ನ್ಯೂಸ್

ಕರೊನಾಕ್ಕೆ ಬಲಿಯಾದ ಶಾಸಕ ಜಮೀರ್ ಆಪ್ತ- ರಾಮ್‌ದಾಸ್‌ ಆಪ್ತರಿಗೆ ಜ್ವರ

ಬೆಂಗಳೂರು: ಕ್ಷಣ ಕ್ಷಣಕ್ಕೂ ಕರೊನಾ ಇನ್ನಿಲ್ಲದಂತೆ ಆತಂಕ ಸೃಷ್ಟಿ ಮಾಡುತ್ತಲೇ ಇದೆ. ಬೆಂಗಳೂರಿನ ಚಾಮರಾಜಪೇಟೆ ಕರೊನಾ ಹಾಟ್‌ಸ್ಪಾಟ್‌ ಆಗಿದೆ.

ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ 55 ವರ್ಷದ ರಾಜಕೀಯ ಮುಖಂಡರೊಬ್ಬರು ಇಂದು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ರಾಯಪುರ ವಾರ್ಡ್‍ನಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದರು.

ಇವರಿಗೆ ಕಳೆದ ವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.. ಆಸ್ಪತ್ರೆಗೆ ದಾಖಲಾಗಿದ್ದಾಗ ಕರೊನಾ ಪಾಸಿಟಿವ್‌ ಬಂದಿತ್ತು.

ಅದೇ ರೀತಿ, ಕೆ.ಆರ್.ಪುರದ ಕಾಂಗ್ರೆಸ್‌ ಶಾಸಕ ರಾಮ್‍ದಾಸ್ ಅವರ ಇಬ್ಬರು ಆಪ್ತ ಸಹಾಯಕರಿಗೆ ಜ್ವರ, ನೆಗಡಿ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ನಾಳೆ ವರದಿ ಬರುವ ಸಾಧ್ಯತೆ ಇದೆ. ಶಾಸಕ ರಾಮ್‌ದಾಸ‌ ಅವರು ಇವರ ಒಡನಾಟದಲ್ಲಿದ್ದ ಹಿನ್ನೆಲೆಯಲ್ಲಿ ಇವರಿಗೂ ಈಗ ಭೀತಿ ಶುರುವಾಗಿದೆ ಎನ್ನಲಾಗಿದೆ.