ಹೈದ್ರಾಬಾದ್: ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಂದು ತಿಂಗಳ ಹಿಂದೆಯೇ ಮಿಲ್ಕಿಬ್ಯೂಟಿ ತಮನ್ನಾಗೆ ಕರೊನಾ ಸೋಂಕಿನ ಛಾಯೆ ಆವರಿಸಿತ್ತು. ಆಗಸ್ಟ್ ಕೊನೇ ವಾರದಲ್ಲಿ ತಮನ್ನಾರ ತಂದೆ ಸಂತೋಷ್ ಭಾಟಿಯಾ ಹಾಗೂ ತಾಯಿ ರಜನಿ ಭಾಟಿಯಾಗೆ ಸೋಂಕು ದೃಢಪಟ್ಟಿತ್ತು. ಈ ಬಗ್ಗೆ ಸ್ವತಃ ನಟಿಯೇ ತನ್ನ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. 'ಅಪ್ಪ-ಅಮ್ಮನಿಗೆ ಕರೊನಾ ಸೋಂಕು ತಗುಲಿದೆ. ನನ್ನ ವರದಿ ನೆಗೆಟಿವ್ ಬಂದಿದೆ. ನನ್ನ ಪಾಲಕರು ಶೀಘ್ರವೇ ಗುಣಮುಖರಾಗಲಿದ್ದಾರೆ. ನೀವು ದೇವರಲ್ಲಿ ಪ್ರಾರ್ಥಿಸಿ' ಎಂದು ಬರೆದುಕೊಂಡಿದ್ದರು. ಲಕ್ಷಾಂತರ ಅಭಿಮಾನಿಗಳು ಕೂಡ ನೆಚ್ಚಿನ ನಟಿಯ ಪಾಲಕರು ಶೀಘ್ರ ಗುಣವಾಗಲೆಂದು ಹಾರೈಸಿದ್ದರು.
ಇದನ್ನೂ ಓದಿರಿ ಎಲ್ಲ ಪ್ರಜೆಗಳಿಗೂ ಕೋವಿಡ್ಗೆ ಉಚಿತ ಲಸಿಕೆ ಕೊಡಲಿದೆ ಈ ದೇಶ!ಇದಾದ ಒಂದು ತಿಂಗಳ ಬಳಿಕ ತಮನ್ನಾ ಅವರಲ್ಲಿ ಕರೊನಾ ರೋಗ ಲಕ್ಷಣ ಕಾಣಿಸಿಕೊಂಡುತ್ತು. ಈ ಹಿನ್ನೆಲೆಯಲ್ಲಿ ಟೆಸ್ಟ್ ಮಾಡಿಸಿದ್ದು, ವರದಿಯು ಪಾಸಿಟಿವ್ ಬಂದಿದೆ. ವೈದ್ಯರ ಸಲಹೆ ಮೇರೆಗೆ ಹೈದ್ರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಬಾಹುಬಲಿ ಖ್ಯಾತಿಯ ನಟಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್ನಲ್ಲಿ ವೆಬ್ ಸರಣಿ ಚಿತ್ರಕ್ಕಾಗಿ ಇತ್ತೀಚಿಗೆ ಕೆಲ ದಿನಗಳಿಂದ ತಮನ್ನಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು.