ಕೋಲಾರ: ಬ್ಯಾನರ್ನಲ್ಲಿ ತಮ್ಮ ನಾಯಕರ ಫೋಟೋ ಅಳವಡಿಕೆ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಮಾತಿಗೆ ಮಾತು ಬೆಳೆದು ಹಾಜರಾಗಿದ್ದ ಕಛೇರಿಯಲ್ಲೇ ಬಡಿದಾಡಿಕೊಂಡ ಘಟನೆ ಕೋಲಾರದಲ್ಲಿ ವರದಿಯಾಗಿದೆ.
ಬ್ಯಾನರ್ನಲ್ಲಿ ನಾಯಕರ ಪೋಟೋ ಅಳವಡಿಕೆ ವಿಚಾರದಲ್ಲಿ ಜಟಾಪಟಿ ಭುಗಿಲೆದ್ದಿದೆ. ಕೋಲಾರ ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಬಣ ಮತ್ತು ಊರುಬಾಗಿಲು ಶ್ರೀನಿವಾಸ್ ಗುಂಪಿನ ನಡುವೆ ಹೊಡೆದಾಟ ಸಂಭವಿಸಿದೆ.
ಚುನಾವಣಾ ದಿನದಂದು ಬೂತ್ಗಳಿಗೆ ಏಜೆಂಟ್ ನೇಮಕದ ಬಗ್ಗೆ ಕೆಪಿಸಿಸಿ ಕೋಲಾರ ಕಾಂಗ್ರೆಸ್ ಕಛೇರಿಯಲ್ಲಿ ಪಕ್ಷದ ಉಸ್ತುವಾರಿ ರಾಜ್ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಫ್ಲೆಕ್ಸ್ನಲ್ಲಿ ಯಾವುದೇ ನಾಯಕರ ಪೋಟೋ ಇಲ್ಲದಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದು, ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ.