ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವದ ಘೋಷಣೆಯಾಗಿರೋ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಬೆಳಿಗ್ಗೆ 11 ಗಂಟೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಕೇಂದ್ರ, ರಾಜ್ಯ ಸಚಿವರು ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಈ ಮಹಾಂತ್ವಕಾಂಕ್ಷೆ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಈಗಾಗಲೇ ನಾಲ್ಕು ನಿಗಮಗಳು ಭರ್ಜರಿ ತಯಾರಿಯನ್ನು ನಡೆಸಿವೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ತೊಂದರೆ ಸಾಧ್ಯತೆ: ಕಾರ್ಯಕರ್ತರಿಗೆ ಸಹಾಯವಾಣಿ ನಂಬರ್ ಬಿಡುಗಡೆ ಮಾಡಿದ ಬಿಜೆಪಿ
ಈ ನಿಗಮಗಳ ಅಂದಾಜಿನ ಪ್ರಕಾರ ಉಚಿತ ಫಲಾನುಭವಿಗಳ ಸಂಖ್ಯೆ ತಿಂಗಳಿಗೆ ಒಂದು ಕೋಟಿ ದಾಟಲಿದೆ. ಈ ನಾಲ್ಕು ನಿಗಮಗಳ ಸಂಪೂರ್ಣ ಉಚಿತ ಪ್ರಯಾಣದ ಬಸ್‌ಗಳ ವಿವರ ಇಲ್ಲಿದೆ.
ಕೆಎಸ್ಆರ್ಟಿಸಿ
• ಕೆಎಸ್ಆರ್ಟಿಸಿ ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 7482
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ- 6239
ಬಿಎಂಟಿಸಿ
• ಬಿಎಂಟಿಸಿ ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 5547
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ- 5102
NWKRTC
• ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 4542
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ- 3986
KKRTC
• ನಿಗಮದಲ್ಲಿ ಚಲಾವಣೆಯಲ್ಲಿರುವ ಒಟ್ಟು ಬಸ್‌ಗಳ ಸಂಖ್ಯೆ- 4106
• ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಖ್ಯೆ-3376
ಇನ್ನು, ನಾಲ್ಕು ನಿಗಮಗಳಲ್ಲಿ ಮಹಿಳೆಯರು ಪ್ರಯಾಣಿಸಬಹುದಾದ ಒಟ್ಟು ಬಸ್‌ಗಳ ಸಂಖ್ಯೆ 18,703 ಆಗಿದ್ದು, ಬಿಎಂಟಿಸಿ ಹೊರತುಪಡಿಸಿ ಉಳಿದ ನಿಗಮಗಳ ಬಸ್‌ಗಳಲ್ಲಿ ಪುರುಷರಿಗೆ 50%ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಬಸ್ನಲ್ಲಿ ಪುರುಷರಿಗೆ ಮೀಸಲಾತಿ ಕೊಟ್ಟ ರಾಜ್ಯ ಎಂಬ ಹೆಗ್ಗಳಿಕೆಗೆ ಕರುನಾಡು ಪಾತ್ರವಾಗಲಿದೆ.
ಒಂದೊಮ್ಮೆ 50ರಷ್ಟು ಪುರುಷ ಪ್ರಯಾಣಿಕರು ಇಲ್ಲದಿದ್ದರೆ ಖಾಲಿ ಇರುವ ಸೀಟುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಪ್ರತಿನಿತ್ಯ 3,44,025 ಮಹಿಳಾ ಪ್ರಯಾಣಿಕರಂತೆ ಪ್ರತಿ ತಿಂಗಳು ಸುಮಾರು 1,02,00,750 ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ನಿರೀಕ್ಷೆಯಿದೆ.(ಏಜೆನ್ಸೀಸ್)