ಭೋಪಾಲ್: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಇದೀಗ ಮತ್ತೊಂದು ಹಾಸ್ಯಸ್ಪದ ಕೆಲಸ ಮಾಡಿ, ಆಡಳಿತ ಪಕ್ಷದಿಂದ ವ್ಯಂಗ್ಯವಾಡಿಸಿಕೊಂಡಿದೆ. ಮಧ್ಯಪ್ರದೇಶ ಕಾಂಗ್ರೆಸ್ ಟ್ರ್ಯಾಕ್ಟರ್ ಮೆರವಣಿಗೆ ಆಯೋಜನೆ ಮಾಡಿದ್ದು ಆದರೆ ಮೆರವಣಿಗೆಯ ದಿನ ಪ್ಲಾಸ್ಟಿಕ್ ಟ್ರ್ಯಾಕ್ಟರ್ ಪ್ರದರ್ಶಿಸುವ ಮೂಲಕ ನಗೆಪಾಟಲಿಗೆ ಸಿಲುಕಿಕೊಂಡಿದೆ.
ಇದನ್ನೂ ಓದಿ: ಸರ್ಪೈಸ್ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್ ಶಾಕ್! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?
ಮಧ್ಯಪ್ರದೇಶದಲ್ಲಿ ಸೋಮವಾರದಂದು ವಿಧಾನಸಭಾ ಅಧಿವೇಶನ ನಿಗದಿ ಮಾಡಲಾಗಿತ್ತು. ಇದೇ ಸಮಯದಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಮಾಡಿ, ವಿಧಾನಸಭೆಗೆ ಮುತ್ತಿಗೆ ಮಾಡಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಅಧಿವೇಶನವನ್ನು ಮುಂದೂಡಲಾಗಿದೆ. ಅದೇ ಹಿನ್ನೆಲೆಯಲ್ಲಿ ಮೆರವಣಿಗೆಯನ್ನೂ ಮುಂದೂಡಲಾಗಿದೆ. ಆದರೆ ಮಕ್ಕಳ ಆಟಿಕೆಯ ಟ್ರ್ಯಾಕ್ಟರ್ಗಳನ್ನು ಹಿಡಿದ ಕಾಂಗ್ರೆಸ್ ನಾಯಕರು ವಿಧಾನಸಭೆಯ ಗಾಂಧಿ ಪ್ರತಿಮೆ ಮುಂದೆ ಕುಳಿತು ಆಟಿಕೆ ಪ್ರದರ್ಶಿಸಿದ್ದಾರೆ.
ಕಾಂಗ್ರೆಸ್ನ ಈ ವಿಶೇಷ ಪ್ರದರ್ಶನವನ್ನು ಕಂಡ ಬಿಜೆಪಿ ವ್ಯಂಗ್ಯವಾಡಿದೆ. ಕಾಂಗ್ರೆಸ್ನ ಹಿರಿಯ ಮಗ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಕುಳಿತಿದ್ದಾರೆ. ಅವರ ಮನವೊಲಿಸಲಿ ಮತ್ತು ವಾಪಾಸು ಕರೆಸಲು ಕಮಲ ನಾಥ ಅವರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಈ ರೀತಿ ಆಟಿಕೆ ತೋರಿಸಿದರೆ ಆಲೂಗಡ್ಡೆಯನ್ನು ಇಷ್ಟಪಡುವ ರಾಹುಲ್ ಗಾಂಧಿ ಅವರು ಇದನ್ನೂ ಇಷ್ಟ ಪಡುತ್ತಾರೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್)