಅವರ ಎರಡನೇ ಹೆಂಡತಿಯ ಮರಣದ ನಂತರ, ನಾಜರ್ ಅವರು ತುಂಬಾ ಒಂಟಿತನವನ್ನು ಅನುಭವಿಸಿದರು. ಇದೇ ಕಾರಣಕ್ಕೆ ಮತ್ತೊಂದು ಮದುವೆಯಾಗಿದ್ದಾರೆ. ಅವರ ಪತ್ನಿಯಾಗಿ ಬಂದಿರುವ ಫಿರೋಜ್ ಜಹಾನ್​ ಕೂಡ ತನ್ನ ಪತಿಯನ್ನು ಕಳೆದುಕೊಂಡಿದ್ದರು. ವಯಸ್ಸಾದ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿಕೊಳ್ಳಲು ಯಾರಾದರೂ ಬೇಕೇ ಬೇಕು ಎಂಬುದನ್ನು ಅರಿತು ಅವರನ್ನು ಮದುವೆಯಾಗಿದ್ದಾರೆ. ಇದು ಪ್ರೀತಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.