ಕಾನ್ಪುರ: ಪೊಲೀಸರೇ ನನ್ನ ಎನ್ಕೌಂಟರ್ ಮಾಡ್ತಾರೆ, ನನಗೆ ಹಾಗೂ ನನ್ನ ಹೆಂಡತಿಗೆ ರಕ್ಷಣೆ ನೀಡಿ...!
ಇಂಥದ್ದೊಂದು ಮನವಿ ಮಾಡ್ತಾ ಇರೋದು ಯಾರೋ ಸಾಮಾನ್ಯ ವ್ಯಕ್ತಿಯಲ್ಲ ಅಥವಾ ಕುಖ್ಯಾತ ಅಪರಾಧಿಯೂ ಅಲ್ಲ. ಬದಲಿಗೆ ಒಬ್ಬ ಪೊಲೀಸ್ ಸಬ್ ಇನ್ಸ್ಪೆಕ್ಟರ್. ರಕ್ಷಣೆ ಕೋರಿ ಆತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ.
ಇದನ್ನೂ ಓದಿ; ಎಂಟು ಪೊಲೀಸರನ್ನು ಕೊಂದ ವಿಕಾಸ್ ದುಬೆಯದ್ದು ಮನೆಯಲ್ಲ, ಮದ್ದುಗುಂಡಿನ ಕಾರ್ಖಾನೆ; ಇಡೀ ಪ್ರದೇಶ ಸ್ಫೋಟಕ್ಕೆ ಸಂಚು
ಉತ್ತರಪ್ರದೇಶದ ಭಿಕ್ರು ಠಾಣೆಯ ಎಸ್ಐ ಕೆ. ಕೆ. ಶರ್ಮಗೆ ಜೀವ ಭಯ ಉಂಟಾಗಿದೆ. ಕಾರಣವೆನೆಂದರೆ, ಜುಲೈ 2 ರಂದು ಎಂಟು ಪೊಲೀಸರನ್ನು ಕೊಂದ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಪರಾರಿಯಾಗಲು ಈತನೇ ಮಾಹಿತಿ ನೀಡಿದ್ದ. ಸದ್ಯ ವಿಶೇಷ ತನಿಖಾ ತಂಡ ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.
ವಿಕಾಸ್ ದುಬೆಯನ್ನು ಬಂಧಿಸಿದ ದಿನವೇ, ಆತನ ಎನ್ಕೌಂಟರ್ ನಡೆಯುವ ಭೀತಿ ಇರುವುದಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ದಾಖಲಾಗಿತ್ತು. ದುಬೆಯನ್ನು ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಗ್ಯಾಂಗಸ್ಟರ್ನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇದೇ ರೀತಿ ನನ್ನನ್ನು ಕೊಲ್ಲಲಿದ್ದಾರೆ ಎಂದು ಆತ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಶರ್ಮಾ ತಿಳಿಸಿದ್ದಾನೆ.
ಇದನ್ನೂ ಓದಿ; ಆತ ಬ್ರಾಹ್ಮಣನಾಗಿದ್ದರಿಂದಲೇ ಇಷ್ಟೆಲ್ಲ ಚರ್ಚೆ; ವಿಕಾಸ್ ದುಬೆ ಎನ್ಕೌಂಟರ್ಗೆ ಕಾಂಗ್ರೆಸ್ ಹೊಸ ವ್ಯಾಖ್ಯಾನ
ಶರ್ಮಾ ಮಾತ್ರವಲ್ಲದೇ, ಚೌಬೆಪುರ ಠಾಣಾಧಿಕಾರಿ ವಿನಯ್ ತಿವಾರಿ ಕೂಡ ಪೊಲೀಸ್ ವಶದಲ್ಲಿದ್ದಾನೆ. ಈತನೂ ವಿಕಾಸ್ ದುಬೆ ಜತೆ ನಂಟು ಹೊಂದಿದ್ದಕ್ಕೆ ಸಾಕ್ಷ್ಯಗಳು ದೊರೆತಿವೆ.