ನ್ಯೂಸ್

Kerala Bomb Hurled | ಕೇರಳದ ಬಿಜೆಪಿ ನಾಯಕನ ಮನೆ ಮೇಲೆ ಬಾಂಬ್​ ದಾಳಿ; ಇದು ಸಿಪಿಐ ಕೈವಾಡ ಎಂದ ಬಿಜೆಪಿ

Kerala Bomb Hurled: ಕೇರಳದ ಕಣ್ಣೂರು ಜಿಲ್ಲೆಯ ಸ್ಥಳೀಯ ಬಿಜೆಪಿ ಮುಖಂಡ ಕೆ ಬಿಜು ನಿವಾಸದ ಮೇಲೆ ಗುರುವಾರ (ಸೆ 2) ಬೆಳಗಿನ ಜಾವ ದೇಶೀಯ ಬಾಂಬ್ ಎಸೆಯಲಾಗಿದೆ ಎಂದು ವರದಿಯಾಗಿದೆ.

ಬೆಳಗಿನ ಜಾವ 2.30 ರ ವೇಳೆ ಈ ಘಟನೆ ಸಂಭವಿಸಿದ್ದು, ಬಿಜು ಮನೆಯ ಕಿಟಕಿ ಗಾಜುಗಳು ಮತ್ತು ಬಾಗಿಲುಗಳಿಗೆ ಹಾನಿಯಾಗಿದೆ, ಸಮೀಪದ ಕಣ್ಣಾಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ದುಷ್ಕರ್ಮಿಗಳು ಮೋಟಾರ್ ಬೈಕ್‌ನಲ್ಲಿ ಬಂದು ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ದೃಢಪಟ್ಟಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಈ ಘಟನೆಯ ಹಿಂದೆ ಸಿಪಿಐ(ಎಂ) ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೇ ಹೋಲುವ ಇನ್ನೊಂದು ಪ್ರಕರಣ, ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕೀಝ ಮುನ್ನೀರ್‌ಪಳ್ಳಂನಲ್ಲಿ ನಡೆದಿದ್ದು, ಡಿಎಂಕೆ ಕಾರ್ಯಕರ್ತರೊಬ್ಬರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ, ಈ ದಾಳಿಯ ಬಗ್ಗೆ ಪೊಲೀಸ್ ತನಿಖೆ ಮುಂದುವರೆದಿದೆ. 45 ವರ್ಷ ವಯಸ್ಸಿನ ಸೆಲ್ವಶಂಕರ್ ಡಿಎಂಕೆಯ ಪಳನಿ ದಕ್ಷಿಣ ಒಕ್ಕೂಟದ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮೇ 14 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವರ ಮನೆಯ ಪ್ರವೇಶದ್ವಾರದಲ್ಲಿ ದೊಡ್ಡ ಶಬ್ದ ಮತ್ತು ಹಠಾತ್ ಬೆಳಕಿನ ಸ್ಫೋಟದಿಂದ ಬೆಚ್ಚಿಬಿದ್ದರು, ತಕ್ಷಣವೇ ಎರಡನೇ ಸ್ಫೋಟ ಕೇಳಿಸಿತು ಹೊರಗೆ ಬಂದಾಗ ಮನೆ ಬಾಗಿಲಲ್ಲಿ ಬೆಂಕಿ ಜ್ವಾಲೆಗಳು ಕಂಡುಬಂದವು ಎಂದು ತಿಳಿದುಬಂದಿದೆ.

ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿ. ಬೆಂಕಿಯನ್ನು ನಂದಿಸಲು ತಕ್ಷಣ ಕಾರ್ಯಪ್ರವೃತ್ತರಾದರು, ಆವರಣದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ನಾಲ್ವರು ಮುಸುಕುಧಾರಿ ವ್ಯಕ್ತಿಗಳು ಸ್ಥಳಕ್ಕೆ ಬಂದು ಎರಡು ಪೆಟ್ರೋಲ್ ಬಾಂಬ್‌ಗಳನ್ನು ಎಸೆದು ಪರಾರಿಯಾಗಿರುವುದು ಪತ್ತೆಯಾಗಿದೆ.(ಏಜೆನ್ಸೀಸ್​​)