ನ್ಯೂಸ್

ಮದುವೆಗೆ ಕೆಲ ದಿನವಿರುವಾಗ ಓಡಿಹೋದ ಮಗಳು! ನೋವು ತಾಳಲಾರದೆ ತಂದೆ ತಾಯಿ ಆತ್ಮಹತ್ಯೆ

Mandara

ಹೈದರಾಬಾದ್: ಇನ್ನೇನು ಕೆಲ ದಿನಗಳಲ್ಲಿ ಮದುವೆಯಾಗಿ ಗಂಡನ ಮನೆ ಸೇರಬೇಕಿದ್ದ ಮಗಳು ಬಾಯ್ ಫ್ರೆಂಡ್ ಜತೆ ಓಡಿಹೋದ ಹಿನ್ನೆಲೆಯಲ್ಲಿ ತಂದೆ ತಾಯಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.

ಸಂಗಾ ರೆಡ್ಡಿ ಹಾಗೂ ಅವರ ಪತ್ನಿ ಮೃತರು. ಸಂಗಾ ರೆಡ್ಡಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೊದಲನೇ ಮಗಳಿಗೆ ನಿಶ್ಚಿತಾರ್ಥವಾಗಿತ್ತು. ಎರಡನೇ ಹೆಣ್ಣು ಮಗಳಿಗೂ ಗಂಡು ಹುಡುಕುವ ವೇಳೆ ಅವಳ ಪ್ರೀತಿಯ ವಿಚಾರ ಹೊರಬಿದ್ದಿದೆ. ಅದಕ್ಕೆ ಒಪ್ಪದ ಕುಟುಂಬ ಅವಳಿಗೆ ಬೇರೆ ಹುಡುಗನನ್ನು ಹುಡುಕಿ ಮದುವೆ ಫಿಕ್ಸ್ ಮಾಡಿದೆ. ಮದುವೆಗೆ ಆಮಂತ್ರಣ ಪತ್ರ ಮಾಡಿಸಿ ಎಲ್ಲರಿಗು ಆಹ್ವಾನಿಸಲಾಗಿದೆ. ಆದರೆ ಅಷ್ಟರಲ್ಲಿ ಆಕೆ ಓಡಿ ಹೋಗಿದ್ದಾಳೆ.

ಮಗಳು ಓಡಿಹೋದ ನೋವು ತಾಳಲಾರದೆ ಗಂಡ ಹೆಂಡತಿ ಇಬ್ಬರು ಮನೆ ಹತ್ತಿರದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಬರೆದಿಲ್ಲವಾದರೂ ಕುಟುಂಬಸ್ಥರ ಹೇಳಿಕೆಯ ಮೇರೆಗೆ ಸಾವಿಗೆ ಕಾರಣವನ್ನು ಊಹಿಸಲಾಗಿದೆ. (ಏಜೆನ್ಸೀಸ್)