ನ್ಯೂಸ್

ಪರ ಊರುಗಳಿಂದ ಕರೊನಾ ಸೋಂಕು ಹೊತ್ತು ತಂದವರಿಂದ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಆಪತ್ತು!

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದು 12 ಗಂಟೆಯವರೆಗೆ ರಾಜ್ಯದಲ್ಲಿ 22 ಹೊಸ ಕರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಹೆಚ್ಚಿನವು ಪರ ಊರುಗಳಿಂದ ಬಂದವರೇ ಆಗಿವೆ.

ಈ ಮೂಲಕ ಮುಂಬೈ ಹಾಗೂ ಅಹಮದಾಬಾದ್​ ಸೇರಿದಂತೆ ಕೆಲವು ಊರುಗಳಿಂದ ಬಂದವರಿಂದಾಗಿಯೇ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಇಲ್ಲಿಯವರೆಗೆ ಒಟ್ಟು 981 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 456 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದರೆ, ಇದಾಗಲೇ ಈ ಮಹಾಮಾರಿ 35 ಜೀವಗಳನ್ನು ಬಲಿ ಪಡೆದಿದೆ.

ಮುಂಬೈನಿಂದ ಮಂಡ್ಯಕ್ಕೆ ಬಂದಿರುವ ನಾಲ್ವರಲ್ಲಿ, ಬೀದರ್​ಗೆ ಬಂದಿರುವ 45 ವರ್ಷದ ಮಹಿಳೆಯಲ್ಲಿ ಹಾಗೂ ಬೆಳಗಾವಿಗೆ ಬಂದಿರುವ ಓರ್ವ ಯುವತಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದರೆ, ಅಹಮದಾಬಾದ್​ನಿಂದ ಗದಗಕ್ಕೆ ಬಂದಿರುವ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ.

ಬೀದರ್​ನ ಕಂಟೈನ್​ಮೆಂಟ್​ ಝೋನ್​ನಲ್ಲಿರುವ ಸಂಪರ್ಕಕ್ಕೆ ಬಂದಿರುವ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದನ್ನು ಹೊರತುಪಡಿಸಿದರೆ, ಬೆಂಗಳೂರು ನಗರದಲ್ಲಿ ಐದು, ಬಾಗಲಕೋಟೆಯಲ್ಲಿ ಒಂದು ಹಾಗೂ ದಾವಣಗೆರೆಯಲ್ಲಿ ಮೂರು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ಸಂಪೂರ್ಣ ವಿವರ ಇಲ್ಲಿದೆ: