ನ್ಯೂಸ್

ಕರೊನಾ ವೈರಸ್​ ಸೋಂಕು ತಡೆಯಲು ಗ್ರಾಮಸ್ಥರು ಮಾಡಿದ್ದಾದರೂ ಏನು?

ಚಾಮರಾಜನಗರ: ಕರೊನಾ ವೈರಸ್​ ಸೋಂಕು ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಲಾಕ್​ಡೌನ್​ಗೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದವರು ಉತ್ತಮವಾಗಿ ಸಹಕಾರ ನೀಡುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗುಂಡಿಮಾಳ ಗ್ರಾಮಕ್ಕೆ ಗ್ರಾಮಸ್ಥರು ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಗ್ರಾಮದಿಂದ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಿಗೆ ಬೇಲಿ ಹಾಕಿದ್ದಾರೆ. ಗ್ರಾಮದಿಂದ ಯಾರು ಹೊರ ಹೋಗದಂತೆ ಹಾಗೂ ಹೊರಗಡೆಯಿಂದ ಗ್ರಾಮ ಪ್ರವೇಶ ಮಾಡದಂತೆ ಡಂಗೂರ ಸಾರಿದ್ದಾರೆ.

ಅಗತ್ಯ ಇದ್ದಾಗ ಮಾತ್ರ ಹೊರ ಹೋಗುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಹೊರ ಹೋಗುವ ಮೊದಲು ಗ್ರಾಮದ ಉಸ್ತುವಾರಿ ವಹಿಸಿರುವವರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

ಕರೊನಾ ವೈರಸ್​ ಸೋಂಕು ಹರಡದಂತೆ ಮಾಡಲು ಗ್ರಾಮಗಳಲ್ಲಿ ಗ್ರಾಮಸ್ಥರು ಸ್ವತಃ ದಿಗ್ಬಂಧನ ಹೇರಿಕೊಳ್ಳುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)