Couple Death: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ಸಮಯದಲ್ಲಿ ತೀವ್ರ ಅನಾರೋಗ್ಯದಿಂದ ಪತಿ ಸಾವಿಗೀಡಾದರೆ, ಗಂಡನ ಅಗಲಿಕೆಯನ್ನು ತಡೆಯಲಾರದ ಪತ್ನಿ ಕೂಡ ದುರಂತ ಅಂತ್ಯ ಕಂಡ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಧರ್ಮಪುರಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಯಾವೆಲ್ಲ ಕಾಯಿಲೆಗಳಿಗೆ ಸೀಬೆ ಹಣ್ಣು ರಾಮಬಾಣ? ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Guava
ಧರ್ಮಪುರಿ ಜಿಲ್ಲೆಯ ಕಡ್ತೂರು ಬಳಿಯ ತಾಳನಾಥಂ ಗ್ರಾಮದ ದೀಪಮಲೈ (26) ಅನಾರೋಗ್ಯದಿಂದ ಸಾವಿಗೀಡಾದರೆ, ಪುಟ್ಟಿರೆಟ್ಟಿಪಟ್ಟಿಯ ಗೀತಾ (21) ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವೃತ್ತಿಯಲ್ಲಿ ದೀಪಮಲೈ ಇಂಜಿನಿಯರ್ ಆಗಿದ್ದರೆ, ಗೀತಾ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಬೇರೆ ಬೇರೆ ಸಮುದಾಯಗಳಿಗೆ ಸೇರಿದ್ದ ಹಿನ್ನಲೆ ಅವರಿಬ್ಬರ ಪ್ರೀತಿ ಸಂಬಂಧಕ್ಕೆ ಭಾರೀ ವಿರೋಧವಿತ್ತು. ಶಾಲಾ ದಿನಗಳಿಂದಲೂ ಸ್ನೇಹಿತರಾಗಿದ್ದ ಜೋಡಿ, ಪ್ರೀತಿಸಿ ಪೋಷಕರ ವಿರೋಧದ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಪೋಷಕರ ವಿರೋಧದ ನಡುವೆಯೇ ಕಳೆದ ಒಂದು ವರ್ಷದ ಹಿಂದೆ ಮನೆ ಬಿಟ್ಟು ಹೊರಬಂದ ಈ ಜೋಡಿ, ಸರಳವಾಗಿ ವಿವಾಹವಾದರು. ಪ್ರೇಮ ವಿವಾಹವಾಗಿ ಕೆಲವೇ ತಿಂಗಳಲ್ಲಿ ದೀಪಮಲೈ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದೇ ಆದರೂ ಅವರ ಆರೋಗ್ಯ ಮಾತ್ರ ಸುಧಾರಣೆ ಕಾಣಲಿಲ್ಲ. ಇದು ಗೀತಾಳನ್ನು ಭಾರೀ ಆತಂಕಕ್ಕೆ ದೂಡಿತು. ತಾನು ಸಾಯುತ್ತೇನೆಂದು ಭಾವಿಸಿದ ದೀಪಮಲೈ, ಪತ್ನಿಗೆ ತನ್ನೊಂದಿಗೆ ಇರಬೇಡ, ಮೊದಲು ನೀನು ನಿನ್ನ ಹೆತ್ತವರ ಮನೆಗೆ ಹೋಗುವಂತೆ ಹೇಳಿದ್ದರು.
ಇದನ್ನೂ ಓದಿ: ನನ್ನ ಗಂಡನನ್ನು ಕೊಲ್ಲದಿದ್ರೆ ವಿಷ ಕುಡಿಯುತ್ತೇನೆ: ಪ್ರಿಯಕರನಿಗೆ ಒತ್ತಾಯ, ಕೊನೆಗೂ ಹಠ ಸಾಧಿಸಿದ ಕಿರಾತಕಿ! Belagavi Woman
ಅಂತೆಯೇ ಎರಡು ತಿಂಗಳ ಹಿಂದೆ ತನ್ನ ಹೆತ್ತವರ ಮನೆಗೆ ಬಂದ ಗೀತಾ, ಪತಿಯ ಆರೋಗ್ಯದ ಬಗ್ಗೆ ಕಾಳಚಿ ವಹಿಸುತ್ತಿದ್ದರು. ಈ ಮಧ್ಯೆ, ಆರೋಗ್ಯ ತೀವ್ರ ಹದಗೆಟ್ಟ ಹಿನ್ನಲೆ ದೀಪಮಲೈ ಜೂನ್ 29ರಂದು ಮೃತಪಟ್ಟರು. ಪತಿಯ ಮರಣದ ಸುದ್ದಿಯಿಂದ ಕಂಗಾಲಾದ ಗೀತಾ, ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ, "ನಾನು ನಿಮ್ಮನ್ನು ಬಿಟ್ಟಿರಲು ಸಾಧ್ಯವಿಲ್ಲ. ನಾನು ನಿನ್ನ ಬಳಿಗೆ ಬರುತ್ತಿದ್ದೇನೆ" ಎಂಬ ಪೋಸ್ಟ್ ಹಂಚಿಕೊಂಡ ಗೀತಾ, ಮನೆಯಲ್ಲಿದ್ದ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಡತ್ತೂರು ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗೀತಾ ಪೋಷಕರು ಮತ್ತು ಸ್ಥಳೀಯರು, ಆಕೆಯ ಪತಿ ದೀಪಮಲೈ ಸಮಾಧಿ ಪಕ್ಕದಲ್ಲೇ ಗೀತಾಳ ದೇಹವನ್ನು ಮಣ್ಣು ಮಾಡಿದ್ದಾರೆ,(ಏಜೆನ್ಸೀಸ್).