ಇಂಫಾಲ್: ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ಬಿಜೆಪಿ ನಾಯಕನ ಸಾವಿನ ಬಗ್ಗೆ ವಿವಾದಾತ್ಮಕ ಪೋಸ್ಟ್ಗಳನ್ನು ಬರೆದದ್ದಕ್ಕಾಗಿ ಮಣಿಪುರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕಿಶೋರ್ಚಂದ್ರ ವಾಂಗ್ಖೆಮ್ ಎಂಬ ಪತ್ರಕರ್ತ ಮತ್ತು ಎರೇಂದ್ರೋ ಲೇಚೊಂಬಮ್ ಎಂಬ ರಾಜಕೀಯ ಕಾರ್ಯಕರ್ತ ಬಂಧಿತರು.
ಈರ್ವರೂ ಬಿಜೆಪಿ ರಾಜ್ಯಾಧ್ಯಕ್ಷ ಸೈಖೊಮ್ ಟಿಕೇಂದ್ರ ಸಿಂಗ್ ಅವರ ಸಾವಿನ ಬಗೆಗೆ ನಿಂದನಾತ್ಮಕ ಟೀಕೆಗಳನ್ನು ಪೋಸ್ಟ್ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳು ಸಲ್ಲಿಸಿದ ದೂರಿನ ಮೇಲೆ ಮಣಿಪುರ ಪೊಲೀಸರು ಮೇ 13 ರ ರಾತ್ರಿ ವಾಂಗ್ಖೆಮ್ ಮತ್ತು ಲೇಚೊಂಬಮ್ ಅವರನ್ನು ಅವರ ನಿವಾಸದಿಂದ ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತರನ್ನು ಮೇ 17 ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. (ಏಜೆನ್ಸೀಸ್)