ನ್ಯೂಸ್

ಠಾಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್​ ಅಧಿಕಾರಿ

rashmirhebbur

ನವದೆಹಲಿ : ಮೂವತ್ತೊಂದು ವರ್ಷ ವಯಸ್ಸಿನ ಪೊಲೀಸ್​ ಅಧಿಕಾರಿಯೊಬ್ಬರು ಠಾಣೆಯ ಒಳಗೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಿಂದ ವರದಿಯಾಗಿದೆ. ಪೂರ್ವ ದೆಹಲಿಯ ಪಾಂಡವನಗರ ಪೊಲೀಸ್​ ಠಾಣೆಯ ಸಬ್​ಇನ್ಸ್​ಪೆಕ್ಟರ್ ರಾಹುಲ್ ಸಿಂಗ್​ ಎಂಬುವರು ಮೃತ ದುರ್ದೈವಿ.

ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ರಾಹುಲ್​ ಸಿಂಗ್, ಆಗ್ರಾ ಮೂಲದವರಾಗಿದ್ದರು. ತಮ್ಮ ಕುಟುಂಬದೊಂದಿಗೆ ದೆಹಲಿಯಲ್ಲೇ ವಾಸವಾಗಿದ್ದರು. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹಾಜರಾದ ಸಿಂಗ್, ಗುಂಡು ಹಾರಿಸಿಕೊಂಡು ಸಾವಪ್ಪಿದರು ಎನ್ನಲಾಗಿದೆ.

ಹಿರಿಯ ಅಧಿಕಾರಿಗಳ ಶೋಷಣೆಯಿಂದ ಬೇಸತ್ತು ಸಿಂಗ್​ ಸಾವಿಗೆ ಶರಣಾಗಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದು, ಇಂದು ಠಾಣೆಯ ಹೊರಗೆ ಪ್ರತಿಭಟನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. (ಏಜೆನ್ಸೀಸ್)