ನ್ಯೂಸ್

ಸಂಬಂಧಗಳಿಗೆ ಬೆಲೆ ಇಲ್ವಾ? 65 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ! Controversial Marriage

Controversial Marriage : ಹರಿಯಾಣದ ಯಮುನಾ ನಗರ ಜಿಲ್ಲೆಯಲ್ಲಿ ನಡೆದ ವಿವಾಹವೊಂದು ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. 21 ವರ್ಷದ ಮೊಹಮ್ಮದ್ ಇರ್ಫಾನ್ ತಮ್ಮ 65 ವರ್ಷದ ಅಜ್ಜಿ ಸುಲ್ತಾನಾ ಖಾತೂನ್ ಅವರನ್ನು ವಿವಾಹವಾಗಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದು ಮಾಡುತ್ತಿದೆ.

ಸುಲ್ತಾನಾ ಖಾತೂನ್​ ಅವರ ಪತಿ ಮರಣದ ನಂತರ, ಇರ್ಫಾನ್ ಅವರನ್ನು ನೋಡಿಕೊಳ್ಳುತ್ತಿದ್ದಾಗ ಇಬ್ಬರ ನಡುವಿನ ಸಂಬಂಧ ಬಲವಾಯಿತು. ಕಾಲಾನಂತರದಲ್ಲಿ, ಅದು ಪ್ರೀತಿಯಾಗಿ ಮತ್ತು ಅಂತಿಮವಾಗಿ ಮದುವೆಗೆ ತಿರುಗಿತು ಎಂದು ಹೇಳಲಾಗುತ್ತಿದೆ.

ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದಾಗ ಅವರ ಸಂಬಂಧಿಕರು ಮತ್ತು ಗ್ರಾಮಸ್ಥರು ತುಂಬಾ ಶಾಕ್​ ಆದರು. ಇದು ಧಾರ್ಮಿಕವಾಗಿ ಅಥವಾ ಸಾಂಪ್ರದಾಯಿಕವಾಗಿ ಸ್ವೀಕರಿಸಲ್ಪಟ್ಟಿಲ್ಲದಿದ್ದರೂ, ಈ ಮದುವೆ ಎರಡೂ ಪಕ್ಷಗಳ ಒಪ್ಪಿಗೆಯೊಂದಿಗೆ ನಡೆದಿದೆ ಎಂದು ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಇಂತಹ ಮದುವೆಗಳಿಂದ ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ. ಭಾರತ ಎಂದರೆ, ಸಂಬಂಧಗಳಿಗೆ ಬೆಲೆ ಕೊಡುವ ನಾಡು. ಇದು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು, ಈ ರೀತಿ ಮಾಡಿ ನಾಡಿಗೆ ಕಳಂಕ ತರಬಾರದು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಆದಾಗ್ಯೂ, ಅನೇಕ ವರದಿಗಳ ಪ್ರಕಾರ ಈ ಹಿಂದೆಯೂ ಇಂತಹ ವಿಚಿತ್ರ ವಿವಾಹಗಳು ನಡೆದಿವೆ. ಹರಿಯಾಣದ 27 ವರ್ಷದ ಪ್ರವೀಣ್ ಎಂಬಾತ ಫೇಸ್‌ಬುಕ್‌ನಲ್ಲಿ ಪರಿಚಯವಾದ 65 ವರ್ಷದ ಅಮೆರಿಕನ್ ಮಹಿಳೆಯನ್ನು ವಿವಾಹವಾದನು. ವೃದ್ಧೆ ಅಮೆರಿಕದಿಂದ ತನ್ನ ಪ್ರಿಯಕರನಿಗಾಗಿ ಭಾರತಕ್ಕೆ ಬಂದು ಆತನನ್ನು ಮದುವೆಯಾದದ್ದು ಭಾರಿ ಸಂಚಲನ ಮೂಡಿಸಿತು.

ಕೆಲವರು ಅಂತಹ ವಿವಾಹಗಳನ್ನು ತಪ್ಪಾಗಿ ನೋಡಿದರೆ, ಇತರರು ಪ್ರೀತಿಗೆ ವಯಸ್ಸಿನ ಅಡ್ಡಿಯಲ್ಲ ಎಂದು ನಂಬುತ್ತಾರೆ. ಜಗತ್ತು ದಿನದಿಂದ ದಿನಕ್ಕೆ ಜಾಗತೀಕರಣಗೊಳ್ಳುತ್ತಿದೆ ಮತ್ತು ಇನ್ನು ಮುಂದೆ ನಾವು ಅಂತಹ ಸಂಬಂಧಗಳನ್ನು ಹೆಚ್ಚಾಗಿ ನೋಡುತ್ತೇವೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)