More

    ವಿಶ್ವಕ್ಕೆ ಅಂಟಿದ ಆತಂಕ ಕೊರೊನಾ; ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವರಿಗೂ ತಗುಲಿದೆ ಸೋಂಕು

    ಕೊರೊನಾ ವೈರಸ್​ ಬಹುತೇಕ ದೇಶಗಳಿಗೆ ವ್ಯಾಪಿಸಿದೆ. ಈ ವೈರಸ್​ ನಿಯಂತ್ರಣ, ಸೋಂಕಿತರ ಚಿಕಿತ್ಸೆ, ಅವರ ಮೇಲೆ ನಿಗಾ ಇಡುವ ಕಾರ್ಯವನ್ನು ಆಯಾ ದೇಶಗಳ ರಾಜ್ಯ, ಜಿಲ್ಲಾ, ತಾಲೂಕಾ ಮಟ್ಟದ ಆರೋಗ್ಯ ಸಿಬ್ಬಂದಿ ಕಟ್ಟುನಿಟ್ಟಾಗಿ ಮಾಡುತ್ತಿದ್ದಾರೆ.

    ಕೊರೊನಾ ಭಾರತಕ್ಕೂ ವ್ಯಾಪಿಸಿದ್ದು ಇಲ್ಲಿನ ಆಡಳಿತಗಳು ಕೂಡ ಹಲವು ಕ್ರಮಗಳನ್ನು ಕೈಗೊಂಡಿವೆ. ಜನರಲ್ಲಿ ಅರಿವು ಮೂಡಿಸುತ್ತಿವೆ.

    ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ ಹಲವು ದೇಶಗಳಲ್ಲಿ ಪ್ರತಿದಿನ ಒಂದು ಹೊಸ ಕೊರೊನಾ ಪ್ರಕರಣ ಪತ್ತೆಯಾಗುತ್ತಿದೆ. ಸದ್ಯ ಬ್ರಿಟಿಷ್​ ಕಿರಿಯ ಆರೋಗ್ಯ ಸಚಿವೆ ನಾಡಿನ್​ ಡೋರಿಸ್​ ಅವರಿಗೂ ಕೊರೊನಾ ಸೋಂಕು ತಗುಲಿದೆ. ತಮಗೆ ವೈರಸ್ ತಗುಲಿರುವ ಬಗ್ಗೆ ನಾಡಿನ್​ ಅವರು ಮಂಗಳವಾರ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

    ಕೊರೊನಾ ವೈರಸ್​ ತಗುಲಿದ್ದು ಖಚಿತವಾಗುತ್ತಿದ್ದಂತೆ ಚಿಕಿತ್ಸೆ ತೆಗೆದುಕೊಂಡಿದ್ದೇನೆ. ವೈದ್ಯರ ಸಲಹೆಯಂತೆ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ಮನೆಯಲ್ಲಿ ಪ್ರತ್ಯೇಕವಾಗಿ ಇದ್ದೇನೆ. ಯಾರ ಸಂಪರ್ಕಕ್ಕೂ ಹೋಗುತ್ತಿಲ್ಲ ಎಂದು ನಾಡಿನ್​ ಹೇಳಿದ್ದಾರೆ.

    ಕಳೆದ ವಾರ ನಾಡಿನ್​ ಡೋರಸ್​ ಅವರು ಸಂಸತ್ತಿನಲ್ಲಿ ಸುಮಾರು 100 ಜನರನ್ನು ಭೇಟಿಯಾಗಿದ್ದರು ಮತ್ತು ಆರತಕ್ಷತೆಯೊಂದರಲ್ಲಿ ಪ್ರಧಾನಿ ಬೋರಿಸ್​ ಜಾನ್ಸನ್​ ಅವರೊಂದಿಗೆ ಭಾಗಿಯಾಗಿದ್ದರು. ಸದ್ಯ ಅವರ ಸಂಪರ್ಕಕ್ಕೆ ಬಂಧವರನ್ನು ಪತ್ತೆಹಚ್ಚಲು ಅಲ್ಲಿನ ಸಾರ್ವಜನಿಕ ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ.

    ನಾಡಿನ್​ ಡೋರಿಸ್​ ಅವರಿಗೆ ಕೊರೊನಾ ವೈರಸ್​ ತಗುಲಿದ್ದು ತುಂಬ ಬೇಸರದ ಸಂಗತಿ. ಅವರು ತಮ್ಮಿಂದಾಗಿ ಇನ್ನೊಬ್ಬರಿಗೆ ಹರಡಬಾರದು ಎಂದು ಮನೆಯಲ್ಲಿ ಪ್ರತ್ಯೇಕವಾಗಿ ಉಳಿದುಕೊಂಡು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಬ್ರಿಟನ್​ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ಟ್ವೀಟ್​ ಮಾಡಿದ್ದಾರೆ.

    ಯುಕೆದಲ್ಲಿ ಕೊರೊನಾ ವೈರಸ್​ ಒಟ್ಟು 373 ಜನರಿಗೆ ತಗುಲಿದ್ದು ಮೃತರ ಸಂಖ್ಯೆ 6ಕ್ಕೆ ಏರಿದೆ.

    ವಿಶ್ವಕ್ಕೆ ಅಂಟಿದ ಆತಂಕ ಕೊರೊನಾ; ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವರಿಗೂ ತಗುಲಿದೆ ಸೋಂಕು

    Fact Check: 2,000 ರೂಪಾಯಿ ನೋಟುಗಳ ಬದಲಿಗೆ 1,000 ರೂ.ನೋಟುಗಳ ಚಲಾವಣೆ ಆಗುತ್ತಿದೆಯಾ?

    ಹುಲಿಯತ್ತ ವೃಷಭನ ಗಮನ: ರಾಜ್- ರಿಷಬ್ ಜೋಡಿಯ 2ನೇ ಪೋಸ್ಟರ್ ಬಂತು

    ಕರೊನಾ ವೈರಸ್​ ಎಫೆಕ್ಟ್​: ವಿದೇಶಿ ಪ್ರಜೆಗಳ ವೀಸಾ ಅಮಾನತುಪಡಿಸಿದ ವಿದೇಶಾಂಗ ಸಚಿವಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts