ನ್ಯೂಸ್

‌ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ವಕ್ಕರಿಸಿದ ಕರೊನಾ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಷ್ಟುದಿನ ಪೊಲೀಸ್‌ ಠಾಣೆ, ಅಗ್ನಿಶಾಮಕ ದಳ, ಕೆಎಸ್​ಆರ್​ಪಿ, ಹೋಮ್​ ಗಾರ್ಡ್, ಸಿಸಿಬಿ, ಸಿಐಡಿ, ಎಸಿಬಿಗೆ ಕಾಡುತ್ತಿದ್ದ ಕರೊನಾ ಮಹಾಮಾರಿ ಇದೀಗ ನಗರದ ‌ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಾಲಿಟ್ಟಿದೆ.

ನಗರದ ಮಡಿವಾಳದ ಎಫ್​ಎಸ್ಎಲ್ ಕೇಂದ್ರ ಇಬ್ಬರು ಸಿಬ್ಬಂದಿಯಲ್ಲಿ ಕೋವಿಡ್​ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರನ್ನು ಕೋವಿಡ್​ ವಾರ್ಡ್​ಗೆ ಸೇರಿಸಲಾಗಿದ್ದು, ಎಫ್ಎಸ್ಎಲ್ ಕೇಂದ್ರವನ್ನು ಸ್ಯಾನಿಟೈಸ್​ ಮಾಡಲಾಗಿದೆ. ಇದನ್ನೂ ಓದಿರಿ ಬೆಂಗಳೂರಲ್ಲಿ 1928ರಲ್ಲೇ ಕಾಣಿಸಿಕೊಂಡಿತ್ತೊಂದು ರೋಗ… ಆಗಿನ ಕೌನ್ಸಿಲ್ ಆಡಳಿತ ಹೊರಡಿಸಿದ್ದ ಆದೇಶ ಪ್ರತಿ ಈಗ ವೈರಲ್

ಇಬ್ಬರು ಸಿಬ್ಬಂದಿಗೆ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನ ಎಫ್ಎಸ್ಎಲ್‌ ಕೇಂದ್ರವನ್ನು ಸೀಲ್​ಡೌನ್ ಮಾಡಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.