ನ್ಯೂಸ್

Rahul Gandhi: ಕ್ಷೌರದಂಗಡಿಯಲ್ಲಿ ಕಾಣಿಸಿಕೊಂಡ 'ಕೈ' ಅಗ್ರನಾಯಕ: ಗಡ್ಡ ಟ್ರಿಮ್​ ಮಾಡುವಾಗ ಕ್ಷೌರಿಕನಿಗೆ ಹೇಳಿದ್ದೇನು?

ನವದೆಹಲಿ: ರಾಜಕೀಯದಲ್ಲಿ ಸದಾ ಬ್ಯುಸಿಯಾಗಿರುವ ರಾಹುಲ್ ಗಾಂಧಿ(Rahul Gandhi) ದೆಹಲಿಯ ಕ್ಷೌರದಂಗಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಯ ಸಂದರ್ಭದಲ್ಲಿ ತುಂಬಾ ಬ್ಯುಸಿಯಾಗಿದ್ದ ರಾಹುಲ್ ದೆಹಲಿಯ ಸರಳ ಸಲೂನ್ ಅಂಗಡಿಯಲ್ಲಿ ಟ್ರಿಮ್ಮಿಂಗ್ ಮಾಡಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕ್ಷೌರಿಕರು ಅಜಿತ್‌ ರನ್ನು ಮಾತನಾಡಿಸಿ ಅವರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಳಿದ್ದಾರೆ. ರಾಹುಲ್ ಕ್ಷೌರಿಕನ ಅಂಗಡಿಯಲ್ಲಿ ಟ್ರಿಮ್ ಮಾಡಿಸುತ್ತಿರುವ ವಿಡಿಯೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ಷೌರಿಕರು ತಮ್ಮ ಕಷ್ಟಗಳ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದರು ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಬೆಲೆ ಏರಿಕೆ ಮತ್ತು ಆದಾಯ ಕುಸಿತದಿಂದ ಬಡವರು ಮತ್ತು ಮಧ್ಯಮ ವರ್ಗದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸ್ವಯಂ ಉದ್ಯೋಗಿಗಳು, ಸ್ವಾಭಿಮಾನದಿಂದ ಬದುಕಬೇಕು ಎನ್ನುವವರ ಕನಸುಗಳು ನನಸಾಗುತ್ತಿಲ್ಲ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಆದಾಯವನ್ನು ಹೆಚ್ಚಿಸುವ ಮಾರ್ಗವನ್ನು ತೋರಿಸುವುದು, ಅವರ ಕೌಶಲ್ಯಗಳನ್ನು ಸಮರ್ಪಕವಾಗಿ ಪುರಸ್ಕರಿಸಬೇಕು ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ ಕೇಳಿಕೊಂಡಿದ್ದಾರೆ.

ರಾಹುಲ್ ಗಾಂಧಿ ಆಗಾಗ ವಿವಿಧ ವಲಯಗಳ ಕಾರ್ಮಿಕರು ಹಾಗೂ ದಿನಗೂಲಿ ನೌಕರರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹಲವು ನಿದರ್ಶನಗಳಿವೆ. ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಅವರು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕ್ಷೌರದ ಅಂಗಡಿಗೆ ಭೇಟಿ ನೀಡಿ ತಮ್ಮ ಕೂದಲನ್ನು ಕತ್ತರಿಸಿ ಟ್ರಿಮ್ ಮಾಡಿಕೊಂಡಿದ್ದಾರೆ.

ಪ್ರಸ್ತುತ ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಚುನಾವಣೆಯ ವೇಳೆ ರಾಹುಲ್ ರಾಷ್ಟ್ರ ರಾಜಧಾನಿಯ ಕ್ಷೌರದಂಗಡಿಗೆ ಭೇಟಿ ನೀಡಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಸ್ಥಿತಿಯ ಬಗ್ಗೆ ತಿಳಿಸಲು ಈ ಟ್ವೀಟ್ ಮಾಡಿದ್ದಾರೆ ಎಂದು ತೋರುತ್ತದೆ.