ನ್ಯೂಸ್

ಟಾಯ್ಲೆಟ್​ ಒಳಗೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದ ಜೋಡಿ: ವಿಮಾನ ಲ್ಯಾಂಡ್​ ಆದ ಬೆನ್ನಲ್ಲೇ ಕಾದಿತ್ತು ಶಾಕ್​

ಲಂಡನ್​: ಅನೇಕ ಜನರು ವಿಮಾನದಲ್ಲಿ ಪ್ರಯಾಣಿಸುವಾಗ ಇಯರ್‌ಫೋನ್‌ ಹಾಕಿಕೊಂಡು ಸಿನಿಮಾ ನೋಡುತ್ತಾ ಅಥವಾ ಹಾಡುಗಳನ್ನು ಕೇಳುತ್ತಾ ತಮ್ಮ ಸಮಯವನ್ನು ಕಳೆಯುತ್ತಾರೆ. ಇನ್ನು ಕೆಲವರು ನಿದ್ರೆಗೆ ಜಾರುತ್ತಾರೆ. ಇದಿಷ್ಟು ವಿಮಾನ ಪ್ರಯಾಣದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳು. ಆದರೆ, ಲಂಡನ್​ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

ಜೋಡಿಯೊಂದು ವಿಮಾನದ ಟಾಯ್ಲೆಟ್​ ಒಳಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಒಂದೇ ಟಾಯ್ಲೆಟ್​ ಒಳಗೆ ಹೋಗಿ ಸಾಕಷ್ಟು ಸಮಯದವರೆಗೂ ಹೊರಗೆ ಬರಲಿಲ್ಲ. ಟಾಯ್ಲೆಟ್​ ಬಾಗಿಲು ಹೊರಗಡೆಯಿಂದ ತೆರೆದಿತ್ತು. ಇದನ್ನು ಗಮನಿಸಿ ವಿಮಾನದ ಸಿಬ್ಬಂದಿ ಹೊರಗೆ ಬರುವಂತೆ ಕರೆದರು. ಆದರೆ, ಇಬ್ಬರು ಕೂಡ ಕರೆಗೆ ಸ್ಪಂದಿಸಲಿಲ್ಲ. ಬಳಿಕ ಟಾಯ್ಲೆಟ್​ ಬಾಗಿಲನ್ನು ಸಿಬ್ಬಂದಿ ಓಪನ್​ ಮಾಡಿದಾಗ ಒಳಗಿನ ದೃಶ್ಯವನ್ನು ನೋಡಿ ವಿಮಾನದ ಸಿಬ್ಬಂದಿ ಸೇರಿದಂತೆ ವಿಮಾನ ಪ್ರಯಾಣಿಕರು ಶಾಕ್​ ಆದರು.

ಟಾಯ್ಲೆಟ್​ ಒಳಗೆ ಜೋಡಿ ಸೆಕ್ಸ್​ನಲ್ಲಿ ಬಿಜಿಯಾಗಿದ್ದರು. ಬಾಗಿಲು ತೆರೆದಿರುವುದನ್ನು ನೋಡಿ ತಕ್ಷಣವೇ ಒಳಗಿದ್ದ ವ್ಯಕ್ತಿ ಬಾಗಿಲು ಹಾಕಿಕೊಂಡರು. ಆದರೂ ಇದೆಲ್ಲ ದೃಶ್ಯ ಪ್ರಯಾಣಿಕರೊಬ್ಬರ ಮೊಬೈಲ್​ ಫೋನ್​ನಲ್ಲಿ ರೆಕಾರ್ಡ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಜೋಡಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಅಂದಹಾಗೆ ಈ ಘಟನೆ ಇದೇ ಸೆ. 8 ರಂದು ನಡೆದಿದೆ. ಲಂಡನ್‌ನ ಲುಟನ್ ಸಿಟಿಯಿಂದ ಲಿಬಿಜಾ ದ್ವೀಪಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿರುವುದಾಗಿ ಈಸಿಜೆಟ್ ಕಂಪನಿ ಬಹಿರಂಗಪಡಿಸಿದೆ. ಎರಡೂವರೆ ಗಂಟೆಗಳ ಈ ಪ್ರಯಾಣದಲ್ಲಿ ದಂಪತಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಲಿಬಿಜಾ ದ್ವೀಪದಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ದಂಪತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆಯೇ? ಅಥವಾ ಎಚ್ಚರಿಸಿ ಬಿಟ್ಟಿದ್ದಾರಾ? ಎಂಬುದನ್ನು ವಿಮಾನಯಾನ ಸಂಸ್ಥೆ ವಿವರಗಳನ್ನು ಬಹಿರಂಗಪಡಿಸಿಲ್ಲ. (ಏಜೆನ್ಸೀಸ್​)