ಬೆಳಗಾವಿ: ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ತಡೆಹಾಕುವ ‘ಕರ್ನಾಟಕ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಮಸೂದೆ-2021’ ನ್ನು ಶಾಸನಸಭೆಯಲ್ಲಿ ಮಂಡಿಸುವ ಮಹತ್ವದ ತೀರ್ವನಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ಸಚಿವ ಜೆ.ಸಿ.ಮಧುಸ್ವಾಮಿ ಅವರು ಪ್ರಸ್ತಾವಿತ ಮಸೂದೆ ಯಲ್ಲಿ ಯಾವೆಲ್ಲ ಅಂಶಗಳಿವೆ ಎಂಬ ಅಂಶಗಳನ್ನು ಸಂಪುಟ ಸಹೋದ್ಯೋಗಿಗಳಿಗೆ ವಿವರಿ ಸುವ ಮೂಲಕ ಕೆಲವು ಗೊಂದಲ ಪರಿಹರಿಸಿದ್ದಾರೆ. ಜತೆಗೆ ಕಾಯ್ದೆಯ ಅನಿವಾರ್ಯತೆಯನ್ನು ವಿವರಿಸಿದ್ದಾರೆ.
ಒಗ್ಗಟ್ಟಿನ ನಿರ್ಣಯ: ಈ ವಿಧೇಯಕ ಮಂಡನೆಗೆ ಅವಕಾಶ ಕೊಡಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಜತೆಗೆ ಜೆಡಿಎಸ್ ಸಹಕಾರವೂ ಸಿಗುವುದಿಲ್ಲ. ಹೀಗಾಗಿ ಸಚಿವರು, ಪಕ್ಷದ ಶಾಸಕರೆಲ್ಲ ಒಟ್ಟಾಗಿ ಎದುರಿಸಬೇಕೆಂಬ ನಿರ್ಣಯಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಬೆಳಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಮಸೂದೆ ಮಂಡನೆ ಸಾಧ್ಯತೆ ಇದ್ದು, ಇದೇ ವೇಳೆ ಕಾಂಗ್ರೆಸ್ ಕಡೆಯಿಂದ ಶೇ.40 ಪರ್ಸೆಂಟೇಜ್ ಕಮಿಷನ್ ವಿಚಾರ ಎತ್ತಿಕೊಳ್ಳಲು ನಿರ್ಧಾರವಾಗಿದೆ. ಹೀಗಾಗಿ ಮಂಗಳವಾರದ ಬೆಳಗಿನ ಕಲಾಪ ಮಹತ್ವದ್ದೆನಿಸಿಕೊಳ್ಳಲಿದೆ.
· ಯಾವುದೇ ವ್ಯಕ್ತಿ ತನಗಿಷ್ಟವಾದ ಧರ್ಮ ಆಯ್ಕೆ ಮಾಡಿಕೊಳ್ಳಲು, ಆಚರಿಸಲು ಮುಕ್ತ. ಆದರೆ, ಆಮಿಷ, ಬಲವಂತ, ವಂಚನೆಗಳ ಮೂಲಕ ಮತಾಂತರ ಮಾಡುವುದು ಕಾನೂನಿನ ಅಡಿ ಅಪರಾಧ
· ಬಲವಂತದ ಮತಾಂತರ ಜಾಮೀನುರಹಿತ ಅಪರಾಧ
· ಮತಾಂತರ ಸಾಬೀತಾದರೆ ಮತಾಂತರ ಮಾಡಿದ ವ್ಯಕ್ತಿಯಿಂದ ಮತಾಂತರ ಗೊಂಡ ವ್ಯಕ್ತಿ 5 ಲಕ್ಷ ರೂ.ವರೆಗೆ ಪರಿಹಾರ ಪಡೆಯುವ ಅವಕಾಶ
· ಮತಾಂತರವನ್ನೇ ವೃತ್ತಿ ಮಾಡಿಕೊಂಡು ಎರಡನೇ ಬಾರಿ ಸಿಕ್ಕಿಬಿದ್ದರೆ ಶಿಕ್ಷೆ ಪ್ರಮಾಣ ದುಪ್ಪಟ್ಟು, ವಸ್ತು, ಹಣ ಉಡುಗೊರೆ, ಉದೊ್ಯೕಗ, ಉಚಿತ ಶಿಕ್ಷಣ, ಮದುವೆಯಾಗುವ ಆಮಿಷ, ಉತ್ತಮ ಜೀವನಶೈಲಿ, ಭಾವನಾತ್ಮಕವಾಗಿ ಸೆಳೆಯುವುದು ಅಪರಾಧವಾಗಲಿದೆ.
· ವಿವಾಹದ ಆಮಿಷ ಒಡ್ಡಿ ಮತಾಂತರ ಮಾಡಿ ಮದುವೆಯಾಗಿದ್ದರೆ ಆ ವಿವಾಹವನ್ನೇ ಅಸಿಂಧುಗೊಳಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಅಧಿಕಾರ
· ಎಸ್ಸಿಎಸ್ಟಿ ಸಮುದಾಯದ ವ್ಯಕ್ತಿಗಳು, ಅಪ್ರಾಪ್ತರು, ಮಹಿಳೆ, ಬುದ್ಧಿಮಾಂದ್ಯರು ಸೇರಿ ದುರ್ಬಲ ವರ್ಗಗಳ ಬಲವಂತದ ಮತಾಂತರಕ್ಕೆ 3 ವರ್ಷದಿಂದ 10 ವರ್ಷದವರೆಗೆ ಜೈಲು, 50 ಸಾವಿರ ರೂ.ವರೆಗೆ ದಂಡ
· ಸಾಮೂಹಿಕವಾಗಿ ಬಲವಂತದ ಮತಾಂತರ ಮಾಡಿದಲ್ಲಿ 3ರಿಂದ 10 ವರ್ಷದವರೆಗೆ ಜೈಲು, 1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ
· ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ವೖದ್ಧಾಶ್ರಮ, ಆಸ್ಪತ್ರೆ, ಧಾರ್ಮಿಕ ವಿಷನರಿಗಳು, ಎನ್ಜಿಒಗಳು ಇಂತಹ ಕೖತ್ಯಗಳಲ್ಲಿ ಭಾಗಿಯಾದರೆ ಸರ್ಕಾರದ ಅನುದಾನ ಸ್ಥಗಿತ
· ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಒಳಗೊಂಡ ಸಮಗ್ರ ಕರ್ನಾಟಕಕ್ಕೆ ಭರಪೂರ ನೆರವು ನೀಡುವ ತೀರ್ವನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಗೊಂಡಿದ್ದಾರೆ.
· ನೀರಾವರಿ, ರೈಲ್ವೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಸಂಬಂಧ ಮಹತ್ವದ ಯೋಜನೆಗಳಿಗೆ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಸುಮಾರು 2667 ಕೋಟಿ ರೂ. ಮೊತ್ತದ ಯೋಜನೆಗೆ ಅನುಮತಿಸಲಾಗಿದೆ.
· ಧಾರವಾಡ, ಕಿತ್ತೂರು, ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣ (73 ಕಿಮೀ)ಕ್ಕೆ 927.40 ಕೋಟಿ ರೂ. ಯೋಜನೆಗೆ ಅನುಮೋದನೆ
· ಜಲಜೀವನ್ ಮಿಷನ್ ಯೋಜನೆಯಡಿ ಹಾವೇರಿ ಜಿಲ್ಲೆಯ ಹಾವೇರಿ, ಸವಣೂರು, ಶಿಗ್ಗಾವ್ ಮತ್ತು ಹಾನಗಲ್ ತಾಲೂಕುಗಳ 285 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು
· 645 ಕೋಟಿ ರೂ. ವೆಚ್ಚದಲ್ಲಿ ಡಿಬಿಒಟಿ ಆಧಾರದ ಮೇಲೆ ಯೋಜನೆ ಅನುಷ್ಠಾನ
ಬೆಳಗಾವಿ: ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಮನ ನೀಡಬೇಕೆಂದು ಸದನದಲ್ಲಿ ತೀವ್ರ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಮಂಗಳವಾರ ಇಡೀ ದಿನ ಸಮಸ್ಯೆ ಆಲಿಸಲು ಅವಕಾಶ ಕಲ್ಪಿಸುವುದಾಗಿ ವಿಧಾನಪರಿಷತ್ ಸಭಾಪತಿ ಭರವಸೆ ನೀಡಿದ್ದಾರೆ. ವರ್ಷಗಳ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಅತಿವೃಷ್ಟಿಯಿಂದಾಗಿ ಈ ಭಾಗ ಹಲವು ಸಮಸ್ಯೆ ಎದುರಿಸುತ್ತಿದೆ. ಅಧಿವೇಶನದಲ್ಲಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲವೆಂದು ಜನರು ಬೇಸರ ಮಾಡಿಕೊಂಡಿದ್ದಾರೆ. ತಕ್ಷಣ ಈ ವಿಷಯವನ್ನು ಕೈಗೆತ್ತುಕೊಳ್ಳಬೇಕೆಂದು ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಒತ್ತಾಯಿಸಿದರು. ಲಕ್ಷ್ಮಣ ಸವದಿ ಮಾತನಾಡಿ, ಅಧಿವೇಶನ ಆರಂಭವಾಗಿ ಒಂದು ವಾರ ಕಳೆದಿದೆ. ಅಲ್ಲದೆ, ಬೆಳಗಾವಿ ಜಿಲ್ಲೆ ಗಡಿಭಾಗದ ಅಭಿವೃದ್ಧಿ, ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ಬದ್ಧವಾಗಿದ್ದು, ಮಹಾರಾಷ್ಟ್ರದಲ್ಲಿನ ಕನ್ನಡ ಶಾಲೆಗಳ ಸಮಸ್ಯೆ ಬಗೆಹರಿಸುವುದಕ್ಕೆ ಸರ್ಕಾರ ಪ್ರಾಮಾಣಿಕವಾದ ಪ್ರಯತ್ನ ಮಾಡಲಿದೆ ಎಂದು ಬೊಮ್ಮಾಯಿ ಭರವಸೆ ನೀಡುವ ಮೂಲಕ ರಾಜಕೀಯ ಪಕ್ಷಗಳು ಮತ್ತು ಜನ-ಸಾಮಾನ್ಯರನ್ನು ವಿಶ್ವಾಸಕ್ಕೆ ಪಡೆಯುವ ಕಸರತ್ತು ನಡೆಸಿದರು.
ಜೀವಂತವಾಗಿಡುವ ಸಂಚು: ಅಹಿತಕರ ಘಟನೆ ಕುರಿತು ಸದನದಲ್ಲಿ ನಡೆದ ಸುದೀರ್ಘ ಚರ್ಚೆಗೆ ಸಿಎಂ ಬೊಮ್ಮಾಯಿ ಉತ್ತರಿಸಿ, ಗಡಿ ವಿವಾದ ಜೀವಂತವಾಗಿಡುವುದು ಮಹಾರಾಷ್ಟ್ರ ರಾಜಕಾರಣಕ್ಕೆ ಬಂಡವಾಳವಾಗಿದೆ. ಕನ್ನಡಿಗರು, ಮರಾಠಿಗರ ಮಧ್ಯೆ ಸಮಸ್ಯೆಯಿಲ್ಲ, ವಿಶ್ವಾಸಕ್ಕೂ ಕೊರತೆಯಿಲ್ಲ. ರಾಜಕೀಯ ಹಿತಾಸಕ್ತಿಗಾಗಿ ಇಂತಹ ಪುಂಡಾಟಿಕೆ ನಡೆಸಲಾಗುತ್ತಿದ್ದು, ಅಶಾಂತಿ ಹಾಗೂ ಅಸ್ಥಿರತೆ ಸೃಷ್ಟಿಸುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಬೆಳಗಾವಿ ಜಿಲ್ಲೆ 3 ರಾಜ್ಯಗಳ ಕೇಂದ್ರ ಬಿಂದು, ಸಮೃದ್ಧವಾದ ನಿಸರ್ಗ ಸಂಪತ್ತು ಹೊಂದಿದೆ. ಪ್ರಮುಖ ವ್ಯಾಪಾರ-ವಹಿವಾಟು ಕೇಂದ್ರವಾಗಿ ಬೆಳೆಯುತ್ತಿದ್ದು, ರಕ್ಷಣಾ ಪಡೆಗಳ ನೆಲೆಯಲ್ಲಿ ವ್ಯೂಹಾತ್ಮಕ ತಾಣವಾಗಿದೆ ಬೊಮ್ಮಾಯಿ ಹೇಳಿದರು. ಮಹನೀಯರ ಪ್ರತಿಮೆ ಅಪಮಾನಿಸುವುದು ಪ್ರವೃತ್ತಿಯಾಗಿದ್ದು, ಹಿಂಸಾಕೃತ್ಯಕ್ಕೆ ಪ್ರಚೋದನೆ, ರಾಜ್ಯಗಳ ಮಧ್ಯೆ ಸಂಘರ್ಷದ ಕಿಡಿ ಹೊತ್ತಿಸಿ, ದೇಶದಲ್ಲಿ ಅಶಾಂತಿ ಮತ್ತು ಅಸ್ಥಿರತೆ ಹುಟ್ಟಿಹಾಕುವ ಪೂರ್ವಯೋಜಿತ ಸಂಚು ಇದಾಗಿದೆ. ಬೆಳಗಾವಿಯಲ್ಲಿ ರಾಯಣ್ಣ ಮತ್ತು ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನಿಸಿದ್ದರ ಹಿಂದೆ ಇದೇ ಪಿತೂರಿ ಅಡಗಿದೆ. 2 ಪ್ರಕರಣಗಳಲ್ಲಿ ಶಾಮೀಲಾದ ಮೂಲ ವ್ಯಕ್ತಿ ಮತ್ತು ಸಂಘಟನೆಗಳ ಪ್ರಮುಖರನ್ನು ಬಂಧಿಸಿದ್ದು, ಸಮಗ್ರ ತನಿಖೆಯ ಬಳಿಕ ಜನರ ಎದುರು ವರದಿ ಇಡುವೆ ಎಂದು ಬೊಮ್ಮಾಯಿ ಹೇಳಿದರು.
ಮುಕ್ತ ಆಹ್ವಾನ: ಮಹಾರಾಷ್ಟ್ರದ ಕನ್ನಡ ಭಾಷಿಕರು ಹೆಚ್ಚಿರುವ ಪ್ರದೇಶದ ಜನರು ಕರ್ನಾಟಕಕ್ಕೆ ಸೇರಲು ಬಯಸಿದರೆ ಮುಕ್ತವಾಗಿ ಆಹ್ವಾನ ನೀಡುತ್ತೇವೆ. ಅವರ ರಕ್ಷಣೆ ಮತ್ತು ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದ ಸಿಎಂ ಬೊಮ್ಮಾಯಿ, ಮಹಾರಾಷ್ಟ್ರದ ಜತ್ ತಾಲೂಕಿನ 40 ಗ್ರಾ.ಪಂ.ಗಳು ಕರ್ನಾಟಕಕ್ಕೆ ಸೇರುವ ಗೊತ್ತುವಳಿ ಪಾಸು ಮಾಡಿರುವುದನ್ನು ಉಲ್ಲೇಖಿಸಿದರು.
ಎಂಇಎಸ್ ದುರ್ಬಲ: ಬೆಳಗಾವಿ ಜಿಲ್ಲೆ ಸಮಗ್ರ ಅಭಿವೃದ್ಧಿ, ಕನ್ನಡಿಗರು ಮತ್ತು ಮರಾಠಿಗರ ನಡುವಿನ ಸಾಮರಸ್ಯದಿಂದ ಎಂಇಎಸ್ ಜನರ ಬೆಂಬಲ ಕಳೆದುಕೊಂಡು ದುರ್ಬಲವಾಗಿದ್ದು, ರಾಜಕೀಯವಾಗಿ ಅಸ್ತಿತ್ವ ಕಂಡುಕೊಳ್ಳುವ ಈ ಸಂಘಟನೆ ಪ್ರಯತ್ನವನ್ನು ಪಕ್ಷಬೇಧ ಮರೆತು ಹಿಮ್ಮೆಟ್ಟಿಸಬೇಕಾಗಿದೆ ಎಂದು ಸಿಎಂ ಬೊಮ್ಮಾಯಿ ಒಗ್ಗಟ್ಟಿನ ಮಾತನಾಡಿದರು.
ಜೆಡಿಎಸ್ ಕನ್ನಡ ತುತ್ತೂರಿ: ಅಹಿತಕರ ಘಟನೆ ಖಂಡನೆ, ಕನ್ನಡಿಗರ ಹಿತರಕ್ಷಣೆಯಲ್ಲಿ ತಾವೇ ಮುಂದೆ ಎಂದು ಬಿಂಬಿಸುವುದಕ್ಕೆ ಜೆಡಿಎಸ್ ಹಾತೊರೆಯಿತು. ಕನ್ನಡ ಬಾವುಟ ಹೆಗಲಿಗೆ ಹಾಕಿಕೊಂಡು ವಿಧಾನಸಭೆ ಕಲಾಪದಲ್ಲಿ ಪಕ್ಷದ ಸದಸ್ಯರು ಪಾಲ್ಗೊಂಡಿದ್ದರೆ, ಕೆ.ಅನ್ನದಾನಿ ಕಪು್ಪ ಅಂಗಿ ಧರಿಸಿದ್ದರು. ಕನ್ನಡ ಕನ್ನಡ ಎಂದು ಪದೇ ಪದೇ ಘೋಷಣೆ ಮೊಳಗಿಸಿದರು.