ಶೆನ್ಜೆನ್: ಲಂಚ ಪಡೆದ ಆರೋಪದ ಮೇಲೆ ಚೀನಾದ ಮಾಜಿ ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವ ಟ್ಯಾಂಗ್ ರೆಂಜಿಯಾನ್ ಅವರಿಗೆ ಜಿಲಿನ್ ಪ್ರಾಂತ್ಯದ ನ್ಯಾಯಾಲಯ ಇಂದು (ಸೆ.28) ಮರಣದಂಡನೆ ಶಿಕ್ಷೆ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊಡಿಸಿದೆ.
ಮಾಜಿ ಸಚಿವ ಟ್ಯಾಂಗ್ 2007 ರಿಂದ 2024 ರವರೆಗೆ ವಿವಿಧ ಹುದ್ದೆಗಳಲ್ಲಿ 268 ಮಿಲಿಯನ್ ಯುವಾನ್ ($37.6 ಮಿಲಿಯನ್) ಮೌಲ್ಯದ ನಗದು ಮತ್ತು ಆಸ್ತಿ ಸೇರಿದಂತೆ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇವರು ಸಚಿವರಾಗಿ ನೇಮಕಗೊಳ್ಳುವ ಮೊದಲು 2017ರಿಂದ 2020ರವರೆಗೆ ಚೀನಾದ ಗನ್ಸು ಪ್ರಾಂತ್ಯದ ಗವರ್ನರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಕೃಷಿ ಸಚಿವಾಲಯದ ಪ್ರಮುಖ ಆಡಳಿತ ಕಮ್ಯುನಿಸ್ಟ್ ಪಕ್ಷದ ಸದಸ್ಯರ ಗುಂಪಿನ ಮಾಜಿ ಕಾರ್ಯದರ್ಶಿಯೂ ಆಗಿರುವ ಮಾಜಿ ಸಚಿವರು, ಅವರ ಜೀವನಪರ್ಯಂತ ರಾಜಕೀಯ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಈಶಾನ್ಯ ಚೀನಾದ ಜಿಲಿನ್ ಪ್ರಾಂತ್ಯದ ಚಾಂಗ್‌ಚುನ್‌ನ ಮಧ್ಯಂತರ ಪೀಪಲ್ಸ್ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಟ್ಯಾಂಗ್ ಅವರ ಎಲ್ಲಾ ವೈಯಕ್ತಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಲಂಚದಿಂದ ಅವರು ಗಳಿಸಿದ ಅಕ್ರಮ ಗಳಿಕೆಯನ್ನು ವಶಪಡಿಸಿಕೊಳ್ಳಲಾಗುವುದು ಎಂದು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ: ಕರೂರ್ನಲ್ಲಿನ ಹೃದಯವಿದ್ರಾವಕ ಘಟನೆ, ನನಗೆ ಬೆಂಗಳೂರನ್ನು ನೆನಪಿಸಿತು ಎಂದ ಶಶಿ ತರೂರ್ | Karur Stampede
(ಏಜೆನ್ಸೀಸ್)
2007 ಮತ್ತು 2024 ರ ನಡುವೆ, ಟ್ಯಾಂಗ್ ಅವರು ಕೇಂದ್ರ ಮತ್ತು ಸ್ಥಳೀಯ ಮಟ್ಟದಲ್ಲಿ ತಮ್ಮ ವಿವಿಧ ಹುದ್ದೆಗಳ ಅನುಚಿತ ಲಾಭವನ್ನು ಪಡೆದು ವ್ಯವಹಾರ ಕಾರ್ಯಾಚರಣೆ, ಯೋಜನೆಯ ಗುತ್ತಿಗೆ ಮತ್ತು ಉದ್ಯೋಗದ ವಿಷಯಗಳಲ್ಲಿ ಇತರರಿಗೆ ಸಹಾಯ ಮಾಡಿದ್ದರು ಎಂದು ನ್ಯಾಯಾಲಯ ಹೇಳಿದೆ. ಇದೆಲ್ಲದರ ಆಧರಾದ ಮೇಲೆ ರಾಜ್ಯ ಮತ್ತು ಜನರ ಹಿತಾಸಕ್ತಿಗಳಿಗೆ ತೀವ್ರ ಹಾನಿಯನ್ನುಂಟುಮಾಡಿದ ಟ್ಯಾಂಗ್‌ನ ಅಪರಾಧಗಳು ಮರಣದಂಡನೆಗೆ ಅರ್ಹವೆಂದು ಚಾಂಗ್‌ಚುನ್ ನ್ಯಾಯಾಲಯ ತೀರ್ಪು ನೀಡಿದೆ.