Private Videos: ತಮ್ಮ ಇಬ್ಬರ ಹೆಣ್ಣು ಮಕ್ಕಳ ಶಾಲೆಯ ಶುಲ್ಕ ಪಾವತಿ ಮಾಡಲು ಮೊಬೈಲ್ ಆಪ್ಲಿಕೇಶನ್ನಲ್ಲಿ ತಮ್ಮದೇ ಆದ ಖಾಸಗಿ ವಿಡಿಯೋಗಳನ್ನು ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ದಂಪತಿಗಳಿಬ್ಬರನ್ನು ಇದೀಗ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಹೌದು, ಹೈದರಾಬಾದ್‌ನ ಅಂಬರ್‌ಪೇಟೆ ಪ್ರದೇಶದಲ್ಲಿ ವಾಸಿಸುವ ಸಾಮಾನ್ಯ ಕುಟುಂಬದ ದಂಪತಿಗಳಿಬ್ಬರು ತಮ್ಮ ಖಾಸಗಿ ಜೀವನದ ಅಶ್ಲೀಲ ವೀಡಿಯೊಗಳನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲು ಪ್ರಾರಂಭಿಸಿದರು. ಈ ವೀಡಿಯೊಗಳನ್ನು ನೋಡುವ ಜನರು ಈ ವಿಷಯಕ್ಕೆ ಹಣ ಪಾವತಿಸುತ್ತಿದ್ದರು. ಅವರು ಪ್ರತಿ ಲೈವ್ ವೀಡಿಯೊಗೆ 2 ಸಾವಿರ ರೂ. ಪಡೆಯುತ್ತಿದ್ದರು ಮತ್ತು ರೆಕಾರ್ಡ್ ಮಾಡಿದ ಕ್ಲಿಪ್ ಅನ್ನು 500 ರೂ. ಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗಳಿಬ್ಬರು, ತಮ್ಮದೇ ಸ್ವಂತ ಮನೆಯಲ್ಲಿ ಈ ರಹಸ್ಯ ಕೆಲಸ ಆರಂಭಿಸಿದರು. ಕೆಲ ದಿನಗಳ ಬಳಿಕ ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಆಳವಡಿಸಲಾಗಿತ್ತು. ಎಷ್ಟೇ ರಹಸ್ಯವಾಗಿ ಕೆಲಸ ಮಾಡಿದರು ಡಿಜಿಟಲ್ ಪ್ರಪಂಚದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೌದು, ಸಾಮಾಜಿಕ ಜಾಲತಾಣದಲ್ಲಿನ ಆಕ್ರಮ ಚಟುವಟಿಕೆ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಕೊನೆಗೆ ಪತ್ತೆ ಮಾಡಿ ಈ ದಂಪತಿಗಳನ್ನು ಬಂಧಿಸಿದ್ದಾರೆ.
ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬಳು ಬಿ.ಟೆಕ್ ಎರಡನೇ ವರ್ಷದಲ್ಲಿ ಓದುತ್ತಿದ್ದಾಳೆ ಮತ್ತು ಇನ್ನೊಬ್ಬಳು ಪಿಯುಸಿ 470 ಅಂಕಗಳಲ್ಲಿ 468 ಅಂಕಗಳನ್ನು ಗಳಿಸಿದ್ದಾಳೆ. ಇಬ್ಬರೂ ಹೆಣ್ಣುಮಕ್ಕಳು ತುಂಬಾ ಬುದ್ಧಿವಂತರು. ಆದರೆ, ಮನೆಯ ಸ್ಥಿತಿ ತುಂಬಾ ಕೆಟ್ಟದಾಗಿದ್ದು, ಕಾಲೇಜು ಶುಲ್ಕವನ್ನು ಪಾವತಿಸುವುದು ಅಸಾಧ್ಯವಾಗಿತ್ತು. ಇದಲ್ಲದೆ, ಗಂಡನ ಆರೋಗ್ಯ ನಿರಂತರವಾಗಿ ಹದಗೆಡುತ್ತಿತ್ತು ಮತ್ತು ಚಿಕಿತ್ಸೆಗೆ ಹಣವಿರಲಿಲ್ಲ. ಮತ್ತು ಈ ಸಂದರ್ಭಗಳು ಈ ಪೋಷಕರನ್ನು ತಪ್ಪು ಮಾರ್ಗವನ್ನು ಆಯ್ಕೆ ಮಾಡುವಂತೆ ಮಾಡಿದ ಹಿನ್ನೆಲೆ ಇಂತ ಕೆಲಸ ಮಾಡಿದ್ದೇವೆ ಎಂದು ದಂಪತಿಗಳು ವಿಚಾರಣೆ ವೇಳೆ ಬಾಯ್ಬಿಟಿದ್ದಾರೆ.(ಏಜೆನ್ಸೀಸ್)