ಬೆಂಗಳೂರು: ಕರೊನಾ ವೈರಸ್ ಕುರಿತು ತಮ್ಮದೇ ಸ್ಟೈಲ್ನಲ್ಲಿ ಸಾಂಗ್ ಕಂಪೋಸ್ ಮಾಡಿ ಸ್ಟಾರ್ ದಂಪತಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜಾಗೃತಿ ಮೂಡಿಸಿದ್ದಾರೆ.
ಕರೋನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಹಾಸ್ಯತ್ಮಕ ರೀತಿಯಲ್ಲಿ ಚಂದನ್ ಶೆಟ್ಟಿ ಹಾಡಿದ್ದಾರೆ. ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರು ಸ್ವಲ್ಪ ತಡ್ಕಳಿ ಎಂಬ ಸಾಲಿನಿಂದ ಆರಂಭವಾಗುವ ಹಾಡಿಗೆ ನಿವೇದಿತಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಚಂದನ್- ನಿವೇದಿತಾ ಅವರ ಕರೊನಾ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಕರೊನಾ ವೈರಸ್ ಭೀತಿಯಿಂದಾಗಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಹನಿಮೂನ್ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಮರಳಿದರು.