ನವದೆಹಲಿ: ಕರೊನಾ ವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ವಿದೇಶಿ ಪ್ರಜೆಗಳಿಗೆ ನೀಡುವ ವೀಸಾದ ಮೇಲೆ ನಿರ್ಬಂಧ ವಿಧಿಸಿದೆ.
ಚೀನಾ, ಫ್ರಾನ್ಸ್, ಇಟಲಿ, ದಕ್ಷಿಣ ಕೊರಿಯಾ, ಜರ್ಮನಿ, ಸ್ಪೇನ್, ಜಪಾನ್ ಮತ್ತು ಇರಾನ್ ರಾಷ್ಟ್ರಗಳ ವೀಸಾವನ್ನು ತಾತ್ಕಾಲಿಕವಾಗಿ ಅಮಾನತುಪಡಿಸಿದೆ.
ಫ್ರಾನ್ಸ್, ಜರ್ಮನಿ, ಸ್ಪೇನ್ ರಾಷ್ಟ್ರಗಳ ಪ್ರಜೆಗಳು ಭಾರತಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ಈ ರಾಷ್ಟ್ರಗಳ ಪ್ರಜೆಗಳಿಗೆ ಈಗಾಗಲೇ ನೀಡಿರುವ ವೀಸಾಗಳನ್ನು ಅಮಾನತುಗೊಳಿಸಿದೆ.
ಮಾರ್ಚ್ 3 ಹಾಗೂ ಅದಕ್ಕೂ ಮೊದಲು ಚೀನಾ, ಜಪಾನ್, ದಕ್ಷಿಣ ಕೊರಿಯಾ, ಇಟಲಿ, ಇರಾನ್ ಪ್ರಜೆಗಳಿಗೆ ನೀಡಿದ್ದ ವೀಸಾಗಳನ್ನು ಕೂಡ ರದ್ದುಪಡಿಸಿದೆ.
ಕೆಲವು ತುರ್ತು ಪ್ರಯಾಣ ಇದ್ದರೆ ರಾಯಭಾರ ಕಚೇರಿ ಸಂಪರ್ಕಿಸಿ ತುರ್ತು ಪ್ರಯಾಣದ ವೀಸಾ ಪಡೆಯುವಂತೆ ಸಚಿವಾಲಯ ತಿಳಿಸಿದೆ.
ತುರ್ತು ಪ್ರಯಾಣ ಮಾಡಬೇಕಾದರು ತಮ್ಮ ರಾಷ್ಟ್ರಗಳ ಅಧಿಕೃತ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ ಒಳಗಾಗಿ ಪಡೆದ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದು ತಿಳಿಸಿದೆ. (ಏಜೆನ್ಸಿಸ್)